ಭಾರತ ಬಂದ್ ಗೆ ನೈತಿಕತೆಯ ಬೆಂಬಲ ಕೊಡಿ : ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು : ಒಕ್ಕೂಟ ಸರ್ಕಾರ ಜಾರಿ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಸೋಮವಾರ ಭಾರತ್ ಬಂದ್ ಗೆ ರೈತ ಸಂಘಟನೆಗಳು ಕರೆ ನೀಡಿವೆ. ಕರ್ನಾಟಕದಲ್ಲೂ ಭಾರತ್ ಬಂದ್ ಗೆ ರೈತ ನಾಯಕರು ಬೆಂಬಲ ಸೂಚಿಸಿದ್ದಾರೆ.
ಶತಾಯಗತಾಯ ಸೋಮವಾರ ನಡೆಯಲಿರುವ ಭಾರತ ಬಂದ್ ಅನ್ನು ಯಶಸ್ವಿಗೊಳಿಸಬೇಕು ಎಂದು ರೈತ ನಾಯಕರು ಪಣತೊಟ್ಟಿದ್ದಾರೆ.
ಹೀಗಾಗಿ ರಾಜ್ಯದಲ್ಲಿ ಸಂಘ ಸಂಸ್ಥೆಗಳನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.
ಅಂದಹಾಗೆ ಭಾರತ್ ಬಂದ್ ಈಗಾಗಲೇ ಸಾಕಷ್ಟು ಸಂಘ ಸಂಸ್ಥೆಗಳು ನೈತಿಕ ಬೆಂಬಲ ಸೂಚಿಸಿವೆ.
ಆದ್ರೆ ಬಂದ್ ಯಶಸ್ವಿಯಾಗಲು ನೈತಿಕ ಬೆಂಬಲ ಸಾಲುವುದಿಲ್ಲ. ಹೀಗಾಗಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್, ಇಂದು ಬೆಳ್ಳಂ ಬೆಳಿಗ್ಗೆ ಬೆಂಗಳೂರಿನರುವ ಮಾರುಕಟ್ಟೆಗಳಿಗೆ ಭೇಟಿ ನೀಡಿ ಬಂದ್ ಗೆ ಬೆಂಬಲ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.
ಕೆ.ಆರ್ ಪುರಂ ಮಾರುಕಟ್ಟೆಗೆ ಭೇಟಿ ನೀಡಿದ್ದ ಕೋಡಿಹಳ್ಳಿ ಚಂದ್ರಶೇಖರ್, ಅಲ್ಲಿನ ವ್ಯಾಪರಿಗಳೊಂದಿಗೆ ಸಭೆ ಮಾಡಿ ಬಂದ್ ಮಾಡುತ್ತಿರುವ ಉದ್ದೇಶವೇನು ಎಂಬುವುದರ ಬಗ್ಗೆ ತಿಳಿಸಿದ್ದಾರೆ.