ಕಲ್ಬುರ್ಗಿ ಮೇಯರ್ ಮಾತ್ರ ಬಿಜೆಪಿಯವರೇ ಆಗ್ತಾರೆ : ಬೊಮ್ಮಾಯಿ
ಬೆಂಗಳೂರು : ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತಂತ್ರದ ಫಲಿತಾಂಶ ಬಂದಿದ್ದು, ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಆದ್ರೆ ಜೆಡಿಎಸ್ ಮೇಯರ್ ಪಟ್ಟಕ್ಕಾಗಿ ಪಟ್ಟು ಹಿಡಿದಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇವೆಲ್ಲವೂ ಪ್ರಾರಂಭಿಕ ಹಂತದಲ್ಲಿ ಮಾತ್ರ ಚರ್ಚೆ ಆಗ್ತಿದೆ.
ಆದರೆ ಒಂದಂತು ವಿಶ್ವಾಸ ಇಟ್ಟುಕೊಳ್ಳಿ. ಕಲ್ಬುರ್ಗಿ ಮೇಯರ್ ಮಾತ್ರ ಬಿಜೆಪಿಯವರೇ ಆಗ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ದೆಹಲಿ ಭೇಟಿ ಬಗ್ಗೆ ಮಾತನಾಡಿ, ಜೆಪಿ ನಡ್ಡಾ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಕ್ಯಾಬಿನೆಟ್ ವಿಸ್ತರಣೆ ಚರ್ಚೆ ಆಗಿಲ್ಲ. ಪಕ್ಷ ಸಂಘಟನೆ ಬಗ್ಗೆ ಗಮನ ಕೊಡಲು ಸೂಚನೆ ನೀಡಿದ್ದಾರೆ ಎಂದಿದ್ದಾರೆ.
ಇನ್ನು ನಿಫಾ ವೈರಸ್ ವಿಚಾರವಾಗಿ ಮಾತನಾಡಿ, ನಿಫಾ ವೈರಸ್ ಬಗ್ಗೆ ರಾಜ್ಯದಲ್ಲೂ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ನೀಡಿಲಾಗಿದೆ.
ಕೇರಳಾದಿಂದ ನಮಗೆ ಏನ್ ಸಮಸ್ಯೆ ಆಗಬಹುದು. ಅದನ್ನ ಹೇಗೆ ತಡೆಯಬಹುದು ಅಂತ ಚರ್ಚೆ ಆಗಿದೆ. ಇಂದು ಸಂಜೆ ಮತ್ತೆ ವರದಿ ತರಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ತೀವಿ ಎಂದು ತಿಳಿಸಿದರು.









