5 ವಿವಿಧ ಬಗೆಯ ರುಚಿಕರ ಬೋಂಡಾಗಳ ರೆಸಿಪಿಗಳು ನಿಮಗಾಗಿ..!
1. ಮಂಗಳೂರು ಬಿಸ್ಕೂಟ್ ಅಂಬಡೆ
ಬೇಕಾಗುವ ಸಾಮಗ್ರಿಗಳು:
1¼ ಕಪ್ ಸ್ವಚ್ಛಗೊಳಿಸಿದ ಉದ್ದಿನ ಬೇಳೆ
ನುಣ್ಣಗೆ ಕತ್ತರಿಸಿದ 2 – 3 ಹಸಿರು ಮೆಣಸಿನಕಾಯಿಗಳು
ಸಣ್ಣದಾಗಿ ಕತ್ತರಿಸಿದ 1 ಇಂಚಿನ ಶುಂಠಿ ತುಂಡು
ಕರಿಬೇವಿನ ಸೊಪ್ಪು ಸುಮಾರು 10 – 12 ಎಲೆಗಳು ಚಿಕ್ಕದಾಗಿ ಕತ್ತರಿಸಿ ಇಟ್ಟು ಕೊಳ್ಳಿ. Mangalore biscuit ambade recipes
1/2 ಟೀಸ್ಪೂನ್ ತಾಜಾ ಕರಿಮೆಣಸು ಹುಡಿ
ರುಚಿಗೆ ತಕ್ಕಷ್ಟು ಉಪ್ಪು
2 ಟೀಸ್ಪೂನ್ ತುರಿದ ಕೊಬ್ಬರಿ
ಹುರಿಯಲು ಸಾಕಷ್ಟು ಎಣ್ಣೆ

ಮಾಡುವ ವಿಧಾನ :
ಸ್ವಚ್ಛಗೊಳಿಸಿದ ಉದ್ದಿನ ಬೇಳೆಯನ್ನು ಕನಿಷ್ಠ 2 – 3 ಗಂಟೆಗಳ ಕಾಲ ನೆನೆಸಿ, ನಂತರ ನೀರನ್ನು ಬಸಿಯಿರಿ.
ಬ್ಲೆಂಡರ್ ಅಥವಾ ಗ್ರೈಂಡರ್ನಲ್ಲಿ, ಉದ್ದಿನ ಬೇಳೆಯನ್ನು ಉಪ್ಪಿನೊಂದಿಗೆ ಹೆಚ್ಚು ನೀರು ಸೇರಿಸದೆ ಚೆನ್ನಾಗಿ ರುಬ್ಬಿ.
ನಂತರ ಕತ್ತರಿಸಿದ ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆಗಳು, ಕರಿಮೆಣಸು ಹುಡಿ ಮತ್ತು ಕೊಬ್ಬರಿ ತುರಿ ಉದ್ದಿನ ಬೇಳೆ ಹಿಟ್ಟಿಗೆ ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟನ್ನು 30 ನಿಮಿಷಗಳ ಕಾಲ ಹಾಗೆ ಬಿಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ . (ಹಿಟ್ಟಿಗೆ ನೀರು ಹೆಚ್ಚಾದರೆ ಅಕ್ಕಿ ಹುಡಿ ಸೇರಿಸಿಕೊಳ್ಳಬಹುದು) ಈಗ ದೊಡ್ಡ ಲಿಂಬೆ ಗಾತ್ರದ ಉಂಡೆಗಳನ್ನು ಮಾಡಿ.
2. ಮಂಗಳೂರು ಗೋಳಿ ಬಜೆ
ಬೇಕಾಗುವ ಸಾಮಗ್ರಿಗಳು
11/2 ಕಪ್ ಮೈದಾ ಹಿಟ್ಟು
1/4 ಟೀಸ್ಪೂನ್ ಅಡಿಗೆ ಸೋಡಾ
ಚಿಟಕಿ ಇಂಗು
ರುಚಿಗೆ ತಕ್ಕಷ್ಟು ಉಪ್ಪು
1 ಕಪ್ ಮಜ್ಜಿಗೆ
2 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಕರಿಬೇವಿನ ಸೊಪ್ಪುಗಳು
ಚಿಕ್ಕದಾಗಿ ಕತ್ತರಿಸಿದ 2 ಹಸಿಮೆಣಸಿನಕಾಯಿ
ಸಣ್ಣಗೆ ಕತ್ತರಿಸಿದ 1 ಇಂಚಿನ ಶುಂಠಿ
2 ಟೀಸ್ಪೂನ್ ಸಣ್ಣದಾಗಿ ಕತ್ತರಿಸಿದ ಕೊಬ್ಬರಿ
ಹುರಿಯಲು ಎಣ್ಣೆ

ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಮೈದಾ, ಅಡಿಗೆ ಸೋಡಾ, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಈಗ 1 ಕಪ್ ಮಜ್ಜಿಗೆ ಅಥವಾ ಮೊಸರನ್ನು ಅದಕ್ಕೆ ಸೇರಿಸಿ.
ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ.
ಅದಕ್ಕೆ ಸಣ್ಣದಾಗಿ ಕತ್ತರಿಸಿದ ಕರಿಬೇವು ಸೊಪ್ಪು, ಹಸಿ ಮೆಣಸು, ಶುಂಠಿ ಮತ್ತು ಕೊಬ್ಬರಿ ಸೇರಿಸಿ.
ಎಲ್ಲವನ್ನೂ ಚೆನ್ನಾಗಿ ಕಲಸಿ ಮಿಶ್ರಣ ಮಾಡಿ. ಹಿಟ್ಟನ್ನು 3 ಗಂಟೆಗಳ ಕಾಲ ಮುಚ್ಚಿಡಿ.
3 ಗಂಟೆಗಳ ನಂತರ, ಹಿಟ್ಟನ್ನು ಮತ್ತೆ ಕಲಸಿ, ಸಣ್ಣ ಚೆಂಡಿನ ಗಾತ್ರದ ಉಂಡೆಗಳನ್ನು ಮಾಡಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಹಿಟ್ಟಿನ ಉಂಡೆಗಳನ್ನು ಎಣ್ಣೆಯಲ್ಲಿ ಬಿಡಿ. ಮಧ್ಯಮ ಜ್ವಾಲೆಯಲ್ಲಿ ಎರಡೂ ಬದಿಗಳನ್ನು ಹುರಿಯಿರಿ. ಗೋಳಿ ಬಜೆ ಹೊಂಬಣ್ಣಕ್ಕೆ ತಿರುಗಿದ ಬಳಿಕ ಮತ್ತು ಗರಿಗರಿಯಾದ ನಂತರ ಅದನ್ನು ತೆಗೆಯಿರಿ.
ಈಗ ಗೋಳಿ ಬಜೆ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ಸಿದ್ಧವಾಗಿದೆ.
3. ಬಟಾಟೆ ಬೋಂಡಾ
ಬೇಕಾಗುವ ಸಾಮಗ್ರಿಗಳು
ಸಾಸಿವೆ – 1/2 ಚಮಚ
ಉದ್ದಿನ ಬೇಳೆ -1/2 ಚಮಚ
ಹಸಿಮೆಣಸಿನಕಾಯಿ – 2
ಶುಂಠಿ ತುರಿ – 1 ಚಮಚ
ಕರಿಬೇವಿನ ಸೊಪ್ಪು – ಸ್ವಲ್ಪ
ಬೇಯಿಸಿದ ಬಟಾಣಿ – 1/2 ಕಪ್
ಬೇಯಿಸಿದ ಬಟಾಟೆ – 2
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿ ಸೊಪ್ಪು ಸ್ವಲ್ಪ
ಹುರಿಯಲು ಎಣ್ಣೆ
ಕಡ್ಲೆಹಿಟ್ಟು – 1 ಕಪ್
ಅಕ್ಕಿ ಹಿಟ್ಟು – 1 ಚಮಚ
ಕೆಂಪು ಮೆಣಸಿನ ಪುಡಿ – 1/2 ಚಮಚ
ಅಜ್ವೈನ್ – 1/4 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಬಿಸಿ ಎಣ್ಣೆ – 1 ಚಮಚ
ಅಗತ್ಯವಿರುವಷ್ಟು ನೀರು

ಮಾಡುವ ವಿಧಾನ
ಮೊದಲಿಗೆ ಬಟಾಟೆಗಳನ್ನು ಬೇಯಿಸಿ ಚೆನ್ನಾಗಿ ಮ್ಯಾಶ್ ಮಾಡಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ನಂತರ ಉದ್ದಿನ ಬೇಳೆ, ಹಸಿ ಮೆಣಸಿನಕಾಯಿ, ಶುಂಠಿ, ಕರಿಬೇವಿನ ಸೊಪ್ಪು ಸೇರಿಸಿ ಹುರಿಯಿರಿ. ಬಳಿಕ ಅದಕ್ಕೆ ಬಟಾಣಿ ಮತ್ತು ಮ್ಯಾಶ್ ಮಾಡಿದ ಬಟಾಟೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕತ್ತರಿಸಿದ ಕೊತ್ತಂಬರಿ ಸೊಪ್ಪುಗಳನ್ನು ಉದುರಿಸಿ. ನಂತರ ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿ ಇಟ್ಟುಕೊಳ್ಳಿ.
ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಕೆಂಪು ಮೆಣಸಿನ ಪುಡಿ, ಅಜ್ವೈನ್, ಉಪ್ಪು, ಬಿಸಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಅಗತ್ಯವಿರುವಷ್ಟು ನೀರು ಸೇರಿಸಿ ಹಿಟ್ಟನ್ನು ತಯಾರಿಸಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ತಯಾರಿಸಿ ಇಟ್ಟುಕೊಂಡ ಅಲೂಪಲ್ಯದ ಉಂಡೆಗಳನ್ನು ಕಡ್ಲೆಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಬಿಡಿ. ಹೊಂಬಣ್ಣಕ್ಕೆ ತಿರುಗುವವರೆಗೆ ಕಾಯಿಸಿ ತೆಗೆಯಿರಿ. ಈಗ ರುಚಿಯಾದ ಬಿಸಿ ಬಿಸಿ ಅಲೂ ಬೋಂಡ ಸವಿಯಲು ಸಿದ್ಧವಾಗಿದೆ.
4. ರವಾ ಗೋಳಿ ಬಜೆ
ಬೇಕಾಗುವ ಸಾಮಗ್ರಿಗಳು :
ಚಿರೋಟಿ ರವೆ – 1ಕಪ್
ಸೋಡಾ – 1/4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮೊಸರು 1/2 ಕಪ್
ಜೀರಿಗೆ – 1 ಚಮಚ
ಹೆಚ್ಚಿದ ಹಸಿಮೆಣಸಿನಕಾಯಿ – 1
ತುರಿದ ಶುಂಠಿ – 1ಇಂಚು
ಕರಿಬೇವು, ಕೊತ್ತಂಬರಿ ಸೊಪ್ಪು – ಸ್ವಲ್ಪ
ಸಕ್ಕರೆ – 1 ಚಮಚ

ಮಾಡುವ ವಿಧಾನ
ಮೊದಲಿಗೆ ಚಿರೋಟಿ ರವೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡು ಒಂದು ಅಗಲವಾದ ಪಾತ್ರೆಗೆ ಹಾಕಿ. ನಂತರ ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಇದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಜೀರಿಗೆ, ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. 2 ಗಂಟೆಗಳ ಕಾಲ ಹಾಗೆಯೇ ಬಿಡಿ.
ನಂತರ ಸೋಡಾ ಸೇರಿಸಿ ಬೆರೆಸಿ. ನಂತರ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. 3 ಗಂಟೆಗಳ ನಂತರ, ಹಿಟ್ಟನ್ನು ಮತ್ತೆ ಕಲಸಿ, ಸಣ್ಣ ಚೆಂಡಿನ ಗಾತ್ರದ ಉಂಡೆಗಳನ್ನು ಮಾಡಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಹಿಟ್ಟಿನ ಉಂಡೆಗಳನ್ನು ಎಣ್ಣೆಯಲ್ಲಿ ಬಿಡಿ. ಮಧ್ಯಮ ಜ್ವಾಲೆಯಲ್ಲಿ ಎರಡೂ ಬದಿಗಳನ್ನು ಹುರಿಯಿರಿ. ಗೋಳಿ ಬಜೆ ಹೊಂಬಣ್ಣಕ್ಕೆ ತಿರುಗಿದ ಬಳಿಕ ಮತ್ತು ಗರಿಗರಿಯಾದ ನಂತರ ಅದನ್ನು ತೆಗೆಯಿರಿ.
5. ಉದ್ದಿನ ಬೋಂಡಾ
ಬೇಕಾಗುವ ಸಾಮಗ್ರಿಗಳು
ಉದ್ದಿನಬೇಳೆ – 1 ಕಪ್
ಹಸಿಮೆಣಸಿನಕಾಯಿ – 2
ಕರಿಬೇವು – ಸ್ವಲ್ಪ
ಕೊತಂಬರಿ ಸೊಪ್ಪು – ಸ್ವಲ್ಪ
ಚಿಕ್ಕದಾಗಿ ಕತ್ತರಿಸಿದ ಒಣ ತೆಂಗಿನಕಾಯಿ/ಕೊಬ್ಬರಿ 2 ಚಮಚ
ಅಕ್ಕಿ ಹಿಟ್ಟು – 1 ಚಮಚ
ಅಡುಗೆ ಸೋಡಾ – ಚಿಟಕಿಯಷ್ಟು
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ಉದ್ದಿನಬೇಳೆಯನ್ನು ತೊಳೆದು 1-2 ಗಂಟೆಗಳ ಕಾಲ ನೆನೆಸಿಡಿ. ನಂತರ ನೀರನ್ನು ಸೋಸಿ ಉದ್ದಿನಬೇಳೆಯನ್ನು ಮಿಕ್ಸಿ ಜಾರ್ ಅಥವಾ ಗ್ರೈಂಡರ್ಗೆ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಬಳಿಕ ಇದನ್ನು ಪಾತ್ರೆಗೆ ವರ್ಗಾಯಿಸಿ. ಅದಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಕರಿಬೇವು, ಕೊತಂಬರಿ ಸೊಪ್ಪು, ಒಣ ತೆಂಗಿನಕಾಯಿ/ಕೊಬ್ಬರಿ, ಅಕ್ಕಿ ಹಿಟ್ಟು, ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಹಿಟ್ಟನ್ನು ಬೋಂಡಾಗಳಂತೆ ಬಿಡಿ. ಮಂದ ಉರಿಯಲ್ಲಿ ಹೊಂಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಕರಿದು ತೆಗೆಯಿರಿ. ಈಗ ರುಚಿಯಾದ ಉದ್ದಿನ ಬೋಂಡಾ ಸವಿಯಲು ಸಿದ್ಧವಾಗಿದೆ








