ಆರ್ ಸಿಬಿಯನ್ಸ್ ವಿರಾಟ್ ಶಾಕ್ : ಆರ್ ಸಿಬಿ ನಾಯಕತ್ವಕ್ಕೂ ಕೊಹ್ಲಿ ಗುಡ್ ಬೈ
ಪ್ರಪಂದಾದ್ಯಂತ ಇರುವ ಕೋಟ್ಯಾಂತರ ಆರ್ ಸಿಬಿ ಅಭಿಮಾನಿಗಳಿಗೆ ಕಿಂಗ್ ಕೊಹ್ಲಿ ಶಾಕ್ ನೀಡಿದ್ದಾರೆ. ಈಗಾಗಲೇ ಟೀಂ ಇಂಡಿಯಾದ ಟಿ-20 ತಂಡದ ಕ್ಯಾಪ್ಟನ್ಸಿಗೆ ಗುಡ್ ಬೈ ಹೇಳೋದಾಗಿ ತಿಳಿಸಿರುವ ಇದೀಗ ರಾಯಲ್ ಚಾಲೆಂಜಸ್ ಬೆಂಗಳೂರು ತಂಡ ನಾಯಕತ್ವದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ. ಮುಂದಿನ ಸೀಸನ್ನಿಂದ ಆರ್ ಸಿಬಿ ತಂಡವನ್ನು ಮುನ್ನಡೆಸುವುದಿಲ್ಲ ಎಂದು ಶಾಕ್ ನೀಡಿದ್ದಾರೆ. ಆದರೆ ತಾನು ಆಡುವ ಕಟ್ಟಕಡೆಯ ಪಂದ್ಯದ ತನಕ ಆರ್ಸಿಬಿ ತಂಡದಲ್ಲಿಯೇ ಇರುತ್ತೇನೆ ಅನ್ನುವುದನ್ನು ವಿರಾ ಟ್ ಸ್ಪಷ್ಟಪಡಿಸಿದ್ದಾರೆ.
ವಿರಾಟ್ ಕಳೆದ 14 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾರೆ. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಡೇನಿಯಲ್ ವೆಟ್ಟೋರಿ ನಾಯಕತ್ವದಲ್ಲಿ ಆಡಿದ್ದರು. ಅದಾದ ಬಳಿಕ ಆರ್ಸಿಬಿ ನಾಯಕನಾದರು. 9 ವರ್ಷಗಳ ನಾಯಕತ್ವದಲ್ಲಿ ವಿರಾಟ್ ಸಾಕಷ್ಟು ಒತ್ತಡ, ಸಾಕಷ್ಟು ಪರಿಶ್ರಮ ಆದ್ರೂ ಇಲ್ಲೀವರೆಗೂ ಆರ್ಸಿಬಿ ತಂಡ ಮಾತ್ರ ಚಾಂಪಿಯನ್ ಪಟ್ಟವನ್ನ ಅಲಂಕರಿಸಿಲ್ಲ. ಇದೀಗ ಆರ್ಸಿಬಿಯ ಸತತ 9 ವರ್ಷಗಳ ನಾಯಕ ವಿರಾಟ್ ಕೊಹ್ಲಿ, ಆರ್ಸಿಬಿ ಕ್ಯಾಪ್ಟನ್ಸಿಗೆ ವಿದಾಯ ಹೇಳಿದ್ದಾರೆ.
2021 ರ ಸೀಸನ್ 14 ರ ಬಳಿಕ ವಿರಾಟ್ ನಾಯಕನಾಗಿ ಇರೋದಿಲ್ಲ ಅಂತ ಹೇಳಿದ್ದಾರೆ. ಈ ಕುರಿತು ಸ್ವತಃ ಅವರೇ ಮಾತನಾಡಿದ್ದು, ಈ ಬಗ್ಗೆ ಮ್ಯಾನೇಜ್ಮೆಂಟ್ ಜೊತೆ ಸಾಕಷ್ಟು ಚರ್ಚೆ ನಡೆಸಿದ್ದೇನೆ. ಆದ್ರೆ ಯಾವುದೇ ಕಾರಣಕ್ಕೂ ಆರ್ಸಿಬಿಯನ್ನ ಬಿಡೋದಿಲ್ಲ, ಆರ್ಸಿಬಿ ತಂಡಕ್ಕಾಗೇ ಆಡುತ್ತೇನೆ. ಐಪಿಎಲ್ ಆಡೋವರೆಗೂ ಅದು ಆರ್ಸಿಬಿ ತಂಡಕ್ಕೆ ಮಾತ್ರ ಅಂದಿದ್ದಾರೆ. ಒಂದು ಕಡೆ ಆರ್ಸಿಬಿ ಅಭಿಮಾನಿಗಳಿಗೆ ಇದು ಶಾಕಿಂಗ್ ನ್ಯೂಸ್, ಮತ್ತೊಂದು ಕಡೆ, ವಿರಾಟ್ ಆರ್ಸಿಬಿಯಲ್ಲೇ ಇರ್ತೀನಿ ಅನ್ನೋ ಮಾತಿನಿಂದ ಸಣ್ಣದೊಂದು ಸಮಾದಾನ. ಯಾವುದಕ್ಕೆ ಖುಷಿಪಡಬೇಕೋ, ಯಾವುದಕ್ಕೆ ಬೇಸರ ವ್ಯಕ್ತಪಡಿಸಬೇಕೋ ಅನ್ನೋ ಗೊಂದಲ.









