ಒಂದಾಗಲಿದೆ ಡಿಫರೆಂಟ್ & ಕಾಂಟ್ರವರ್ಸಿ : ಉಪ್ಪಿಗೆ ವರ್ಮಾ ಆಕ್ಷನ್ ಕಟ್
ಬೆಂಗಳೂರು : ಡಿಫರೆಂಟ್ ಗೆ ಕೇರ್ ಆಫ್ ಅಡ್ರೆಸ್ ಉಪೇಂದ್ರ.. ಕಾಂಟ್ರವರ್ಸಿಗೆ ಕೇರ್ ಆಫ್ ಅಡ್ರೆಸ್ ಆರ್ ಜಿವಿ.
ಈ ಇಬ್ಬರು ಒಂದಾಗಿ ಸಿನಿಮಾ ಮಾಡ್ತಾರೆ ಅಂದ್ರೆ ಅದೊಂದು ಸೆನ್ ಸೇಷನ್..!
ಯಾಕಂದ್ರೆ ಈ ಇಬ್ಬರಿಗೆ ಇಬ್ಬರೇ ಸರಿಸಾಟಿ. ಇವರು ಏನ್ ಮಾಡ್ರೂ ಸುದ್ದಿಯಾಗುತ್ತೆ. ಆ ವಿಚಾರ ಟಾಕ್ ಆಫ್ ದಿ ಟೌನ್ ಆಗುತ್ತೆ.
ಸಿನಿಮಾ ಪ್ರಪಂಚದಲ್ಲಿ ಮಾಸ್ಟರ್ ಮೈಂಡ್ ಗಳೆಂದೇ ಗುರುತಿಸಿಕೊಂಡಿರುವ ಈ ಇಬ್ಬರು ಇದೇ ಮೊದಲ ಬಾರಿಗೆ ಒಂದಾಗಿ ಸಿನಿಮಾ ಮಾಡಲಿದ್ದಾರೆ.
ಈ ವಿಚಾರವನ್ನು ಸ್ವತಃ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರೇ ತಿಳಿಸಿದ್ದಾರೆ.
ಇಂದು ರಿಯಲ್ ಸ್ಟಾರ್ ಉಪೇಂದ್ರ ಅವರು 53ನೇ ವಸಂತಕ್ಕೆ ಕಾಲಿಡುತ್ತಿದ್ದು, ಈ ವಿಶೇಷ ದಿನದಂದು ವರ್ಮಾ ಉಪ್ಪಿ ಜೊತೆಗೆ ಸಿನಿಮಾ ಮಾಡುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಈ ಕುರಿತಂತೆ ರಾಮ್ ಗೋಪಾಲ್ ವರ್ಮಾರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಾನು ಹಾಗೂ ಉಪೇಂದ್ರರವರು ಶೀಘ್ರವೇ ಆಕ್ಷನ್ ಸಿನಿಮಾವನ್ನು ಮಾಡಲಿದ್ದೇವೆ ಎಂದು ಘೋಷಿಸಲು ಸಂತಸವಾಗುತ್ತಿದೆ. ಹುಟ್ಟು ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.