ಕರಿಬೇವು ಸೊಪ್ಪಿನ ಆರೋಗ್ಯ ಪ್ರಯೋಜನಗಳು
ಕರಿಬೇವು ಸೊಪ್ಪು ಸುವಾಸನೆಗೆ ಬಹಳ ಜನಪ್ರಿಯ. ಇದು ರುಚಿ ಮತ್ತು ಸುವಾಸನೆಯ ಜೊತೆಗೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಕರಿಬೇವಿನ ಸೊಪ್ಪು ವಿಟಮಿನ್ ಎ , ಬಿ, ಸಿ, ಬಿ 2, ಕಬ್ಬಿಣ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಕ್ಯಾಲ್ಸಿಯಂ ಕೊರತೆ ಮತ್ತು ಇತರ ಹಲವು ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಕರಿಬೇವು ಸೊಪ್ಪು ಬಳಸಲಾಗುತ್ತದೆ. ಅಷ್ಟೇ ಅಲ್ಲ ಕರಿಬೇವಿನ ರಸ ಸಹ ಆರೋಗ್ಯಕ್ಕೆ ಉತ್ತಮವಾಗಿದೆ.
ಕರಿಬೇವು ರಸವನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಇದು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ

ಕರಿಬೇವಿನ ರಸವನ್ನು ತಯಾರಿಸುವ ವಿಧಾನ
ಕರಿಬೇವಿನ ರಸವನ್ನು ತಯಾರಿಸಲು, 8-10 ಕರಿಬೇವಿನ ಎಲೆಗಳು, ನೀರು, ಕಪ್ಪು ಉಪ್ಪು, ಜೇನುತುಪ್ಪ ಮತ್ತು ಪುದೀನ ಎಲೆಗಳು ಬೇಕಾಗುತ್ತವೆ.
ಮೊದಲು ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಮಿಕ್ಸಿ ಜಾರ್ ಗೆ ಹಾಕಿ ಮತ್ತು ಚೆನ್ನಾಗಿ ರುಬ್ಬಿ. ನಂತರ ರಸವನ್ನು ತೆಗೆಯಿರಿ. ನೀವು ಇದನ್ನು ನಿಯಮಿತವಾಗಿ ಸೇವಿಸಬಹುದು.
ಕರಿಬೇವಿನ ರಸದ ಪ್ರಯೋಜನಗಳು
ಕರಿಬೇವು ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಜೊತೆಗೆ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವೇಗವಾಗಿ ತೂಕ ಇಳಿಸಲು ಸಹ ಕರಿಬೇವನ್ನು ನಿಯಮಿತವಾಗಿ ಸೇವಿಸಬಹುದು. ಇದು ಹೇರಳವಾಗಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಕರಿಬೇವಿನ ರಸವು ಚಯಾಪಚಯವನ್ನು ವೇಗಗೊಳಿಸುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು.
ಹೊಟ್ಟೆ ಉಬ್ಬರಕ್ಕೆ ಚಿಕಿತ್ಸೆ ನೀಡಲು ಕರಿಬೇವಿನ ಎಲೆಗಳನ್ನು ಬಳಸಬಹುದು. ಇದಕ್ಕಾಗಿ ನೀವು ಒಣಗಿದ ಕರಿಬೇವಿನ ಎಲೆಗಳನ್ನು ಪುಡಿಮಾಡಿ ಮಜ್ಜಿಗೆಯಲ್ಲಿ ಬೆರೆಸಬೇಕು. ಅತಿಸಾರ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಎದುರಿಸಲು ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಕರಿಬೇವಿನ ಎಲೆಗಳನ್ನು ರುಬ್ಬುವ ಮೂಲಕ ಪೇಸ್ಟ್ ತಯಾರಿಸಬಹುದು. ಇದಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಅನ್ನು ಚರ್ಮ ಸುಟ್ಟಿದ್ದರೆ ಅಥವಾ ಗಾಯಗಳಿಗೆ ನೇರವಾಗಿ ಬಳಸಬಹುದು. ಪೇಸ್ಟ್ ಅನ್ನು ರಾತ್ರಿಯಿಡೀ ಹಚ್ಚಿ ಹಾಗೆ ಬಿಡಬೇಕು ಅಥವಾ ಗಾಯವನ್ನು ಬ್ಯಾಂಡೇಜ್ನಿಂದ ಮುಚ್ಚಬಹುದು. ಕರಿಬೇವಿನ ಎಲೆಗಳಲ್ಲಿರುವ ಕಾರ್ಬಜೋಲ್ ಆಲ್ಕಲಾಯ್ಡ್‌ಗಳು ಹೆಚ್ಚು ಆಳವಿಲ್ಲದ ಗಾಯಗಳ ಗುಣಪಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಬನ್ಸ್ https://t.co/ojvqfbyHlI
— Saaksha TV (@SaakshaTv) September 16, 2021
ಕರಿಮೆಣಸು/ಪೆಪ್ಪರ್/ಒಳ್ಳೆ ಮೆಣಸಿನ ಆರೋಗ್ಯ ಪ್ರಯೋಜನಗಳು https://t.co/4DefxlCZSV
— Saaksha TV (@SaakshaTv) September 16, 2021
ಮೊಬೈಲ್ ಫೋನ್ ಬಳಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು https://t.co/cIk5iPsAsc
— Saaksha TV (@SaakshaTv) September 17, 2021
ಎಟಿಎಂ ವಂಚನೆಯನ್ನು ತಪ್ಪಿಸುವುದು ಹೇಗೆ ? https://t.co/PKTNBM6yIK
— Saaksha TV (@SaakshaTv) September 15, 2021
#Saakshatv #healthtips #healthbenefits








