ಭೀಕರ ರಸ್ತೆ ಅಪಘಾತ : ಪರೀಕ್ಷೆಗೆ ತೆರಳುತ್ತಿದ್ದ 5 ವಿದ್ಯಾರ್ಥಿಗಳು ಸಾವು
ರಾಜಸ್ಥಾನ : ಪರೀಕ್ಷೆ ಬರೆಯಲು ವ್ಯಾನ್ ನಲ್ಲಿ ತೆರಳುತ್ತಿದ್ದ ಐವರು ವಿದ್ಯಾರ್ಥಿಗಳು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಪುರದ ಹೆದ್ದಾರರಿಯಲ್ಲಿ ನಡೆದಿದೆ. REE ಪರೀಕ್ಷೆ ಬರೆಯಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
5 ವಿದ್ಯಾರ್ಥಿಗಳ ಜೊತೆಗೆ ವ್ಯಾನ್ ಚಾಲಕ ಕೂಡ ಮೃತಪಟ್ಟಿದ್ದಾರೆ. ಬರಾನ್ನಿಂದ ರೀಟ್ ಪರೀಕ್ಷೆ ಬರೆಯಲು 11 ಪರೀಕ್ಷಾರ್ಥಿಗಳು ವ್ಯಾನ್ನಲ್ಲಿ ತೆರಳುತ್ತಿದ್ದ ವೇಳೆ, ಚಕ್ಸುವಿನ ರಾಷ್ಟ್ರೀಯ ಹೆದ್ದಾರಿ 12ರ ನಿಮೋಡಿಯಾ ಬಳಿ ದುರಂತ ಸಂಭವಿಸಿದೆ. ದುರಂತದಲ್ಲಿ ನಾಲ್ವರು ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.
ವ್ಯಾನ್ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅನಾಹುತ ಸಂಭಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಪ್ರತಿ ದಿನ ಸ್ನಾನ ಮಾಡದ ಕಾರಣಕ್ಕೆ ಪತ್ನಿಗೆ ತಲಾಕ್ ಕೊಟ್ಟ..!