ಲಸಿಕೆ ವಿತರಣೆಯಲ್ಲಿ ಇಡೀ ದೇಶದಲ್ಲಿ ಬೆಂಗಳೂರಿಗೆ 1ನೇ ಸ್ಥಾನ
ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಇಡೀ ದೇಶಾದ್ಯಂತ ಲಸಿಕಾ ಮಹಾಮೇಳವೇ ನಡೆಯಿತು. ಈ ವೇಳೆ ಕೋಟ್ಯಾಂತರ ಜನರು ಲಸಿಕೆ ಪಡೆದುಕೊಂಡಿದ್ದಾರೆ. ಈ ರೀತಿ ಇಡೀ ದೇಶದಲ್ಲಿ ಅತಿ ಹೆಚ್ಚು ಲಸಿಕೆ ವಿತರಣೆ ಮಾಡಲಾದ ರಾಜ್ಯ ನಮ್ಮ ಕರ್ನಾಟಕವಾಗಿದೆ. ರಾತ್ರಿ 9 ಗಂಟೆಯವರೆಗೂ ರಾಜ್ಯದಲ್ಲಿ ಒಟ್ಟು 26.92 ಲಕ್ಷ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.
ಇನ್ನೂ ರಾಜ್ಯ ಬಿಟ್ಟರೆ 2ನೇ ಸ್ಥಾನದಲ್ಲಿರುವುದು ಬಿಹಾರವಾಗಿದೆ. ಬಿಹಾರದಲ್ಲಿ ಒಟ್ಟು 26.62 ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ. ಇನ್ನೂ ಉತ್ತರಪ್ರದೇಶವು 3ನೇ ಸ್ಥಾನದಲ್ಲಿದೆ. ಇಲ್ಲಿ 24.86 ಡೋಸ್ ಲಸಿಕೆ ನೀಡಲಾಗಿದೆ. ಕೇವಲ ಕರ್ನಾಟಕದಲ್ಲಿಯೇ ಒಟ್ಟು 12,000 ಕೊವಿಡ್ ಲಸಿಕೆ ವಿತರಣಾ ಬೂತ್ಗಳನ್ನು ತೆರೆಯಲಾಗಿತ್ತು. ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 3.98 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ.
ರಾಜ್ಯದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಬೆಳಗಾವಿ (2.39 ಲಕ್ಷ ಡೋಸ್) , 3ನೇ ಸ್ಥಾನದಲ್ಲಿ, ದಕ್ಷಿಣ ಕನ್ನಡ (1.33 ಲಕ್ಷ ಡೋಸ್), 4ನೇ ಸ್ಥಾನದಲ್ಲಿ ಬಳ್ಳಾರಿ (1.33 ಲಕ್ಷ ಡೋಸ್), 5ನೇ ತುಮಕೂರು ( 1.24 ಲಕ್ಷ ಡೋಸ್), 6ನೇ ಸ್ಥಾನದಲ್ಲಿ ಮಂಡ್ಯ (1.15 ಲಕ್ಷ ಡೋಸ್) ಇದೆ.








