“ರಿಯಲ್ ಹೀರೋ” ವಿರುದ್ಧ 20 ಕೋಟಿ ರೂ. ತೆರಿಗೆ ವಂಚನೆ ಆರೋಪ
ಕೊರೊನಾ ಹಾವಳಿಯ ನಡುವೆ ಲಾಕ್ ಡೌಔನ್ ಸಮಯದಿಮದ ಹಿಡಿದು ಇಲ್ಲಿಯವರೆಗೂ ಬಾಲಿವುಡ್ ನಟ ಸೋನು ಸುದ್ ತಮ್ಮ ಕೈಲಾದ ಸಹಾಯಗಳನ್ನ ಮಾಡುತ್ತಲೇ ಬಂದಿದ್ದಾರೆ. ಈ ಮೂಲಕ ಬಡವರ ಪಾಲಿನ ರಿಯಲ್ ಹೀರೋ ಆಗಿದ್ದಾರೆ. ರೀಲ್ ನಲ್ಲಿ ವಿಲ್ಲನ್ ಆದ್ರು ರಿಯಲ್ ಲೈಫ್ ನ ಹೀರೋ ಸೋನು ಸೂದ್ ಗೆ ಅಪಾರ ಅಭಿಮಾನಿಗಳಿದ್ದಾರೆ. ಅಂತೆಯೇ ಕೆಲವರ ಕುದ್ರುಷ್ಠಿಯು ಅವರ ಮೇಲಿದೆ.
ಇದೀಗ ಸೋನು ಸೂದ್ ಅವರು 20 ಕೋಟಿ ರೂ.ಗೂ ಅಧಿಕ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿಕೊಂಡಿದೆ. ಹೌದು ಐಟಿ ಇಲಾಖೆಯ ಅಧಿಕಾರಿಗಳು ಸತತ 3 ದಿನಗಳ ಕಾಲ ಸೂದ್ ಅವರ ಮುಂಬೈ ನಿವಾಸಕ್ಕೆ ಶೋಧಕ್ಕಾಗಿ ಭೇಟಿ ನೀಡಿದ ಬಳಿಕ ಸೋನು ವಿರುದ್ಧ ಐಟಿ ಅಧಿಕಾರಿಗಳು ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ ಸೋನು ಸೂದ್ ಅವರ ನಾನ್ಪ್ರಾಫಿಟ್ ಸಂಸ್ಥೆ, ಸೂದ್ ಚ್ಯಾರಿಟಿ ಫೌಂಡೇಶನ್, ವಿದೇಶಿ ಕೊಡುಗೆ ಕಾಯ್ದೆಯ ಉಲ್ಲಂಘನೆ ಮಾಡಿ, ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ವಿದೇಶಿ ಕೊಡುಗೆದಾರರಿಂದ ಸುಮಾರು 2.1 ಕೋಟಿ ರೂ. ಹಣವನ್ನು ಸಂಗ್ರಹಿಸಿದೆ ಎಂದೂ ಕೂಡ ಐಟಿ ಇಲಾಖೆ ಆರೋಪಿಸಿದೆ.
ಒಂದಾಗಲಿದೆ ಡಿಫರೆಂಟ್ & ಕಾಂಟ್ರವರ್ಸಿ : ಉಪ್ಪಿಗೆ ವರ್ಮಾ ಆಕ್ಷನ್ ಕಟ್
ಸೂದ್ ಮತ್ತು ಅವರ ಸಹಚರರ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ವೇಳೆ ತೆರಿಗೆ ವಂಚನೆ ಮಾಡಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಲೆಕ್ಕ ಹೊಂದಿಲ್ಲದ ಆದಾಯಗಳನ್ನು ಬೋಗಸ್ ಅನ್ಸೆಕ್ಯೂರ್ಡ್ ಲೋನ್ಗಳಾಗಿ ತೋರಿಸುವ ವಿಧಾನವನ್ನು ಅವರು ಅನುಸರಿಸಿರುವುದು ಕಂಡುಬಂದಿದೆ. ಈ ರೀತಿಯಾಗಿ 20 ಎಂಟ್ರಿಗಳು ಕಂಡುಬಂದಿದ್ದು, ಒಟ್ಟು ವಂಚಿಸಲಾದ ತೆರಿಗೆ ಮೊತ್ತವು 20 ಕೋಟಿ ರೂ.ಗಿಂತ ಹೆಚ್ಚಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ. ಇನ್ನೂ ಸೋನು ಸೂದ್ ಅವರು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಳ್ಳುವುದಾಗಿ ಘೋಷಿಸಿದ ಬೆನ್ನಲ್ಲೇ ಆದಾಯ ತೆರಿಗೆ ಇಲಾಕೆ ಅಧಿಕಾರಿಗಳು ರೇಡ್ ಮಾಡಿರುವುದು ಕೆಲ ಅನುಮಾನಗಳಿಗೂ ಕಾರಣವಾಗಿದೆ.








