ಡ್ರಗ್ಸ್ ಪ್ರಕರಣ – ಇಡಿ ಎದುರು ವಿಚಾರಣೆಗೆ ಹಾಜರಾದ ನಟಿ ರಕುಲ್ ಪ್ರೀತ್ ಸಿಂಗ್..!
ಹೈದ್ರಾಬಾದ್ : ಟಾಲಿವುಡ್ , ಸ್ಯಾಂಡಲ್ ವುಡ್ , ಬಾಲಿವುಡ್ ನಲ್ಲಿ ಸಂಚಲನ ಸಷ್ಟಿಸಿರುವ ಡ್ರಗ್ ಕೇಸ್ ನಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.. ಅಂತಹ ಸ್ಟಾರ್ ಗಳ ಪೈಕಿ ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಕೂಡ ಒಬ್ರು.. ಇದೀಗ ರಕುಲ್ ಪ್ರೀತ್ ಸಿಂಗ್ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ..
ಹೈದ್ರಾಬಾದ್ ನಲ್ಲಿ ಜಾರಿ ನಿರ್ದೇಶನಾಲಯ ಕಚೇರಿಗೆ ತೆರಳಿದ್ದಾರೆ. ಇನ್ನೂ ಮಂಗಳವಾರ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಕೂಡ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಎದುರು ವಿಚಾರಣೆಗೆ ಹಾಜರಾಗಿದ್ರು. ಅಂದ್ಹಾಗೆ ಸುಶಾಂತ್ ಸಾವಿನ ನಂತರ ಸಾವಿನ ತನಿಖೆ ವೇಳೆ ಡ್ರಗ್ಸ್ ಮಾಫಿಯಾ ಬೆಳಕಿಗೆ ಬಂದ ನಂತರ ಬಾಲಿವುಡ್ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹಲ್ ಚಲ್ ಸೃಷ್ಟಿಸಿತ್ತು..
ಅಲ್ಲದೇ ದೊಡ್ಡ ದೊಡ್ಡ ಸ್ಟಾರ್ ಗಳು ವಿಚಾರಣೆಗೆ ಹಾಜರಾಗಿದ್ದರು.. ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ನಲ್ಲೂ ಅನೇಕರು ಸೆರೆವಾಸವನ್ನೂ ಅನುಭವಿಸಿ ಇದೀಗ ಜಾಮೀನು ಪಡೆದು ಹೊರಗಿದ್ದಾರೆ.. ಆದ್ರೆ ರಕುಲ್ ವಿಚಾರಣೆ ಹಾಜರಾಗಿರುವುದು ಇತ್ತೀಚೆಗಿನ ಕೇಸ್ ಗೆ ಸಂಬಬಂಧಿಸಿದಂತೆ ಅಲ್ಲ. ಬದಲಾಗಿ ಇದು 2017ರ ಕೇಸ್ ಆಗಿದೆ. ಹೌದು.. ಕೇವಲ ರಕುಲ್ , ಪುರಿ ಜಗನ್ನಾಥ್ ಅಷ್ಟೇ ಅಲ್ಲ ಇನ್ನೂ , ರವಿತೇಜ ರಾಣಾ ದಗ್ಗುಬಾಟಿ ಸೇರಿದಂತೆ ಅನೇಕರಿಗೆ ಇಡಿ ಸಮನ್ಸ್ ಜಾರಿ ಮಾಡಿದ್ದು, ಹಲವರು ಇಡಿ ವಿಚಾರಣೆಯನ್ನ ಎದುರಿಸಬೇಕಾಗಿದೆ.
ಚಿರು ಪುತ್ರ ಈಗ ರಾಯನ್ ರಾಜ್ : ಹೆಸರಿನ ಅರ್ಥ ಇಲ್ಲಿದೆ..!