ADVERTISEMENT
Saturday, March 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಐಸಿಸಿ ಏಕದಿನ ರ‍್ಯಾಂಕಿಂಗ್: ಬುಮ್ರಾ ಕುಸಿತ, ರಾಹುಲ್ ರಾಕಿಂಗ್

saaksha tv by saaksha tv
February 13, 2020
in Newsbeat, Sports
kohli bumra
Share on FacebookShare on TwitterShare on WhatsappShare on Telegram

bumraಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ ತಮ್ಮ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಕಿವೀಸ್ ವಿರುದ್ಧದ ಪಂದ್ಯಗಳಲ್ಲಿ ವಿಕೆಟ್ ಪಡೆಯಲು ಪರದಾಡಿದ ಬುಮ್ರಾ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ 719 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮತ್ತೊಂಡೆದೆ ಗಾಯದ ಸಮಸ್ಯೆಯಿಂದ ಭಾರತದ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಕಿವೀಸ್ ಬೌಲರ್ ಟ್ರೆಂಟ್ ಬೌಲ್ಟ್ 727 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಐಸಿಸಿ ಏಕದಿನ ರ‍್ಯಾಂಕಿಂಗ್‌ ಬೌಲರ್‌ಗಳ ಟಾಪ್‌ 5 ಪಟ್ಟಿ

Related posts

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

March 27, 2026
ವಾಹನ ನೋಂದಣಿ ತೆರಿಗೆ ಇಳಿಕೆ: ತಿದ್ದುಪಡಿ ವಿಧೇಯಕ ಅಂಗೀಕಾರ

ವಾಹನ ನೋಂದಣಿ ತೆರಿಗೆ ಇಳಿಕೆ: ತಿದ್ದುಪಡಿ ವಿಧೇಯಕ ಅಂಗೀಕಾರ

March 27, 2026

1. ಟ್ರೆಂಟ್‌ ಬೌಲ್ಟ್‌ (ನ್ಯೂಜಿಲೆಂಡ್‌): 727 ಅಂಕ

2. ಜಸ್‌ಪ್ರೀತ್‌ ಬುಮ್ರಾ (ಭಾರತ): 719 ಅಂಕ

3. ಮುಜೀಬ್‌ ಉರ್‌ ರೆಹಮಾನ್‌ (ಅಫಘಾನಿಸ್ತಾನ): 701 ಅಂಕ

4. ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ): 674 ಅಂಕ

5. ಪ್ಯಾಟ್‌ ಕಮಿನ್ಸ್‌ (ಆಸ್ಟ್ರೇಲಿಯಾ): 673 ಅಂಕ

ನ್ಯೂಜಿಲೆಂಡ್ ಸರಣಿಯಲ್ಲಿ ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತದ ನಾಯಕ ವಿರಾಟ್ ಕೊಹ್ಲಿ,ರೇಟಿಂಗ್ ಪಾಯಿಂಟ್‌ಗಳನ್ನು ಕಳೆದುಕೊಂಡಿದ್ದಾರೆ. ಆದರೂ ತಮ್ಮ ಪ್ರಥಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರೋಹಿತ್ ಶರ್ಮಾ (855 ರೇಟಿಂಗ್) ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಕಿವೀಸ್ ಬ್ಯಾಟ್ಸ್‌ಮನ್‌ ರಾಸ್ ಟೇಲರ್ ಒಂದು ಸ್ಥಾನ ಮೇಲೇರಿ 4ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಇನ್ನು ಬೊಂಬಾಟ್ ಲಯದಲ್ಲಿರುವ ಕನ್ನಡಿಗ ಕೆ.ಎಲ್ ರಾಹುಲ್ ಟೂರ್ನಿಯಲ್ಲಿ ಒಂದು ಶತಕದೊಂದಿಗೆ 204 ರನ್ ಬಾರಿಸಿದ್ದಾರೆ. ಇವರು 13 ಸ್ಥಾನಗಳ ಜಿಗಿತ ಕಂಡಿದ್ದು, 36 ನೇ ಸ್ಥಾನವನ್ನು ಪಡೆದಿದ್ದಾರೆ. ಶ್ರೇಯಸ್ ಅಯ್ಯರ್ 23 ಸ್ಥಾನಗಳನ್ನು ಜಿಗಿದು 62ನೇ ಸ್ಥಾನಕ್ಕೆ ತಲುಪಿದ್ದಾರೆ.rahul iyer

ಐಸಿಸಿ ಒಡಿಐ ಬ್ಯಾಟ್ಸ್‌ಮನ್‌ಗಳ ಟಾಪ್‌ 5 ರ‍್ಯಾಂಕಿಂಗ್‌ ಪಟ್ಟಿ

1. ವಿರಾಟ್‌ ಕೊಹ್ಲಿ (ಭಾರತ): 869 ರೇಟಿಂಗ್‌

2. ರೋಹಿತ್‌ ರ‍್ಮಾ (ಭಾರತ): 855 ರೇಟಿಂಗ್‌

3. ಬಾಬರ್‌ ಆಝಮ್‌ (ಪಾಕಿಸ್ತಾನ): 829 ರೇಟಿಂಗ್‌

4. ರಾಸ್‌ ಟೇಲರ್‌ (ನ್ಯೂಜಿಲೆಂಡ್‌): 828 ರೇಟಿಂಗ್‌

5. ಫಾಫ್‌ ಡು’ಪ್ಲೆಸಿಸ್‌ (ದಕ್ಷಿಣ ಆಫ್ರಿಕಾ): 803 ರೇಟಿಂಗ್‌

ಇತ್ತ ಏಕದಿನ ಆಲ್‌ರೌಂಡರ್‌ಗಳ ಪೈಕಿ ಭಾರತ ತಂಡದ ರವೀಂದ್ರ ಜಡೇಜಾ ಮೂರು ಸ್ಥಾನ ಮೇಲೇರಿದ್ದಾರೆ. 246 ರೇಟಿಂಗ್ ಅಂಕಗಳನ್ನು ಪಡೆದಿರುವ ಜಡೇಜಾ ಈ ಮೂಲಕ 7ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಫಘಾನಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನಬಿ (301) ನಂ.1 ಸ್ಥಾನದಲ್ಲಿದ್ದಾರೆ.

Tags: bcciicc odi rankingJasprit Bumrahk l rahulteam indiavirat kohli
ShareTweetSendShare
Join us on:

Related Posts

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

by Shwetha
March 27, 2026
0

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಗಳ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಇರಾನ್–ಅಮೆರಿಕ ಹಾಗೂ ಇಸ್ರೇಲ್ ನಡುವಿನ ಯುದ್ಧದ...

ವಾಹನ ನೋಂದಣಿ ತೆರಿಗೆ ಇಳಿಕೆ: ತಿದ್ದುಪಡಿ ವಿಧೇಯಕ ಅಂಗೀಕಾರ

ವಾಹನ ನೋಂದಣಿ ತೆರಿಗೆ ಇಳಿಕೆ: ತಿದ್ದುಪಡಿ ವಿಧೇಯಕ ಅಂಗೀಕಾರ

by Shwetha
March 27, 2026
0

ರಾಜ್ಯದಲ್ಲಿ ವಾಹನ ನೋಂದಣಿ ತೆರಿಗೆಯನ್ನು ಇಳಿಸುವ ಮಹತ್ವದ ತಿದ್ದುಪಡಿ ವಿಧೇಯಕ ಅಂಗೀಕರಿಸಲಾಗಿದೆ. ಈ ಮೂಲಕ 2026-27ನೇ ಸಾಲಿನಲ್ಲಿ ಹೊಸ ವಾಹನಗಳ ನೋಂದಣಿಯಿಂದ ಸುಮಾರು ₹250 ಕೋಟಿ ಆದಾಯ...

ವಿಧಾನಸೌಧದಲ್ಲಿ ಐಪಿಎಲ್ ಗದ್ದಲ: ನಾವು ವಿಐಪಿಗಳು, ಕ್ಯೂನಲ್ಲಿ ನಿಲ್ಲಲ್ಲ! ಆರ್​ಸಿಬಿ ಟಿಕೆಟ್​ಗಾಗಿ ಪಟ್ಟು ಹಿಡಿದ ಶಾಸಕರು

ವಿಧಾನಸೌಧದಲ್ಲಿ ಐಪಿಎಲ್ ಗದ್ದಲ: ನಾವು ವಿಐಪಿಗಳು, ಕ್ಯೂನಲ್ಲಿ ನಿಲ್ಲಲ್ಲ! ಆರ್​ಸಿಬಿ ಟಿಕೆಟ್​ಗಾಗಿ ಪಟ್ಟು ಹಿಡಿದ ಶಾಸಕರು

by Shwetha
March 27, 2026
0

ಬೆಂಗಳೂರು: ರಾಜ್ಯದಲ್ಲಿ ಐಪಿಎಲ್ ಕ್ರಿಕೆಟ್ ಜ್ವರ ತಾರಕಕ್ಕೇರಿದ್ದು, ಈ ಬಿಸಿಯು ಈಗ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧಕ್ಕೂ ವ್ಯಾಪಿಸಿದೆ. ಅಭಿಮಾನಿಗಳು ಟಿಕೆಟ್‌ಗಾಗಿ ಕ್ರೀಡಾಂಗಣದ ಹೊರಗೆ ಮತ್ತು ಆನ್‌ಲೈನ್‌ನಲ್ಲಿ...

ಬ್ರೋಕನ್ ಪಾಕಿಸ್ತಾನ ಇಂದು ಬ್ರೋಕರ್ ಆಗಲು ಮೋದಿಯೇ ಕಾರಣ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ

ಬ್ರೋಕನ್ ಪಾಕಿಸ್ತಾನ ಇಂದು ಬ್ರೋಕರ್ ಆಗಲು ಮೋದಿಯೇ ಕಾರಣ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ

by Shwetha
March 27, 2026
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ಮತ್ತು ರಾಜತಾಂತ್ರಿಕ ವೈಫಲ್ಯಗಳಿಂದಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಸ್ಥಿರವಾಗಿದ್ದ ಪಾಕಿಸ್ತಾನವು ಇಂದು ಜಾಗತಿಕ...

ಮುಖ್ಯಮಂತ್ರಿಗಳ ಸಂಧಾನಕ್ಕೂ ಜಗ್ಗದ ಸಾದಿಕ್ ಅಖಾಡದಲ್ಲೇ ಉಳಿದ ಪೈಲ್ವಾನ್ : ಕೈ ಪಾಳೆಯದಲ್ಲಿ ನಡುಕ ಶುರು

ಮುಖ್ಯಮಂತ್ರಿಗಳ ಸಂಧಾನಕ್ಕೂ ಜಗ್ಗದ ಸಾದಿಕ್ ಅಖಾಡದಲ್ಲೇ ಉಳಿದ ಪೈಲ್ವಾನ್ : ಕೈ ಪಾಳೆಯದಲ್ಲಿ ನಡುಕ ಶುರು

by Shwetha
March 27, 2026
0

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯ ರಾಜಕೀಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ದಶಕಗಳಿಂದ ಶಾಮನೂರು ಕುಟುಂಬದ ಭದ್ರಕೋಟೆಯಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈಗ ಬಂಡಾಯದ ಬಿರುಗಾಳಿ ಎದ್ದಿದೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram