ADVERTISEMENT
Saturday, June 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಇಡಿ ಸಿಬಿಐ ಭಯಕ್ಕೆ ತಾಯಿಯಂತಾ ಪಕ್ಷವನ್ನೇ ಮಾರಿಕೊಂಡ್ರು: ಹೆತ್ತ ತಾಯಿಗೆ ದ್ರೋಹ ಬಗೆದಂತೆ ಪಕ್ಷಾಂತರ- ದ್ರೋಹಿಗಳಿಗೆ ಜನರೇ ಪಾಠ ಕಲಿಸ್ತಾರೆ ಎಂದು ಗುಡುಗಿದ ಮಮತಾ ಬ್ಯಾನರ್ಜಿ

Shwetha by Shwetha
June 27, 2026
in ದೇಶ - ವಿದೇಶ, National, Newsbeat, Politics, ರಾಜಕೀಯ
Share on FacebookShare on TwitterShare on WhatsappShare on Telegram

ಪಕ್ಷದ ಸಂಕಷ್ಟದ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವ ಶಾಸಕರು ಮತ್ತು ಸಂಸದರ ವಿರುದ್ಧ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಕ್ಷಾಂತರ ಮಾಡುವುದು ಹೆತ್ತ ತಾಯಿಗೆ ಅನಾರೋಗ್ಯ ಕಾಡಿದಾಗ ಆಕೆಯನ್ನು ಅನಾಥೆಯನ್ನಾಗಿ ಮಾಡಿ ಓಡಿಹೋಗುವುದಕ್ಕೆ ಸಮಾನ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ದ್ರೋಹಿಗಳಿಗೆ ಕ್ಷಮೆಯಿಲ್ಲ

Related posts

ಭೂತಾಯಿ ಬಾಯಿಬಿಡಲಿದ್ದಾಳೆ ಅಗ್ನಿ ಅವಘಡ ಹೆಚ್ಚಲಿದೆ : ನಡುಕ ಹುಟ್ಟಿಸುತ್ತಿದೆ ಕೋಡಿಶ್ರೀಗಳ ಭೀಕರ ಭವಿಷ್ಯ

ಭೂತಾಯಿ ಬಾಯಿಬಿಡಲಿದ್ದಾಳೆ ಅಗ್ನಿ ಅವಘಡ ಹೆಚ್ಚಲಿದೆ : ನಡುಕ ಹುಟ್ಟಿಸುತ್ತಿದೆ ಕೋಡಿಶ್ರೀಗಳ ಭೀಕರ ಭವಿಷ್ಯ

June 27, 2026
ತಾಕತ್ತಿದ್ದರೆ ನನ್ನ ಮೇಲೆ ಐಟಿ ಇಡಿ ದಾಳಿ ಮಾಡಿಸಿ : ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್

ತಾಕತ್ತಿದ್ದರೆ ನನ್ನ ಮೇಲೆ ಐಟಿ ಇಡಿ ದಾಳಿ ಮಾಡಿಸಿ : ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್

June 27, 2026

ಉತ್ತರ ಕೋಲ್ಕತಾದಲ್ಲಿ ನಡೆದ ಪಕ್ಷದ ವರ್ಚುವಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ದೀದಿ, ಜೀವನ ಪೂರ್ತಿ ಬೆಳೆಸಿದ ಪಕ್ಷಕ್ಕೆ ದ್ರೋಹ ಬಗೆಯುವವರನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಈಗ ತನಿಖಾ ಸಂಸ್ಥೆಗಳ ಭಯಕ್ಕೆ ಅಥವಾ ಹಣದ ಆಸೆಗೆ ಬಿದ್ದು ಓಡಿಹೋಗುತ್ತಿರುವವರು ಇಂದು ಬಚಾವ್ ಆಗಬಹುದು. ಆದರೆ ಭವಿಷ್ಯದಲ್ಲಿ ಬಂಗಾಳದ ಜನತೆ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನಿಮ್ಮನ್ನು ಬಿಡುವುದಿಲ್ಲ, ಪ್ರತಿಯೊಂದಕ್ಕೂ ಲೆಕ್ಕ ಕೇಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಸ್ವಾರ್ಥಕ್ಕಾಗಿ ನೈತಿಕತೆ ಮಾರಿಕೊಂಡಿದ್ದಾರೆ

ತಮ್ಮ ಸ್ವಂತ ಆಸ್ತಿಪಾಸ್ತಿಗಳನ್ನು ಉಳಿಸಿಕೊಳ್ಳಲು ಮತ್ತು ಇಡಿ, ಸಿಬಿಐನಂತಹ ಸಂಸ್ಥೆಗಳ ಕೇಸ್‌ಗಳಿಂದ ತಪ್ಪಿಸಿಕೊಳ್ಳಲು ಕೆಲವರು ಪಕ್ಷ ಬದಲಾಯಿಸುತ್ತಿದ್ದಾರೆ. ಯಾರ ವಿರುದ್ಧ ನಾವು ಹೋರಾಟ ಮಾಡಿದ್ದೇವೋ, ಇಂದು ಅವರ ಕಾಲಡಿಗೆ ಹೋಗಿ ಕುಳಿತುಕೊಳ್ಳಲು ಇವರಿಗೆ ನಾಚಿಕೆಯಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು. ಹಣ ಮತ್ತು ಸ್ವಾರ್ಥಕ್ಕಾಗಿ ಧರ್ಮ ಹಾಗೂ ನೈತಿಕ ಮೌಲ್ಯಗಳನ್ನು ಬಲಿ ಕೊಡಲಾಗುತ್ತಿದೆ. ಇನ್ನೂ ಕಾಲ ಮಿಂಚಿಲ್ಲ, ಬುದ್ಧಿ ಇರುವವರು ವಾಪಸ್ ಬನ್ನಿ, ಇಲ್ಲದಿದ್ದರೆ ರಾಜಕೀಯವಾಗಿ ನೀವು ಅವನತಿ ಹೊಂದುತ್ತೀರಿ ಎಂದು ಎಚ್ಚರಿಸಿದರು.

ಸರ್ವಾಧಿಕಾರದ ವಿರುದ್ಧ ಕಿಡಿ

ದೇಶದಲ್ಲಿ ಈಗ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ ಎಂದು ಆರೋಪಿಸಿದ ಮಮತಾ, ಬಿಜೆಪಿಗೆ ಒಂದು ದೇಶ ಮತ್ತು ಒಂದು ಪಕ್ಷ ಎನ್ನುವ ಅಜೆಂಡಾ ಬೇಕಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ಬಂಧಿಸಲಾಗುತ್ತಿದೆ. ದೇಶದಲ್ಲಿ ಸಂವಿಧಾನದ ಹತ್ಯೆಯಾಗುತ್ತಿದೆ ಎಂದು ಕಿಡಿಕಾರಿದರು. ಪೊಲೀಸರು ಕೂಡ ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಟುಂಬದಲ್ಲೂ ದ್ರೋಹಕ್ಕೆ ಜಾಗವಿಲ್ಲ

ಪಕ್ಷದ್ರೋಹದ ಬಗ್ಗೆ ಮಾತನಾಡುತ್ತಾ ತಮ್ಮ ಕುಟುಂಬದ ಉದಾಹರಣೆ ನೀಡಿದ ಮಮತಾ, ತಮಗೆ ದ್ರೋಹ ಮಾಡಿದ ಕಾರಣಕ್ಕಾಗಿಯೇ ತಮ್ಮ ಇಬ್ಬರು ಸ್ವಂತ ಸಹೋದರರಿಂದ ದೂರ ಸರಿದಿರುವುದಾಗಿ ತಿಳಿಸಿದರು. ಆದರೆ ಸಂಕಷ್ಟದ ಸಮಯದಲ್ಲಿ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ತಮ್ಮ ಜೊತೆ ನಿಂತಿದ್ದಾರೆ. ಕೇಂದ್ರ ಸರ್ಕಾರ ಅಭಿಷೇಕ್ ಮೇಲೆ ಪದೇ ಪದೇ ಸಮನ್ಸ್ ನೀಡುವ ಮೂಲಕ ಕಿರುಕುಳ ನೀಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಎಂತಹ ದಬ್ಬಾಳಿಕೆ ನಡೆದರೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಧೈರ್ಯ ಗೆಡಬಾರದು ಎಂದು ಅವರು ಕರೆ ನೀಡಿದರು.

ShareTweetSendShare
Join us on:

Related Posts

ಭೂತಾಯಿ ಬಾಯಿಬಿಡಲಿದ್ದಾಳೆ ಅಗ್ನಿ ಅವಘಡ ಹೆಚ್ಚಲಿದೆ : ನಡುಕ ಹುಟ್ಟಿಸುತ್ತಿದೆ ಕೋಡಿಶ್ರೀಗಳ ಭೀಕರ ಭವಿಷ್ಯ

ಭೂತಾಯಿ ಬಾಯಿಬಿಡಲಿದ್ದಾಳೆ ಅಗ್ನಿ ಅವಘಡ ಹೆಚ್ಚಲಿದೆ : ನಡುಕ ಹುಟ್ಟಿಸುತ್ತಿದೆ ಕೋಡಿಶ್ರೀಗಳ ಭೀಕರ ಭವಿಷ್ಯ

by Shwetha
June 27, 2026
0

ಜಗತ್ತಿನಾದ್ಯಂತ ಸಂಭವಿಸುತ್ತಿರುವ ಸರಣಿ ನೈಸರ್ಗಿಕ ವಿಕೋಪಗಳು ಮತ್ತು ಮಳೆಯಿಲ್ಲದೆ ಕಂಗಾಲಾಗಿರುವ ರೈತ ಸಮುದಾಯದ ಪರಿಸ್ಥಿತಿಯನ್ನು ಗಮನಿಸಿದರೆ, ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯವಾಣಿ...

ತಾಕತ್ತಿದ್ದರೆ ನನ್ನ ಮೇಲೆ ಐಟಿ ಇಡಿ ದಾಳಿ ಮಾಡಿಸಿ : ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್

ತಾಕತ್ತಿದ್ದರೆ ನನ್ನ ಮೇಲೆ ಐಟಿ ಇಡಿ ದಾಳಿ ಮಾಡಿಸಿ : ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್

by Shwetha
June 27, 2026
0

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವಿನ ವಾಕ್ಸಮರ ಈಗ ತಾರಕಕ್ಕೇರಿದೆ. ತಮ್ಮ ಶಿಕ್ಷಣ ಸಂಸ್ಥೆಯ ಬಗ್ಗೆ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ...

ಅಡ್ಡ ಮತದಾನ ವಿವಾದ; ಅಚ್ಚರಿಯ ಹೇಳಿಕೆ ನೀಡಿದ ಎಸ್.ಟಿ. ಸೋಮಶೇಖರ್

ಧರ್ಮಸ್ಥಳದಲ್ಲಿ ಶೋಭಾ ಅಶೋಕ್ ಮತ್ತು ವಿಜಯೇಂದ್ರ ಆಣೆ ಮಾಡಲಿ – ಬಿಜೆಪಿಯಲ್ಲಿನ ಅವಾಂತರಕ್ಕೆ ಶೋಭಾ ಕರಂದ್ಲಾಜೆ ಕಾರಣ: ಅಡ್ಡಮತದಾನದ ರಹಸ್ಯ ಬಿಚ್ಚಿಟ್ಟ ಎಸ್.ಟಿ. ಸೋಮಶೇಖರ್

by Shwetha
June 27, 2026
0

ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಮತ್ತು ಅಡ್ಡಮತದಾನದ ವಿಚಾರ ಈಗ ದೊಡ್ಡ ಸ್ಫೋಟಕ್ಕೆ ಕಾರಣವಾಗಿದೆ. ಉಚ್ಚಾಟಿತ ಶಾಸಕ ಎಸ್.ಟಿ. ಸೋಮಶೇಖರ್ ಅವರು ಬಿಜೆಪಿ ರಾಜ್ಯ ನಾಯಕರ ವಿರುದ್ಧ ತೀವ್ರ...

ಕರುಳಿಲ್ಲದ ಸಹಾಯಕಿ: ಮಗುವನ್ನು ಫುಟ್ಬಾಲ್ ನಂತೆ ಮೆಟ್ಟಿಲಿನಿಂದ ಒದ್ದು ಉರುಳಿಸಿದ ಪಾಪಿ -ವೈರಲ್ ವಿಡಿಯೋ ನೋಡಿ ಕಣ್ಣೀರು ಹಾಕಿದ ಸಾರ್ವಜನಿಕರು

ಕರುಳಿಲ್ಲದ ಸಹಾಯಕಿ: ಮಗುವನ್ನು ಫುಟ್ಬಾಲ್ ನಂತೆ ಮೆಟ್ಟಿಲಿನಿಂದ ಒದ್ದು ಉರುಳಿಸಿದ ಪಾಪಿ -ವೈರಲ್ ವಿಡಿಯೋ ನೋಡಿ ಕಣ್ಣೀರು ಹಾಕಿದ ಸಾರ್ವಜನಿಕರು

by Shwetha
June 27, 2026
0

ಮಹಾರಾಷ್ಟ್ರದ ಪನ್ವೆಲ್ ತಾಲೂಕಿನ ನಾಡಗಾಂವ್ ಸರ್ಕಾರಿ ಅಂಗನವಾಡಿ ಕೇಂದ್ರದಲ್ಲಿ ಎದೆಯೊಣಗಿಸುವ ಮತ್ತು ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಮಕ್ಕಳನ್ನು ತಾಯಿಯಂತೆ ಆರೈಕೆ ಮಾಡಬೇಕಾದ ಅಂಗನವಾಡಿ ಸಹಾಯಕಿಯೇ ಮೃಗೀಯವಾಗಿ...

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (27-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 27, 2026
0

ದಿನ ಭವಿಷ್ಯ : 27-06-2026 ಮೇಷ ರಾಶಿ ಇಂದು ನಿಮಗೆ ಅತ್ಯುತ್ಸಾಹದ ಮತ್ತು ಕ್ರಿಯಾಶೀಲತೆಯ ದಿನವಾಗಿದೆ. ಗ್ರಹಗಳ ಅನುಕೂಲಕರ ಸ್ಥಾನದಿಂದಾಗಿ ನಿಮ್ಮ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ವೃತ್ತಿ ಮತ್ತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram