ಸಾಧನೆ ಮಾಡಿದ್ರೂ ಅದನ್ನ ಬಹಿರಂಗವವಾಗಿ ಹೇಳಿಕೊಳ್ಳೋಕಾಗಲ್ಲ –ಮಣ್ಣಲ್ಲಿ ಮಣ್ಣಾದ್ರೂ ದೇಶದ ಸೀಕ್ರೆಟ್ ಬಿಟ್ಟು ಕೊಡಲ್ಲ ನಮ್ಮ “RAW” ರಣಧೀರರು..!
ನಮ್ಮ ದೇಶದ ಅತ್ಯಂತ ರಹಸ್ಯವಾದ ಬೇಹುಗಾರಿಕಾ ವಿಭಾಗ ಎಂದರೆ ಅದು RAW. ನಮ್ಮ ದೇಶದ ಗುಪ್ತಚರ ಇಲಾಖೆ ರಾದ ಕಾರ್ಯತಂತ್ರ, ನಿಗೂಢ ನಡೆ, ಕಾರ್ಯಶೈಲಿಗೆ ಸಾಟಿ ಮತ್ತೊಂದಿಲ್ಲ. ಆದರೆ ರಾ ಏಜೆಂಟ್ ಬಳಿ ಏನಾದರೂ ಸೀಕ್ರೆಟ್ಗಳಿದ್ದರೆ ಅವು ಆತ ಮಣ್ಣಾದರೆ ಅವನೊಂದಿಗೆ ಮಣ್ಣಾಗಿ ಹೋಗುತ್ತವೆ. ಇದು ನಿಮಗೆಲ್ಲ ವಿಚಿತ್ರ ಎನಿಸಬಹುದು. ಆದರೆ, ರಾ ಏಜೆಂಟ್ ಗಳಕಾರ್ಯ ವೈಖರಿಯೇ ಹಾಗಿರುತ್ತದೆ. ರಹಸ್ಯ ಕಾಪಾಡುವ ಉದ್ದೇಶದಿಂದ ತಮ್ಮ ಸಾಧನೆಗಳನ್ನೆಲ್ಲ ಅವರು ಬಹಿರಂಗಗೊಳಿಸುವುದಿಲ್ಲ. ಹೀಗಾಗಿ ಅವರ ಅದೆಷ್ಟೋ ಸಾಧನೆಗಳು ನಮಗೆಲ್ಲ ತಿಳಿದೇ ಇಲ್ಲ.
ದೇಶದ ರಕ್ಷಣಾ ಇಲಾಖೆಗೆ ಹೊಂದಿಕೊಂಡಂತೆ ಕೆಲಸ ಮಾಡಿದರೂ ರಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವಂತಿಲ್ಲ. ಸಾಮಾನ್ಯರಂತೆಯೇ ಸಾಮಾನ್ಯರ ಮಧ್ಯದಲ್ಲಿದ್ದುಕೊಂಡೇ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಮುಗಿಸುತ್ತಾರೆ. ಇದಕ್ಕೆ ಸಂಬಂಧಿಸಿದ ಅದೆಷ್ಟೋ ಸಿನಿಮಾಗಳು ಬಂದಿದ್ದು, ಸೂಪರ್ ಹಿಟ್ ಆಗಿವೆ. ಅವರ ಕೆಲಸವೇನಿದ್ದರೂ ಗುಪ್ತಚರರಾಗಿ ಮಾಹಿತಿ ಕಲೆ ಹಾಕುವುದು. ಇನ್ನು ಈ ಸಂಸ್ಥೆ ತನ್ನ ಕಾರ್ಯ ವೈಖರಿಯ ಬಗ್ಗೆ ಯಾರಿಗೂ ಹೇಳುವಂತಿಲ್ಲ. ಅದಕ್ಕೆಂದೇ ಈ ಸಂಸ್ಥೆ ಮಾಹಿತಿ ಮತ್ತು ಹಕ್ಕು ಕಾಯ್ದೆಯಡಿಯಿಂದಲೂ ಆಚೆಗಿದೆ.
ಈ ಮೊದಲು ಭಾರತ ಸರ್ಕಾರದ ಉನ್ನತ ಮಟ್ಟದ ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳನ್ನೇ ಏಜೆಂಟ್ ಗಳಾಗಿ ಕಾರ್ಯ ನಿರ್ವಹಿಸಲು ಅವಕಾಶವಿತ್ತು. ಆದರೆ ಕೆಲವುವರ್ಷಗಳ ಹಿಂದಿನಿಂದ ಇದರಲ್ಲಿ ಕೊಂಚ ಬದಲಾವಣೆಯನ್ನು ಮಾಡಲಾಯಿತು. ಪದವಿ ಪಡೆದ ವರು ಸಹ ಇದಕ್ಕೆ ಈಗ ಆಯ್ಕೆಯಾಗುತ್ತಿದ್ದಾರೆ. ಆದರೆ ಇಲ್ಲಿ ಸೇರ ಬಯಸುವವರು ಯಾವುದೇ ರೀತಿಯ ಚಟಗಳಿಂದ ಮುಕ್ತರಾಗಿರಬೇಕು. ಎಂಥದ್ದೇ ಸಮಯದಲ್ಲಿ ದೇಶಕ್ಕಾಗಿ ಕಾರ್ಯ ನಿರ್ವಹಿಸಲು ಎಲ್ಲಿಗಾದರೂ ತೆರಳಲು ಸಿದ್ಧವಿರಬೇಕು. ಮತ್ತು ಗುಟ್ಟು ಕಾಪಾಡಿಕೊಳ್ಳುವ ಗುಣ ಹೊಂದಿರಬೇಕು. ಅಲ್ಲದೇ ಸಾಕಷ್ಟು ಪ್ರಾದೇಶಿಕ ಭಾಷೆಗಳು ಬಂದರೆ ಇನ್ನೂ ಸುಲಭ. ಭಾರತದ ಅಣ್ವಸ್ತ್ರ ಪರೀಕ್ಷೆಯ ರಹಸ್ಯವನ್ನು ನಾವಾಗಿಯೇ ಹೇಳಿಕೊಳ್ಳುವ ಮುನ್ನ ಎಂಥ ಬಲಶಾಲಿ ದೇಶಗಳಿಗೂ ಸಹ ತಿಳಿಯದಂತೆ ಮಾಡಿದ್ದು ಇದೇ ಸಂಸ್ಥೆ.
ಆಪರೇಷನ್ ಸ್ಮೈಲ್ ಹಿಂದಿನ ಹೀರೋಗಳಿವರು. ಇವರು ಸದಾ ಕಾಲ ಅಪಾಯದ ಜೊತೆ ಸರಸವಾಡುವ ಧೀರರ ಪಡೆ. ಗಡಿಯ ಹಂಗು ಮತ್ತು ಕಾನೂನಿನ ತೊಡಕುಗಳಿಂದಾಚೆಗೆ ಇವರು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇಲ್ಲಿ ಕೆಲಸ ಮಾಡುವ ಅದೆಷ್ಟೋ ಅಧಿಕಾರಿಗಳಿಗೆ ಕೋಡ್ ನೇಮ್ ಬಿಟ್ಟರೆ ಬೇರೆ ಯಾವ ಐಡೆಂಟಿಡಿ ಇರುವುದಿಲ್ಲ. ರಾ ಎಂದರೆ ಶತ್ರುಗಳಿಗೆ ಸಣ್ಣ ನಡುಕವೊಂದು ಆರಂಭವಾಗುತ್ತದೆ. ಯಾವುದೋ ಮಹತ್ಕಾರ್ಯಕ್ಕೆ ನಮ್ಮ ನಡುವೆಯೂ ಈ ಧೀರರು ನಮಗೆ ಗೊತ್ತಿಲ್ಲದ ಹಾಗೆ ದೇಶಸೇವೆ ಮಾಡುತ್ತಲೂ ಇರಬಹುದು.