ಅಮೆರಿಕಾದ ಯಶಸ್ಸಿನಲ್ಲಿ ಭಾರತೀಯರದ್ದೇ ಸಿಂಹಪಾಲು – ರಾಜ ಕೃಷ್ಣಮೂರ್ತಿ
ಅಮೆರಿಕಾ : ವಿಶ್ವದ ದೊಡ್ಡಣ್ಣ ಅಮೆರಿಕಾ ಇಡೀ ವಿಶ್ವದ ದೊಡ್ಡಣ್ಣನಾಗಿರುವ ಯಶಸ್ಸಿನ ಹಿಂದೆ ಭಾರತೀಯರದ್ದು ಸಿಂಹಪಾಲು ಎಂದು ಅಲ್ಲಿನ ಭಾರತೀಯ ಮೂಲದ ಸಂಸದರಾದ ರಾಜ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಜನಗಣತಿಯ ಪ್ರಕಾರ ಅಮೆರಿಕಾದಲ್ಲಿ ಸುಮಾರು 4.2 ದಶಲಕ್ಷಕ್ಕೂ ಅಧಿಕ ಭಾರತೀಯರು ಇರುವುದು ತಿಳಿದುಬಂದಿದೆ. ಸಾಂಸ್ಕೃತಿಕ, ಆರ್ಥಿಕ ಸೇರಿದಂತೆ ಅಮೆರಿಕದ ವಿವಿಧ ಕ್ಷೇತ್ರಗಳ ಉನ್ನತಿಗೆ ಭಾರತೀಯ ಅಮೆರಿಕನ್ನರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ಕೃಷ್ಣಮೂರ್ತಿ ಅವರು ನೀಡಿದ ಸಂದರ್ಶನದಲ್ಲಿ ಅಮೆರಿಕದ ಪ್ರಗತಿಗೆ ಭಾರತೀಯರ ಕೊಡುಗೆ ಕುರಿತು ವಿವರಿಸಿದ್ದಾರೆ. ಜನಗಣತಿಯ ಪ್ರಕಾರ ಅಮೆರಿಕದಲ್ಲಿ 40 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಭಾರತೀಯರ ಸಂಖ್ಯೆ ಶೇ 1.3ರಷ್ಟು. ವೃತ್ತಿ ಹಾಗೂ ಆರ್ಥಿಕ ಸ್ವಾವಲಂಬನೆ ವಿಷಯಕ್ಕೆ ಬಂದಾಗ ಭಾರತೀಯರು ಗಮನಾರ್ಹ ಯಶಸ್ಸು ಗಳಿಸಿದ್ದಾರೆ. ಅಮೆರಿಕದ ಅಭಿವೃದ್ಧಿಗೆ ಇತರ ದೇಶಗಳ ಪ್ರಜೆಗಳಿಗಿಂತ ಭಾರತೀಯರ ಕೊಡುಗೆ ಮಹತ್ವದ್ದು ಎಂದಿದ್ದಾರೆ.
ಇನ್ನೂ ಶೇ 80ಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರು ಪದವೀಧರರಾಗಿದ್ದಾರೆ. ಇತರ ಯಾವುದೇ ದೇಶದ ಪ್ರಜೆಗಳಿಗೆ ಹೋಲಿಸಿದರೆ ಭಾರತೀಯರ ತಲಾ ಆದಾಯವೂ ಅಧಿಕವಾಗಿದೆ. ಕಂಪ್ಯೂಟರ್ ವಿಜ್ಞಾನ, ಹಣಕಾಸು, ವೈದ್ಯಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯರು ತಮ್ಮ ಛಾಪು ಮೂಡಿಸಿದ್ದಾರೆ. ಸುಮಾರು 10 ಪ್ರತಿಶತ ಅಮೆರಿಕದ ವೈದ್ಯರು ಭಾರತೀಯ ಮೂಲದವರು ಎಂದಿದ್ದಾರೆ.
ಡ್ರಗ್ಸ್ ಪ್ರಕರಣ – ಇಡಿ ಎದುರು ವಿಚಾರಣೆಗೆ ಹಾಜರಾದ ನಟಿ ರಕುಲ್ ಪ್ರೀತ್ ಸಿಂಗ್..!
ಪ್ಯಾರಾಲಿಂಪಿಕ್ : ಎರಡನೇ ಪದಕ ಗೆದ್ದ ಅವನಿ ಲೇಖರಾ








