ಕಾಡಾನೆ ಓಡಿಸಲು ಹೋದ ವ್ಯಕ್ತಿ ನಾಪತ್ತೆ
ಚಿಕ್ಕಮಗಳೂರು : ಜಿಲ್ಲೆಯ ಎಸ್.ಆರ್.ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಕಾಡಾನೆಯನ್ನು ಓಡಿಸಲು ಹೋದ ವ್ಯಕ್ತಿ ನಾಪತ್ತೆಯಾಗಿದ್ದಾರೆ.
50 ವಷ್ದ ಯಶವಂತ್ ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದು, ಸದ್ಯ ಹುಡುಕಾಟ ಮುಂದುವರೆದಿದೆ.
ಕಳೆದ ರಾತ್ರಿ ಯಶವಂತ್ ಅವರ ಜಮೀನಿಗೆ ಕಾಡಾನೆ ನುಗ್ಗಿದೆ.
ಈ ವೇಳೆ ಯಶವಂತ್ ಮತ್ತು ಅದೇ ಗ್ರಾಮದ ಹರೀಶ್ ಎಂಬುವವರು ಆನೆಯನ್ನು ಓಡಿಸಲು ಹೋಗಿದ್ದಾರೆ.
ಆದ್ರೆ ಇವರ ಮೇಲೆಯೇ ಕಾಡಾನೆ ತಿರುಗಿ ಬಿದ್ದಿದ್ದು, ಹರೀಶ್ ಗ್ರಾಮದತ್ತ ಓಡಿ ಬಂದಿದ್ದಾರೆ.
ಯಶವಂತ್ ಮಾತ್ರ ಗ್ರಾಮಕ್ಕೆ ಬಂದಿಲ್ಲ. ಅಲ್ಲದೇ ಕತ್ತಲಲ್ಲಿ ಆತ ಯಾವ ಕಡೆ ಹೋಗಿದ್ದಾನೆ ಎಂಬೋದು ಗೊತ್ತಿಲ್ಲ.
ಹೀಗಾಗಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಆದ್ರೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಮನವಿಗೆ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.









