ಬೆಳಗಾವಿ ಪಾಲಿಕೆಯಲ್ಲಿ ಅರಳಿದ ಕಮಲ – 17 ವರ್ಷಗಳ ಬಳಿಕ ಅಧಿಕಾರಕ್ಕೇರಿದ ಬಿಜೆಪಿ
ಬೆಳಗಾವಿ : ಒಂದೆಡೆ ದೇಶಾದ್ಯಂತ ಬಿಜೆಪಿ ವರ್ಚಸ್ಸು ಕಡಿಮೆಯಾಗ್ತಿದೆ. ಪೆಟ್ರೋಲ್ – ಡೀಸೆಲ್ , ಅಡುಗೆ ಎಣ್ಣೆ ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದು, ಬಿಜೆಪಿಯ ವರ್ಚಸ್ಸು ಕಡಿಮೆಯಾಗ್ತಿದೆ ಅಂತ ಅಂದುಕೊಳ್ತಿರುವ ಹೊತ್ತಲ್ಲೇ ನಾನಾ ಚುನಾವಣೆಗಳಲ್ಲಿ ಬಿಜೆಪಿ ಜಯ ದಾಖಲಿಸುತ್ತಾ ಬರುತ್ತಿದೆ..
ಇದೀಗ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅರಳಿದೆ. ಈ ಮೂಲಕ 17 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೇರಿದೆ. ಹೌದು ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ಅಧಿಕಾರದ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಇಸ್ರೇಲ್ ನಲ್ಲಿ ಕೋವಿಡ್ ಲಸಿಕೆಯ 4ನೇ ಡೋಸ್ ಗೆ ತಯಾರಿ
ಬೆಳಗಾವಿಯಲ್ಲಿ ಬರೊಬ್ಬರಿ 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ಚಿನ್ಹೆಗಳನ್ನು ಮುಂದಿಟ್ಟುಕೊಂಡು ಸ್ಪರ್ಧೆಗೆ ಇಳಿದಿದ್ದರು. ಇದೀಗ ಅದರ ಫಲಿತಾಂಶ ಪ್ರಕಟವಾಗುತ್ತಿದ್ದು, ಬೆಳಗಾವಿ ನಗರದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೇರುವುದು ಖಚಿತವಾಗಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಒಟ್ಟು 58 ಕ್ಷೇತ್ರಗಳ ಪೈಕಿ 12 ವಾರ್ಡುಗಳಲ್ಲಿ ಬಿಜೆಪಿ, 7 ವಾರ್ಡುಗಳಲ್ಲಿ ಕಾಂಗ್ರೆಸ್ ಹಾಗೂ 18 ವಾರ್ಡುಗಳಲ್ಲಿ ಪಕ್ಷೇತರರು ಮುನ್ನಡೆ ಸಾಧಿಸಿದ್ದಾರೆ. 18 ನೇ ವಾರ್ಡ್ ನ ಬಿಜೆಪಿಯ ರಾಹುಲ್ ಬಡಸಕರ ಮುನ್ಮಡೆ ಸಾಧಿಸಿಕೊಂಡಿದ್ದಾರೆ.
15ನೇ ವಾರ್ಡ್ ನಲ್ಲಿ ಬಿಜೆಪಿಯ ನೇತ್ರಾವತಿ ವಿನೋದ ಭಾಗವತ್, ವಾರ್ಡ್ ನಂಬರ್ 14 ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಿವಾಜಿ ಮಂಡೋಳಕರ್ ಮತ್ತು ವಾರ್ಡ್ ನಂಬರ್ 40ರಲ್ಲಿ ಬಿಜೆಪಿಯ ಹೇಮಾ ಕಾಮ್ಕರ್ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂಬರ್ 18ರಲ್ಲಿ ಎಐಎಂಐಎಂ ಅಭ್ಯರ್ಥಿ ಶಾಹಿಖಾನ್ ಪಠಾಣ್ ಗೆಲುವು ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ. ನಂಬರ್ 11 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಮಿವುಲ್ಲಾ ಮಾಡೆವಾಲೆ ಗೆಲುವು ಸಾಧಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 15 ರಲ್ಲಿ 40 ಮತಗಳ ಅಂತರದಲ್ಲಿ ಪಕ್ಷೇತರ ಅಭ್ಯರ್ಥಿಯ ವಿರುದ್ಧ ಬಿಜೆಪಿ ಅಭ್ಯರ್ಥಿ ನೇತ್ರಾವತಿ ಜಯಗಳಿಸಿದ್ದಾರೆ. ನೇತ್ರಾವತಿ ಅವರಿಗೆ 1285 ಮತಗಳು ಬಂದಿವೆ. ಪಕ್ಷೇತರ ಅಭ್ಯರ್ಥಿಗೆ 1240 ಮತಗಳು ಬಂದಿವೆ. ಬೆಳಗಾವಿ ವಾರ್ಡ್ ನಂಬರ್ ಮೂರರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ಕಡೋಲಕರ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ. 14 ರಲ್ಲಿ ಎಂಇಎಸ್ ಅಭ್ಯರ್ಥಿ ಜಯಗಳಿಸಿದ್ದಾರೆ.








