ಪ್ರತಿ ದಿನ ಸ್ನಾನ ಮಾಡದ ಕಾರಣಕ್ಕೆ ಪತ್ನಿಗೆ ತಲಾಕ್ ಕೊಟ್ಟ..!
ಉತ್ತರಪ್ರದೇಶ : ತಲಾಕ್ ನೀಡುವುದು ಕಾನೂನು ಬಾಹಿರ ಮಾಡಲಾಗಿದ್ರೂ ಕೂಡ ಅಲ್ಲಲ್ಲಿ ಇನ್ನೂವರೆಗೂ ಈ ಅನಿಷ್ಠ ಪದ್ದತಿ ಆಚರಣೆಯಲ್ಲಿದೆ. ಉತ್ತರಪ್ರದೇಶದ ಆಲಿಘಡದಲ್ಲಿ ಹುಚ್ಚ ಪತಿಯೊಬ್ಬ ತನ್ನ ಪತ್ನಿಗೆ ತಲಾಕ್ ನೀಡಿದ್ದಾನೆ. ಇದಕ್ಕೆ ವಿಚಿತ್ರ ಕಾರಣ ಕೊಟ್ಟಿದ್ದಾನೆ.
ಹೌದು.. ಪತ್ನಿ ಪ್ರತಿ ದಿನ ಸ್ನಾನ ಮಾಡುವುದಿಲ್ಲ ಅನ್ನೋ ಕಾರಣಕ್ಕೆ ಈ ಹುಚ್ಚ ಪತಿ ಆಕೆಗೆ ತಲಾಕ್ ನೀಡಿದ್ದಾನೆ. ಇದೇ ವಿಚಾರವಾಗಿ ಇವರಿಬ್ಬರ ನಡುವೆ ಆಗಾಗ ಜಗಳಗಳು ಆಗಗ್ತಿದ್ದವು ಎನ್ನಲಾಗಿದೆ. ಜಗಳವಾದಾಗೆಲ್ಲಾ ಪ್ರತಿದಿನ ಸ್ನಾನ ಮಾಡುವುದಾಗಿ ಹೇಳ್ತಿದ್ದ ಪತ್ನಿ ಮತ್ತದೇ ಚಾಳಿ ಮುಂದುವರೆಸಿದ್ರಿಂದ ಈತ ತಲಾಕ್ ಕೊಡೋ ನಿರ್ಧಾರ ಮಾಡಿದ್ದಾನಂತೆ. ಇನ್ನೂ ಈ ಬಗ್ಗೆ ಪತ್ನಿ ಆಲಿಘಡ ಮಹಿಳಾ ಸಮಿತಿಗೆ ದೂರು ನೀಡಿದ್ದಾಳೆ.
ಈ ಮಹಿಳೆ ತಮ್ಮ ಪತಿ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಲಿಖಿತ ದೂರು ನೀಡಿದ್ದಾರೆ. ಪ್ರತಿದಿನ ಸ್ನಾನ ಮಾಡುವುದಿಲ್ಲ ಎಂಬ ನೆಪವೊಡ್ಡಿ ವಿಚ್ಛೇದನ ಕೋರಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಿರುವ ಸಮಿತಿಯು ದಾಂಪತ್ಯಕ್ಕೆ ಸಂಬಂಧಿಸಿದ ನಿರ್ಧಾರಗಳ ಬಗ್ಗೆ ಯೋಚಿಸಲು ದಂಪತಿಗೆ ಸಮಯ ಕೊಟ್ಟಿದೆ ಎನ್ನಲಾಗಿದೆ. ಈ ಮಹಿಳೆ ಅಮನ್ ಎಂಬಾತನ ಜೊತೆಗೆ 2 ವರ್ಷಗಳ ಹಿಂದೆ ವಿವಾಹವಾಗಿದ್ದು, ಇವರಿಗೆ 1 ವರ್ಷದ ಪುಟ್ಟ ಮಗುವಿದೆ.