ಟಿ-20 ವಿಶ್ವಕಪ್ | ಟೀಂ ಇಂಡಿಯಾದಲ್ಲಿ ಯಾರಿಗೆ ಸ್ಥಾನ..?
ಬೆಂಗಳೂರು : ಟಿ 20 ವಿಶ್ವಕಪ್ ಗೆ ದಿನಗಣನೆ ಆರಂಭವಾಗಿದ್ದು, ಟೀಂ ಇಂಡಿಯಾ ಪರ ಯಾರೆಲ್ಲಾ ಆಯ್ಕೆ ಆಗಬಹುದು ಎಂದ ಲೆಕ್ಕಚಾರ ಶುರುವಾಗಿದೆ.
ಬಿಸಿಸಿಐ ಮೂಲಗಳ ಪ್ರಕಾರ ಇಂದು ಅಥವಾ ನಾಳೆ ಭಾರತ ತಂಡ ಪ್ರಕಟವಾಗುವ ಸಾಧ್ಯತೆಗಳಿವೆ.
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ 18 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಇದರಲ್ಲಿ 15 ಮಂದಿ ತಂಡದ ಭಾಗವಾದರೇ ಮೂವರು ಮೀಸಲು ಆಟಗಾರರಾಗಿರುತ್ತಾರೆ.
ಇನ್ನು ತಂಡದಲ್ಲಿ ಈಗಾಗಲೇ 10 ಜನರ ಆಯ್ಕೆ ಬಹುತೇಕ ಖಚಿತವಾಗಿದ್ದು, ಇನ್ನುಳಿದ 5 ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ.
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶಮಾ, ಕನ್ನಡಿಗ ಕೆ.ಎಲ್.ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ಯುಜ್ವೇಂದ್ರ ಚಹಲ್ ತಂಡದಲ್ಲಿರುವುದು ಪಕ್ಕಾ ಆಗಿದೆ.
ಇನ್ನು ಹೆಚ್ಚುವರಿ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಶಿಖರ್ ಧವನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಮತ್ತು ಪೃಥ್ವಿ ಶಾ ರೇಸ್ನಲ್ಲಿದ್ದಾರೆ.
ಬೌಲರ್ ಗಳ ವಿಭಾಗದಲ್ಲಿ ದೀಪಕ್ ಚಹಾರ್, ಟಿ ನಟರಾಜನ್, ಮೊಹಮ್ಮದ್ ಸಿರಾಜ್ ನಡುವೆ ಪೈಪೋಟಿ ಇದೆ. ಇನ್ನು ಮೂರನೇ ಆಲ್ ರೌಂಡರ್ ಸ್ಥಾನಕ್ಕಾಗಿ ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಕೃನಾಲ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ಆಯ್ಕೆದಾರರ ಪಟ್ಟಿಯಲ್ಲಿದ್ದಾರೆ.









