ಅರುಣಾಚಲ ಪ್ರದೇಶದಲ್ಲಿ ಭೂಕಂಪನ – 4.5 ರಷ್ಟು ತೀವ್ರತೆ
ಅರುಣಾಚಲ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಭೂಕಂಪನ ಸಂಭವಿಸಿದ್ದಾಗಿ ವರದಿಯಾಗಿದೆ.
ರಾತ್ರಿ 10.11 ಕ್ಕೆ ಪ್ಯಾಂಗಿನ್ನಿಂದ ಈಶಾನ್ಯಕ್ಕೆ 237 ಕಿಮೀ ದೂರದಲ್ಲಿ ಕಂಪನದ ಅನುಭವವಾಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 4.5 ರಷ್ಟು ದಾಖಲಾಗಿದೆ.
ಆದಾಗ್ಯೂ, ಭೂಕಂಪದಿಂದಾಗಿ ಇಲ್ಲಿಯವರೆಗೆ ಯಾವುದೇ ಪ್ರಾಣ ಹಾಸಿ , ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ ಎನ್ನಲಾಗಿದೆ.
ಈ ಹಿಂದೆ ಸೆಪ್ಟೆಂಬರ್ 19 ರಂದು ಅರುಣಾಚಲದಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು.
ಭೀಕರ ರಸ್ತೆ ಅಪಘಾತ : ಪರೀಕ್ಷೆಗೆ ತೆರಳುತ್ತಿದ್ದ 5 ವಿದ್ಯಾರ್ಥಿಗಳು ಸಾವು
ಅರುಣಾಚಲದಲ್ಲಿ ಚಾಂಗ್ಲಾಂಗ್ ನಿಂದ 70 ಕಿಮೀ ವಾಯುವ್ಯದಲ್ಲಿ ಮಧ್ಯಾಹ್ನ 3.60 ಕ್ಕೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಸಂಸ್ಥೆ ವರದಿ ಮಾಡಿದೆ.
ಈ ಭೂಕಂಪದ ಪ್ರಮಾಣವು ರಿಕ್ಟರ್ ಮಾಪಕದಲ್ಲಿ 4.4 ದಾಖಲಾಗಿದೆ. ಭೂಕಂಪದಿಂದ ಜನರು ಭಯಭೀತರಾಗಿದ್ದರು. ಆದರೆ, ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟದ ವರದಿಯಾಗಿಲ್ಲ.
ಮತ್ತೊಂದೆಡೆ, ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕ್ಯಾಂಪ್ಬೆಲ್ ಕೊಲ್ಲಿಯಲ್ಲಿ ಕೂಡ ಶುಕ್ರವಾರ ರಾತ್ರಿ 8.35 ರಲ್ಲಿ ಭೂಕಂಪನ ಸಂಭವಿಸಿತ್ತು.
ಭೂಕಂಪದ ರಾಷ್ಟ್ರೀಯ ಕೇಂದ್ರವು ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 5.2 ಎಂದು ವರದಿ ಮಾಡಿದೆ.







