ಶಾಲೆಗಳಲ್ಲಿ ಶೇ. 15 ಭೋದನಾ ಶುಲ್ಕ ರಿಯಾಯಿತಿಗೆ ಹೈ ಕೋರ್ಟ್ ಆದೇಶ
ಕೊರೊನಾ ಹಾವಳಿಯ ನಡುವೆ ಎಲ್ಲಾ ಕ್ಷೇತ್ರಗಳಲ್ಲೂ ನಷ್ಟ ಉಂಟಾಗಿದೆ.
ಅದ್ರಲ್ಲೂ ಸಾಲಾ ಕಾಲೇಜುಗಳಂತೂ ಬಂದ್ ಆಗಿ ಖಾಸಗಿ ಶಿಕ್ಷಕರು ಸಂಬಳವಿಲ್ಲದೆ ಪಾಡುಬಿದ್ರೆ, ಆರ್ಥಿಕ ಸಂಕಷ್ಟ ಎದುರಿಸಿದ ಪೋಷಕರು ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಫೀಸ್ , ಡೊನೇಷನ್ ಕಟ್ಟಲು ಪಾಡು ಬೀಳುವಂತಾಗಿದೆ.
ಸರ್ಕಾರವು ಶಾಲಾ ಶುಲ್ಕ ಕಡಿಮೆ ಮಾಡುವಂತೆ ಸೂಚನೆ ನೀಡಿದೆ. ಈ ನಡುವೆ ಶುಲ್ಕದ ಮೇಲೆ ರಿಯಾಯಿತಿ ನೀಡಲು ಒತ್ತಡಗಳ ಬೆನ್ನಲ್ಲೇ ಖಾಸಗಿ ಶಾಲೆಗಳಿಗೆ ಬೋಧನಾ ಶುಲ್ಕ ನಿಗದಿ ವಿಚಾರಕ್ಕೆ ಸಂಬಂಧಿಸಿ ಶೇ. 15 ಶುಲ್ಕ ರಿಯಾಯಿತಿಗೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2020-2021 ನೇ ಸಾಲಿನಲ್ಲಿ ಭೋದನಾ ಶುಲ್ಕವನ್ನ ಕಡಿತ ಮಾಡಿತ್ತು. ಶೇ 30 ರಷ್ಟು ಭೋದನಾ ಶುಲ್ಕ ಕಡಿತ ಮಾಡಿ ಆದೇಶ ಮಾಡಿತ್ತು.
ಸರ್ಕಾರದ ಆದೇಶ ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೊರೆ ಹೋಗಿದ್ದವು.
ಸರ್ಕಾರದ ಆದೇಶ ಅವೈಜ್ಞಾನಿಕ ಎಂದು ಕೋರ್ಟ್ ಮೊರೆ ಹೋಗಿದ್ದರು.
ಆದ್ರೆ ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಈಗ ಹೈಕೋರ್ಟ್ ಮತ್ತೊಂದು ಆದೇಶ ಹೊರಡಿಸಿದೆ.
2020-21 ರ ಸಾಲಿಗೆ ಶೇ.15 ರಷ್ಟು ಶುಲ್ಕ ರಿಯಾಯಿತಿಗೆ ಆದೇಶಿಸಿದೆ.








