ಚಿರು ಪುತ್ರ ಈಗ ರಾಯನ್ ರಾಜ್ : ಹೆಸರಿನ ಅರ್ಥ ಇಲ್ಲಿದೆ..!
ಬೆಂಗಳೂರು : ಇಷ್ಟು ದಿನ ಜ್ಯೂನಿಯರ್ ಚಿರು ಎಂದೇ ಫೇಮಸ್ ಆಗಿದ್ದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿಯ ಮಗನ ಹೆಸರು ಇಂದು ಬಹಿರಂಗಗೊಂಡಿದೆ.
ಜ್ಯೂನಿಯರ್ ಚಿರುಗೆ ಇಂದು ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಜ್ಯೂನಿಯರ್ ಚಿರುಗೆ ರಾಯನ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ.
ಅಂದಹಾಗೆ ರಾಯನ್ ಎಂದರೇ ಸಂಸ್ಕøತದಲ್ಲಿ ಯುವರಾಜ ಎಂಬ ಅರ್ಥವಿದೆ.
ಇನ್ನು ಸೆಪ್ಟೆಂಬರ್ 3ರಂದು ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ಕುಟುಂಬದವರು ರಿವೀಲ್ ಮಾಡಲು ನಿರ್ಧರಿಸಿರುವುದಾಗಿ ಮೇಘನಾ ರಾಜ್ ತಮ್ಮ ಇನ್ ಸ್ಟಾದಲ್ಲಿ ತಿಳಿಸಿದ್ದರು.