ಪಾಕಿಸ್ತಾನದಲ್ಲಿ ಹಿಂದೂ ಕುಟುಂಬಕ್ಕೆ ಚಿತ್ರಹಿಂಸೆ – ನೀರು ತಂದಿದ್ದೇ ತಪ್ಪಾಗೋಯ್ತಾ..?
ಪಾಕಿಸ್ತಾನ : ಪಾಕಿಸ್ತಾನದಲ್ಲಿ ಅಲ್ಲಿನ ಮಾಧ್ಯಮಗಳ ನಿರೂಪಕರು ಆಗಾಗ ಭಾರತದ ಬಗ್ಗೆ ಭಾರತದಲ್ಲಿ ಅಲ್ಪ ಸಂಖ್ಯಾತರಿಗೆ ಕಿರುಕುಳವಾಗ್ತಿದೆ ಅಂತೆಲ್ಲಾ ಸುಳ್ಳು ಸುಳ್ಳು ಬೊಗಳೆ ಬಿಡುತ್ತಾ ಡಿಬೇಟ್ ಗಳನ್ನ ಮಾಡುತ್ತಾ ಮಾನ ಮರ್ಯಾದೆ ಕಳೆದುಕೊಂಡಿದ್ದಾರೆ. ಆದ್ರೆ ಅಲ್ಲಿನ ಸರ್ಕಾರ ಮಾಧ್ಯಮದವರಿಗೆ ಅಲ್ಲಿನ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ಹಿಂಸೆ ಕಿರುಕುಳ ಮಾತ್ರ ಕಣ್ಣಿಗೆ ಕಾಣಿಸ್ತಿಲ್ಲ. ಇದೀಗ ತಾಜಾ ಉದಾಹರಣೆ ಎಂಬಂತೆ ಒಂದು ಘಟನೆ ನಡೆದಿದ್ದು,, ನೇರವಾಗಿ ಭಾರತೀಯರನ್ನ ಕೆರಳಿಸಿದೆ.
ಅಲ್ಪಸಂಖ್ಯಾತ ಹಿಂದೂ ಕುಟುಂಬವೊಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಮಸೀದಿಯೊಂದರಿಂದ ಕುಡಿಯುವ ನೀರು ತಂದಿದಕ್ಕೆ , ಆ ಸ್ಥಳದ ಪಾವಿತ್ರ್ಯತೆಯನ್ನ ಹಾಳು ಮಾಡಲಾಗಿದೆ ಎಂದು ಆರೊಪಿಸಿರುವ ಕೆಲ ಅನಾಗರಿಕರರು ಹಿಂದೂ ಬಡ ರೈತ ಕುಟುಂಬಕ್ಕೆ ಚಿತ್ರ ಹಿಂಸೆ ನೀಡಿದ್ದಾರೆ. ಧಾರ್ಮಿಕ ಸ್ಥಳದ ಪಾವಿತ್ರ್ಯ ಹಾಳು ಮಾಡಲಾಗಿದೆ ಎಂದು ಆರೋಪಿಸಿ ಕುಟುಂಬದ ಕೆಲ ಸದಸ್ಯರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡು ಕಿರುಕುಳ ನೀಡಿದ್ದಾರೆ ಎಂದು ವರದಿಯಾಗಿದೆ.
ಕುಟುಂಬದ ಸದಸ್ಯರು ಸಮೀಪದ ಮಸೀದಿಯ ನಲ್ಲಿಯಿಂದ ನೀರು ತರಲು ಹೋದಾಗ ಸ್ಥಳೀಯರು ಅವರ ಮೇಲೆ ಹಲ್ಲೆ ಮಾಡಿರುವುದು ಗೊತ್ತಾಗಿದೆ. ಅಷ್ಟಕ್ಕೆ ಸುಮ್ಮನಾಗದೇ ಹೊಲದಲ್ಲಿ ಕೆಲಸ ಮುಗಿಸಿ ಬರುವಾಗಲೂ ಕುಟುಂಬ ಸದಸ್ಯರನ್ನು ಅಡ್ಡಗಟ್ಟಿ ಅವರನ್ನು ತಮ್ಮ ಮನೆ ಬಳಿ ಕರೆದುಕೊಂಡು ಹೋಗಿ ಒತ್ತೆಯಾಗಿರಿಸಿಕೊಂಡು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಹಲ್ಲೆ ಮಾಡಿದವರು ಆಡಳಿತಾರೂಢ ಪಿಟಿಐ ಪಕ್ಷಕ್ಕೆ ಸೇರಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರ ವಿರುದ್ಧ ಪೊಲೀಸರೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಹೇಳಲಾಗಿದೆ.








