ADVERTISEMENT
Saturday, August 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

5 ವಿವಿಧ ಬಗೆಯ ರುಚಿಕರ ದೋಸೆಗಳ ರೆಸಿಪಿಗಳು ನಿಮಗಾಗಿ..!

Namratha Rao by Namratha Rao
September 16, 2021
in Cooking, Newsbeat, ಅಡುಗೆ
Saakshatv cooking recipes instant dosa
Share on FacebookShare on TwitterShare on WhatsappShare on Telegram

5 ವಿವಿಧ ಬಗೆಯ ರುಚಿಕರ ದೋಸೆಗಳ ರೆಸಿಪಿಗಳು ನಿಮಗಾಗಿ..!

1. ಮೆಂತೆ ಸೊಪ್ಪಿನ ದೋಸೆ

Related posts

namma-ooru-namma-hemme-campaign-madarahalli-darshan-puttannaiah-mandya

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್

August 22, 2026
mla-darshan-puttannaiah-surprise-visit-pandavapura-public-places-mandya

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ

August 22, 2026

ಬೇಕಾಗುವ ಸಾಮಗ್ರಿಗಳು

ದೋಸೆ ಅಕ್ಕಿ – 2 ಕಪ್
ಉದ್ದಿನಬೇಳೆ – 1/2 ಕಪ್
ಮೆಂತೆ – 1 ಚಮಚ
ಮೆಂತೆ ಸೊಪ್ಪು – 1 ಕಟ್ಟು
ರುಚಿಗೆ ತಕ್ಕಷ್ಟು ‌ಉಪ್ಪು

ಮಾಡುವ ವಿಧಾನ
Saakshatv cooking recipe prepare menthe soppu dose
ಮೊದಲಿಗೆ ದೋಸೆ ಅಕ್ಕಿ, ಮೆಂತೆಯನ್ನು ತೊಳೆದು ‌4 ಗಂಟೆಗಳ ಕಾಲ ನೀರಲ್ಲಿ ನೆನೆಸಿಡಿ. ಉದ್ದಿನಬೇಳೆಯನ್ನು ಸಾಕಷ್ಟು ನೀರಿನಲ್ಲಿ 2 ಗಂಟೆಗಳ ಕಾಲ ‌ನೆನೆಸಿಡಿ. ನೀರನ್ನು ಸೋಸಿ ದೋಸೆ ಅಕ್ಕಿ ಮತ್ತು ಮೆಂತೆ ಹಾಗೂ ಉದ್ದಿನಬೇಳೆಯನ್ನು ಚೆನ್ನಾಗಿ ರುಬ್ಬಿ.‌ ರಾತ್ರಿಯಿಡೀ ಹುದುಗಲು ಬಿಡಿ. ಮರುದಿನ ಬೆಳಗ್ಗೆ ಹಿಟ್ಟಿಗೆ ಉಪ್ಪು ಸೇರಿಸಿ ಕಲಸಿ.‌ ಮೆಂತೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸೇರಿಸಿ.
ದೋಸೆ ತವಾಗೆ ಎಣ್ಣೆ ಸವರಿ ‌‌ದೋಸೆ ‌ಹಿಟ್ಟನ್ನು ಹೊಯ್ದು ವೃತ್ತಾಕಾರವಾಗಿ ‌ಹರಡಿ. ಬಿಸಿಯಾದ ಗರಿಗರಿ ದೋಸೆಯನ್ನು ಚಟ್ನಿ ಜೊತೆಗೆ ಸವಿಯಿರಿ.

2. ಸೆಟ್ ‌ದೋಸೆ

ಬೇಕಾಗುವ ಸಾಮಗ್ರಿಗಳು

ಅಕ್ಕಿ – 1 ಕಪ್
ಉದಿನ ಬೇಳೆ – 1/2 ಕಪ್
ಅವಲಕ್ಕಿ 1/2 ಕಪ್
ಮೆಂತೆ – 1 ಚಮಚ
ಅಡಿಗೆ ಸೋಡಾ – ಚಿಟಿಕೆಯಷ್ಟು
ಕ್ಯಾರೆಟ್ ತುರಿ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

Saakshatv cooking recipe how to prepare set dosa

ಅಕ್ಕಿ ಮತ್ತು ಉದ್ದಿನಬೇಳೆಯನ್ನು ಮತ್ತು ಮೆಂತೆಯನ್ನು ಪ್ರತ್ಯೇಕವಾಗಿ ನೆನೆಸಿಡಿ
ರುಬ್ಬುವ 30 ನಿಮಿಷಗಳ ಮೊದಲು ಅವಲಕ್ಕಿಯನ್ನು ಬಿಸಿ ನೀರಿನಲ್ಲಿ ನೆನೆಸಿಡಿ
ನಂತರ ಎಲ್ಲವನ್ನು ಚೆನ್ನಾಗಿ ರುಬ್ಬಿ … ಉಪ್ಪು ಸೇರಿಸಿ … ರಾತ್ರಿಯಿಡೀ ಹುದುಗಿಸಿ …
ದೋಸೆ ಮಾಡುವ ಮೊದಲು ಅಡಿಗೆ ಸೋಡಾ ಸೇರಿಸಿ
ದೋಸೆ ತವಾಗೆ ಎಣ್ಣೆ ಸವರಿ ಬಿಸಿ ಮಾಡಿ. ಹಿಟ್ಟನ್ನು ಹೊಯ್ದು ವೃತ್ತಾಕಾರವಾಗಿ ಹರಡಿ … ಅದರ ಮೇಲೆ ತುರಿದ ಕ್ಯಾರೆಟ್ ಮತ್ತು ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ …. ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ.. ಚಟ್ನಿಗಳೊಂದಿಗೆ ಸೆಟ್ ದೋಸೆ ಸವಿಯಿರಿ.

ಇದನ್ನೂ ಓದಿ.. ಬನ್ಸ್

3. ಧಿಡೀರ್ ಟೊಮೆಟೊ ದೋಸೆ

ಬೇಕಾಗುವ ಸಾಮಾಗ್ರಿಗಳು

ಟೊಮೆಟೊ – 2
ಒಣಮೆಣಸು – 2
ಶುಂಠಿ – 1/2 ಇಂಚು
ರವೆ – 1/2 ಕಪ್
ಅಕ್ಕಿ ಹಿಟ್ಟು – 1/4 ಕಪ್
ನೀರು – ಅಗತ್ಯವಿರುವಷ್ಟು
ಈರುಳ್ಳಿ – 1
ಜೀರಿಗೆ – 1 ಚಮಚ
ಗೋಧಿ ಹಿಟ್ಟು – 2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ ಸ್ವಲ್ಪ.
Saakshatv cookingrecipe how to prepare tomato dosa
ಮಾಡುವ ವಿಧಾನ

ಮೊದಲಿಗೆ ಟೊಮೆಟೊ, ಶುಂಠಿಗಳನ್ನು ಚಿಕ್ಕದಾಗಿ ಕತ್ತರಿಸಿ. ಮಿಕ್ಸಿ ಜಾರಿಗೆ ಹಾಕಿ, ಒಣಮೆಣಸು ಸೇರಿಸಿ ಚೆನ್ನಾಗಿ ರುಬ್ಬಿ.
ಈಗ ಒಂದು ‌ಅಗಲವಾದ ಪಾತ್ರೆ ತೆಗೆದುಕೊಂಡು ಅದಕ್ಕೆ ರವೆ, ಗೋಧಿ ಹಿಟ್ಟು ಸೇರಿಸಿ, 1 ಕಪ್ ನೀರು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ರುಬ್ಬಿಟ್ಟುಕೊಂಡ ಟೊಮೆಟೊ ಮಿಶ್ರಣ, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪು, ಈರುಳ್ಳಿ ಜೀರಿಗೆ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಅರ್ಧ ಗಂಟೆ ಈ ಹಿಟ್ಟಿನ ಮಿಶ್ರಣವನ್ನು ಹಾಗೆ ಬಿಡಿ.
ನಂತರ ದೋಸೆ ಹಿಟ್ಟಿನ ಹದಕ್ಕೆ ಹಿಟ್ಟನ್ನು ಕಲಸಿ. ಈಗ ತವಾದ ಮೇಲೆ ಎಣ್ಣೆ ಸವರಿ ದೋಸೆ ಹೊಯ್ಯಿರಿ. ಎರಡೂ ಕಡೆ ಹೊಂಬಣ್ಣಕ್ಕೆ ತಿರುಗುವವರೆಗೆ ಬೇಯಿಸಿಕೊಳ್ಳಿ. ಈಗ ರುಚಿಯಾದ ಬಿಸಿ ಬಿಸಿ ಟೊಮೆಟೊ ದೋಸೆಯನ್ನು ಚಟ್ನಿ ಜೊತೆ ಸವಿಯಿರಿ.

 

4. ಮಂಡಕ್ಕಿ ದೋಸೆ ಮತ್ತು ಈರುಳ್ಳಿ ಚಟ್ನಿ

ಮಂಡಕ್ಕಿ ದೋಸೆಗೆ ಬೇಕಾಗುವ ಸಾಮಗ್ರಿಗಳು

ದೋಸೆ ಅಕ್ಕಿ – 2 ಕಪ್
ಮಂಡಕ್ಕಿ – 2 1/2 ಕಪ್
ಮೊಸರು – 2 ಕಪ್
ರುಚಿಗೆ ತಕ್ಕಷ್ಟು ಉಪ್ಪು

ಈರುಳ್ಳಿ ಚಟ್ನಿಗೆ ಬೇಕಾಗುವ ಸಾಮಗ್ರಿಗಳು
ಈರುಳ್ಳಿಗಳು – 5
ತೆಂಗಿನಕಾಯಿ ತುರಿ – 1ಕಪ್
ಬೇಳೆ – 1 ಮುಷ್ಟಿ
ಕೆಂಪು ಮೆಣಸು – 10
ಬ್ಯಾಡಗಿ ಮೆಣಸು – 5
ಹುಣಸೆಹಣ್ಣಿನ ತಿರುಳು – 1 ಚಮಚ
ಬೆಲ್ಲ – ಸಣ್ಣ ತುಂಡು
ರುಚಿಗೆ ತಕ್ಕಷ್ಟು ಉಪ್ಪು

mandakki dosa

ದೋಸೆ ಮಾಡುವ ವಿಧಾನ

ಮೊದಲನೆಯದಾಗಿ ಅಕ್ಕಿಯನ್ನು ಮೊಸರಿನಲ್ಲಿ ಮತ್ತು ಮಂಡಕ್ಕಿಯನ್ನು ನೀರಿನಲ್ಲಿ 5 ರಿಂದ 6 ಗಂಟೆಗಳ ಕಾಲ ನೆನೆಸಿಡಿ. ನಂತರ ಮಿಕ್ಸಿ ಜಾರಿಗೆ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ. ರುಬ್ಬಿದ ಹಿಟ್ಟನ್ನು ದೊಡ್ಡ ಪಾತ್ರೆಗೆ ವರ್ಗಾಯಿಸಿ ರಾತ್ರಿಯಿಡೀ ಹುದುಗಲು ಹಾಗೆ ಬಿಡಿ.
ಬೆಳಿಗ್ಗೆ ಹಿಟ್ಟಿಗೆ ಉಪ್ಪನ್ನು ಬೆರೆಸಿ ಚೆನ್ನಾಗಿ ಕಲಸಿ. ನಂತರ ತವಾ ಬಿಸಿ ಮಾಡಿ ದೋಸೆ ಹುಯ್ಯಿರಿ.

ಈರುಳ್ಳಿ ಚಟ್ನಿ ಮಾಡುವ ವಿಧಾನ

ಮೊದಲಿಗೆ ಪಾನ್ ನಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಬೇಳೆ, ಕೆಂಪು ಮೆಣಸು, ಬ್ಯಾಡಗಿ ಮೆಣಸು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಮಿಕ್ಸಿ ಜಾರಿಗೆ ಇದನ್ನು ಸೇರಿಸಿ ತೆಂಗಿನಕಾಯಿ, ಉಪ್ಪು, ಬೆಲ್ಲ, ಹುಣಸೆಹಣ್ಣು ಸೇರಿಸಿ. ಚೆನ್ನಾಗಿ ರುಬ್ಬಿ.
ಬಳಿಕ ಚಟ್ನಿಗೆ ಸಾಸಿವೆ ಒಗ್ಗರಣೆ ‌ಕೊಡಿ.

ನಂತರ ಚಟ್ನಿಯೊಂದಿಗೆ ಬಿಸಿ ಬಿಸಿಯಾದ ದೋಸೆಯನ್ನು ಸವಿಯಿರಿ.

5. ತುಪ್ಪ ದೋಸೆ ಮತ್ತು ಆಲೂ ಸಾಗು

ದೋಸೆ ಹಿಟ್ಟಿಗೆ ಬೇಕಾಗುವ ಸಾಮಗ್ರಿಗಳು

ದೋಸೆ ಅಕ್ಕಿ – 3/4 ಕಪ್
ಇಡ್ಲಿ ಅಕ್ಕಿ – 1 1/4 ಕಪ್
ಮೆಂತ್ಯ ಬೀಜಗಳು – 1/4 ಕಪ್
ಉದ್ದಿನಬೇಳೆ – 1/4 ಕಪ್
ಮಂಡಕ್ಕಿ – 3/4 ಕಪ್
ರುಚಿಗೆ ತಕ್ಕಷ್ಟು ಉಪ್ಪು

ಆಲೂ ಸಾಗಿಗೆ ಬೇಕಾಗುವ ಸಾಮಗ್ರಿಗಳು

ಆಲೂಗಡ್ಡೆ – 2
ಎಣ್ಣೆ – 2 ಚಮಚ
ಸಾಸಿವೆ – 1/2 ಚಮಚ
ಹಸಿಮೆಣಸಿನಕಾಯಿ ಪೇಸ್ಟ್ – 1 ಚಮಚ
ಇಂಗು – ಚಿಟಿಕೆಯಷ್ಟು
ಅರಿಶಿನ ಪುಡಿ – ಚಿಟಿಕೆಯಷ್ಟು
ರುಚಿಗೆ ತಕ್ಕಷ್ಟು ಉಪ್ಪು
ಈರುಳ್ಳಿ – 1
ಹುರಿದ ಬೇಳೆ ಪುಡಿ – ಸ್ವಲ್ಪ

Saakshatv cookingrecipe ghee dosa

ಮಾಡುವ ವಿಧಾನ

ದೋಸೆ ಅಕ್ಕಿ, ಇಡ್ಲಿ ಅಕ್ಕಿ, ಮೆಂತ್ಯ ಬೀಜಗಳು, ಉದ್ದಿನಬೇಳೆ, ಮಂಡಕ್ಕಿ ಒಟ್ಟಿಗೆ 3-4 ಗಂಟೆ ನೆನೆ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಯವಾಗಿ ರುಬ್ಬಿ. ರಾತ್ರಿಯಿಡೀ ಹುದುಗಲು ಬಿಡಿ.

ಆಲೂ ಸಾಗು ಮಾಡುವ ವಿಧಾನ

ಮೊದಲಿಗೆ ‌ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಸಾಸಿವೆ ಬೀಜಗಳನ್ನು ಸೇರಿಸಿ.‌ ಅದು ಸಿಡಿದ ಬಳಿಕ ಹಸಿಮೆಣಸಿನಕಾಯಿ ಪೇಸ್ಟ್, ಇಂಗು, ಅರಿಶಿನ ಪುಡಿ ಸೇರಿಸಿ. ನಂತರ ಕತ್ತರಿಸಿದ ಈರುಳ್ಳಿ ಸೇರಿಸಿ ಮೃದುವಾಗುವವರೆಗೆ ಹುರಿಯಿರಿ ಮತ್ತು ಬೇಯಿಸಿದ ಆಲೂ ಸೇರಿಸಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ, ಹುರಿದ ಬೇಳೆ ಪುಡಿಯನ್ನು ಬೆರೆಸಿ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಎಷ್ಟು ದಪ್ಪ ಬೇಕು ಅಷ್ಟಕ್ಕೆ ಸರಿಹೊಂದಿಸಿ.

ಈಗ ದೋಸೆ ಕಾವಲಿಗೆ ಎಣ್ಣೆಯನ್ನು ಸವರಿ ‌ದೋಸೆಗಳನ್ನು ಮಾಡಿ. ಒಂದರ ಮೇಲೆ ಒಂದನ್ನು ಇರಿಸಿ ಆಲೂ ಸಾಗು ಸೇರಿಸಿ. ಅದರ ಮೇಲೆ ಚಟ್ನಿ ಸೇರಿಸಿ ಮತ್ತು ತುಪ್ಪವನ್ನು ಹರಡಿ.

Tags: #saakshatvcookingFood
ShareTweetSendShare
Join us on:

Related Posts

namma-ooru-namma-hemme-campaign-madarahalli-darshan-puttannaiah-mandya

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್

by admin
August 22, 2026
0

ನಮ್ಮ ಊರು ನಮ್ಮ ಹೆಮ್ಮೆ ಅಭಿಯಾನದ ಯಶಸ್ವಿ ಹೆಜ್ಜೆಗಳು ಮಾಡರಹಳ್ಳಿಯಲ್ಲಿ ಮೂಡಿಬಂದ ಜನಪರ ಕಾಳಜಿ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್...

mla-darshan-puttannaiah-surprise-visit-pandavapura-public-places-mandya

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ

by admin
August 22, 2026
0

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ ಮಿಂಚಿನ ಸಂಚಾರಕ್ಕೆ ಕಾರಣವಾದ ಮೇಲುಕೋಟೆ ಶಾಸಕ ಸ್ಥಳದಲ್ಲೇ ಸಮಸ್ಯೆಗಳ ಪರಿಶೀಲನೆ ಮತ್ತು ಅಧಿಕಾರಿಗಳೊಂದಿಗೆ...

ಕಣ್ಣಿಗೆ 3 ದೇಹಕ್ಕೆ 200 ಪೆಲೆಟ್ ಗುಂಡುಗಳು ಬಿದ್ದರೂ ಪೊಲೀಸರ ಮೌನವೇಕೆ? ಎಫ್ ಐಆರ್ ದಾಖಲಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ:ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

ಕಣ್ಣಿಗೆ 3 ದೇಹಕ್ಕೆ 200 ಪೆಲೆಟ್ ಗುಂಡುಗಳು ಬಿದ್ದರೂ ಪೊಲೀಸರ ಮೌನವೇಕೆ? ಎಫ್ ಐಆರ್ ದಾಖಲಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ:ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

by Shwetha
August 22, 2026
0

ನವದೆಹಲಿ: ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೆಹಲಿಯ ಸಂಸತ್ ಭವನ...

3 ವರ್ಷಗಳ ಬಳಿಕ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್; ಆರೋಗ್ಯ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ

3 ವರ್ಷಗಳ ಬಳಿಕ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್; ಆರೋಗ್ಯ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ

by Shwetha
August 22, 2026
0

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ, ಸುಮಾರು ಮೂರು ವರ್ಷಗಳ ಬಳಿಕ ಅವರನ್ನು ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಆರೋಗ್ಯ...

ನನ್ನ ಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆ: ಕೋಟಿ ಕೊಟ್ಟರೂ ಸಿಗದ ಪ್ರಚಾರ- ಸೋಷಿಯಲ್ ಮೀಡಿಯಾ ವ್ಯಂಗ್ಯಕ್ಕೆ ವಿನಯ್ ಗೌಡ ಬಿಂದಾಸ್ ಉತ್ತರ

ನನ್ನ ಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆ: ಕೋಟಿ ಕೊಟ್ಟರೂ ಸಿಗದ ಪ್ರಚಾರ- ಸೋಷಿಯಲ್ ಮೀಡಿಯಾ ವ್ಯಂಗ್ಯಕ್ಕೆ ವಿನಯ್ ಗೌಡ ಬಿಂದಾಸ್ ಉತ್ತರ

by Shwetha
August 22, 2026
0

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ಜ್ಯೂರಿಯಾಗಿ ಕಾಣಿಸಿಕೊಂಡಿರುವ ನಟ ವಿನಯ್ ಗೌಡ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram