ADVERTISEMENT
Wednesday, May 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಮಮತಾ ಬ್ಯಾನರ್ಜಿ ಕೆಂಡಾಮಂಡಲ ನಾನು ಸೋತಿಲ್ಲ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಚುನಾವಣೆ ಅಕ್ರಮದ ವಿರುದ್ಧ ದೀದಿ ಗಂಭೀರ ಆರೋಪ

Shwetha by Shwetha
May 6, 2026
in ದೇಶ - ವಿದೇಶ, National, Newsbeat, Politics, ರಾಜಕೀಯ
Share on FacebookShare on TwitterShare on WhatsappShare on Telegram

ಪಶ್ಚಿಮ ಬಂಗಾಳದ ರಾಜಕೀಯ ರಣಾಂಗಣದಲ್ಲಿ ಸಂಚಲನ ಮೂಡಿಸಿರುವ ಮಮತಾ ಬ್ಯಾನರ್ಜಿ ಅವರು ಚುನಾವಣಾ ಫಲಿತಾಂಶದ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಗುಡುಗಿದ್ದಾರೆ. ನಾನು ಚುನಾವಣೆಯಲ್ಲಿ ಸೋತಿಲ್ಲ ಮತ್ತು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳುವ ಮೂಲಕ ಅವರು ತಮ್ಮ ಹೋರಾಟದ ಹಾದಿಯನ್ನು ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಸಾಲು ಸಾಲು ಅಕ್ರಮಗಳನ್ನು ಬಿಚ್ಚಿಟ್ಟಿದ್ದಾರೆ.

ಚುನಾವಣಾ ಆಯೋಗದ ವಿರುದ್ಧ ಆಕ್ರೋಶ

Related posts

ಅಮೆರಿಕದ ವಿಮಾನ ಮಿಸ್ಸಿಂಗ್!

ಅಮೆರಿಕದ ವಿಮಾನ ಮಿಸ್ಸಿಂಗ್!

May 6, 2026
ರಾಹುಲ್ ತೇಜಸ್ವಿ ಮಮತಾ ಚಾಪ್ಟರ್ ಕ್ಲೋಸ್ ಸುವೇಂದು ಮುಂದಿನ ಟಾರ್ಗೆಟ್ ಅಖಿಲೇಶ್ ಯಾದವ್

ರಾಹುಲ್ ತೇಜಸ್ವಿ ಮಮತಾ ಚಾಪ್ಟರ್ ಕ್ಲೋಸ್ ಸುವೇಂದು ಮುಂದಿನ ಟಾರ್ಗೆಟ್ ಅಖಿಲೇಶ್ ಯಾದವ್

May 6, 2026

ಮುಖ್ಯ ಚುನಾವಣಾಧಿಕಾರಿಯೇ ಈ ಚುನಾವಣೆಯಲ್ಲಿ ಖಳನಾಯಕನಂತೆ ವರ್ತಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ನೇರ ಆರೋಪ ಮಾಡಿದ್ದಾರೆ. ಜನರ ಪ್ರಜಾಪ್ರಭುತ್ವದ ಹಕ್ಕನ್ನು ಲೂಟಿ ಮಾಡಲು ಆಯೋಗವು ಬಿಜೆಪಿಗೆ ಸಾಥ್ ನೀಡಿದೆ. ಮತದಾನದ ನಂತರ ಇವಿಎಂ ಯಂತ್ರಗಳು ಶೇಕಡಾ 80 ರಿಂದ 90 ರಷ್ಟು ಚಾರ್ಜ್ ಆಗಿರುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಅವರು ಇವಿಎಂ ಅಕ್ರಮಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಕೆಲವೇ ದಿನಗಳ ಮೊದಲು ದಕ್ಷ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬಿಜೆಪಿಗೆ ಪೂರಕವಾದ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಯಿತು ಎಂದು ಅವರು ಕಿಡಿಕಾರಿದ್ದಾರೆ.

ಬಿಜೆಪಿ ಮತ್ತು ಆಯೋಗದ ನಡುವೆ ಬೆಟ್ಟಿಂಗ್

ಇದು ಕೇವಲ ಚುನಾವಣೆಯಲ್ಲ ಇದು ಬಿಜೆಪಿ ಮತ್ತು ಚುನಾವಣಾ ಆಯೋಗದ ನಡುವಿನ ಬೆಟ್ಟಿಂಗ್ ಎಂದು ಮಮತಾ ಬ್ಯಾನರ್ಜಿ ಲೇವಡಿ ಮಾಡಿದ್ದಾರೆ. ಪ್ರಧಾನಿ ಮತ್ತು ಗೃಹ ಸಚಿವರು ನೇರವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಮತದಾರರ ಪಟ್ಟಿಯಿಂದ 90 ಲಕ್ಷ ಹೆಸರುಗಳನ್ನು ಅಳಿಸಿಹಾಕುವ ಮೂಲಕ ಕುತಂತ್ರ ಮಾಡಲಾಗಿದೆ. ನಾವು ನ್ಯಾಯಾಲಯಕ್ಕೆ ಹೋದ ನಂತರ 32 ಲಕ್ಷ ಹೆಸರುಗಳನ್ನು ಸೇರಿಸಲಾಯಿತು. ಇಂತಹ ಕೊಳಕು ಮತ್ತು ಅಸಹ್ಯಕರ ರಾಜಕಾರಣವನ್ನು ನಾನು ನನ್ನ ಜೀವನದಲ್ಲೇ ನೋಡಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ನನ್ನ ಮೇಲೆ ದೈಹಿಕ ಹಲ್ಲೆ ನಡೆದಿದೆ

ಎಣಿಕೆ ಕೇಂದ್ರದಲ್ಲಿ ನಡೆದ ಭೀಕರ ಘಟನೆಯನ್ನು ಸ್ಮರಿಸಿದ ಮಮತಾ ಬ್ಯಾನರ್ಜಿ ಬಿಜೆಪಿ ಅಭ್ಯರ್ಥಿಯು ನೂರಾರು ಗೂಂಡಾಗಳು ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯೊಂದಿಗೆ ಒಳಗೆ ನುಗ್ಗಿ ನಮ್ಮ ಎಣಿಕೆ ಏಜೆಂಟರ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ. ನಾನು ಸ್ಥಳಕ್ಕೆ ಹೋದಾಗ ನನ್ನ ಕಾರನ್ನು ತಡೆಯಲಾಯಿತು. ಒಳಗೆ ಹೋದ ನಂತರ ನನ್ನ ಹೊಟ್ಟೆ ಮತ್ತು ಬೆನ್ನಿಗೆ ಒದ್ದು ಹಲ್ಲೆ ನಡೆಸಲಾಯಿತು. ಆ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿತ್ತು ಎಂಬ ಗಂಭೀರ ದೂರನ್ನು ಅವರು ನೀಡಿದ್ದಾರೆ.

ಇಂಡಿಯಾ ಮೈತ್ರಿಕೂಟದ ಬೆಂಬಲ

ಸೋಲಿನ ಆಘಾತದ ನಡುವೆಯೂ ತಮಗೆ ರಾಷ್ಟ್ರಮಟ್ಟದ ನಾಯಕರು ಬೆಂಬಲ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ಮೈತ್ರಿಕೂಟದ ಎಲ್ಲಾ ನಾಯಕರು ನನಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ನಾಳೆ ಅಂದರೆ ಇಂದು ಅಖಿಲೇಶ್ ಯಾದವ್ ಅವರು ನನ್ನನ್ನು ಭೇಟಿ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಇಂಡಿಯಾ ಮೈತ್ರಿಕೂಟವನ್ನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಾನು ಇನ್ನಷ್ಟು ಬಲಪಡಿಸುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜನಸೇವೆಗೆ ಅರ್ಪಿತವಾದ ಜೀವನ

ಕಳೆದ 15 ವರ್ಷಗಳಿಂದ ನಾನು ಒಂದು ಪೈಸೆ ಸಂಬಳವಾಗಲಿ ಅಥವಾ ಪಿಂಚಣಿಯಾಗಲಿ ಪಡೆದಿಲ್ಲ. ಈಗ ನಾನು ಸ್ವತಂತ್ರ ಹಕ್ಕಿಯಾಗಿದ್ದು ಜನರ ಸೇವೆಗಾಗಿ ನನ್ನ ಜೀವನವನ್ನು ಮುಡಿಪಾಗಿಡುತ್ತೇನೆ. ಅಧಿಕಾರದ ಕುರ್ಚಿ ನನಗೇನು ಮುಖ್ಯವಲ್ಲ ಎಂದು ಮಮತಾ ಬ್ಯಾನರ್ಜಿ ಭಾವುಕರಾಗಿ ನುಡಿದಿದ್ದಾರೆ. ಭವಾನಿಪುರ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಅನುಭವಿಸಿದ ಸೋಲನ್ನು ಅವರು ಅಕ್ರಮದ ಫಲಿತಾಂಶ ಎಂದು ಬಣ್ಣಿಸಿದ್ದು ಕಾನೂನು ಹೋರಾಟದ ಮುನ್ಸೂಚನೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಈ ಫಲಿತಾಂಶವು ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ShareTweetSendShare
Join us on:

Related Posts

ಅಮೆರಿಕದ ವಿಮಾನ ಮಿಸ್ಸಿಂಗ್!

ಅಮೆರಿಕದ ವಿಮಾನ ಮಿಸ್ಸಿಂಗ್!

by Shwetha
May 6, 2026
0

ಅಮೆರಿಕದ ಭಾರೀ ಸೈನಿಕ ವಿಮಾನವಾದ KC-135 ಸ್ಟ್ರಾಟೋಟ್ಯಾಂಕರ್ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಕಾಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ವಿಮಾನವು ಗಾಳಿಯಲ್ಲೇ ಇಂಧನ ತುಂಬುವ ಪ್ರಮುಖ ಕಾರ್ಯವನ್ನು ನಿರ್ವಹಿಸುವುದರಿಂದ...

ರಾಹುಲ್ ತೇಜಸ್ವಿ ಮಮತಾ ಚಾಪ್ಟರ್ ಕ್ಲೋಸ್ ಸುವೇಂದು ಮುಂದಿನ ಟಾರ್ಗೆಟ್ ಅಖಿಲೇಶ್ ಯಾದವ್

ರಾಹುಲ್ ತೇಜಸ್ವಿ ಮಮತಾ ಚಾಪ್ಟರ್ ಕ್ಲೋಸ್ ಸುವೇಂದು ಮುಂದಿನ ಟಾರ್ಗೆಟ್ ಅಖಿಲೇಶ್ ಯಾದವ್

by Shwetha
May 6, 2026
0

ಪಶ್ಚಿಮ ಬಂಗಾಳದ ರಾಜಕೀಯ ಭೂಪಟದಲ್ಲಿ ಅಕ್ಷರಶಃ ಸುನಾಮಿ ಎದ್ದಿದೆ. ಕಳೆದ ಹದಿನೈದು ವರ್ಷಗಳಿಂದ ಅಜೇಯವಾಗಿ ಉಳಿದಿದ್ದ ತೃಣಮೂಲ ಕಾಂಗ್ರೆಸ್ ಕೋಟೆಯನ್ನು ಭಾರತೀಯ ಜನತಾ ಪಾರ್ಟಿ ಧೂಳೀಪಟ ಮಾಡಿದೆ....

ಶೃಂಗೇರಿಯಲ್ಲಿ ವೋಟ್ ಚೋರಿ ಆರೋಪ: ಸಿಎಂ ಸಿದ್ದರಾಮಯ್ಯ ಕಿಡಿ

ಶೃಂಗೇರಿಯಲ್ಲಿ ವೋಟ್ ಚೋರಿ ಆರೋಪ: ಸಿಎಂ ಸಿದ್ದರಾಮಯ್ಯ ಕಿಡಿ

by Shwetha
May 6, 2026
0

ಶೃಂಗೇರಿ ಕ್ಷೇತ್ರದಲ್ಲಿ ಮತ ಮರುಎಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮರುಎಣಿಕೆ ವೇಳೆ ಭಾರತೀಯ ಜನತಾ ಪಕ್ಷದ (BJP) ಕಾರ್ಯಕರ್ತರು ಕ್ರಿಮಿನಲ್ ಪಿತೂರಿ ನಡೆಸಿ...

ಅಸ್ಸಾಂ ಮತ್ತು ಕೇರಳದಲ್ಲಿ ಕಾಂಗ್ರೆಸ್ ಕೈಹಿಡಿದ ಅಲ್ಪಸಂಖ್ಯಾತರು ಗೆದ್ದವರಲ್ಲಿ ಮುಸ್ಲಿಂ ಶಾಸಕರೇ ಹೆಚ್ಚು

ಅಸ್ಸಾಂ ಮತ್ತು ಕೇರಳದಲ್ಲಿ ಕಾಂಗ್ರೆಸ್ ಕೈಹಿಡಿದ ಅಲ್ಪಸಂಖ್ಯಾತರು ಗೆದ್ದವರಲ್ಲಿ ಮುಸ್ಲಿಂ ಶಾಸಕರೇ ಹೆಚ್ಚು

by Shwetha
May 6, 2026
0

ಇತ್ತೀಚೆಗೆ ನಡೆದ ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಗಳು ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ...

ದಿನ ಭವಿಷ್ಯ (03-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (06-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 6, 2026
0

ದಿನ ಭವಿಷ್ಯ : 06-05-2026 ಮೇಷ ರಾಶಿ ಮೇಷ ರಾಶಿಯವರಿಗೆ ಇಂದು ಕೆಲಸದ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿಗಳು ಬರಲಿವೆ. ನಿಮ್ಮ ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ಆರ್ಥಿಕವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram