ಟೀಮ್ ಇಂಡಿಯಾ ಟಿ20 ತಂಡದಲ್ಲಿ ಬದಲಾವಣೆ..? ಐಪಿಎಲ್ ಬಳಿಕ ಕೆಲ ಆಟಗಾರರ ಸೇರ್ಪಡೆ..?
ಟೀಮ್ ಇಂಡಿಯಾದ ಆಟಗಾರರು ಐಪಿಎಲ್ನಲ್ಲಿ ಬೊಂಬಾಟ್ ಆಟ ಆಡುತ್ತಿದ್ದಾರೆ. ಆದರೆ ಟಿ20 ವಿಶ್ವಕಪ್ ಕಡೆಗೂ ಗಮನ ಇಟ್ಟಿದ್ದಾರೆ.
ಐಸಿಸಿ ಟಿ-20 ವಿಶ್ವಕಪ್ಗೆ ಟೀಮ್ ಇಂಡಿಯಾದ ಪ್ರಕಟವಾಗಿದೆ. ಆದರೆ ಅದೇ ತಂಡ ಫೈನಲ್ ಎಂದು ಹೇಳಲು ಸಾಧ್ಯವಿಲ್ಲ.
ಐಪಿಎಲ್ 2021ರ ನಡುವಿನಲ್ಲಿ ಟೀಮ್ ಇಂಡಿಯಾದಲ್ಲಿ ಬದಲಾವಣೆ ಆಗುವ ಸಾಧ್ಯತೆ ಕೂಡ ಇದೆ.
ಆಗಾರರ ಗಾಯ ತಂಡದಲ್ಲಿ ಬದಲಾವಣೆಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಹೆಚ್ಚಿದೆ.
ವಿರಾಟ್ ಕೊಹ್ಲಿ ನೇತೃತ್ವದ 15 ಸದಸ್ಯರ ಟೀಮ್ ಇಂಡಿಯಾವನ್ನು ಬಿಸಿಸಿಐ ಪ್ರಕಟಮಾಡಿದೆ.
ಸಂಭಾವ್ಯ ತಂಡದ ಪಟ್ಟಿಯಲ್ಲಿದ್ದ ಕೆಲವು ಆಟಗಾರರನ್ನು ಕೈಬಿಟ್ಟು ಆಯ್ಕೆ ಸಮಿತಿ ಶಾಕ್ ಕೂಡ ನೀಡಿತ್ತು. ಶಿಖರ್ ಧವನ್, ಯುಜ್ವೇಂದ್ರ ಚಾಹಲ್ , ಟಿ. ನಟರಾಜನ್ ಅವರನ್ನು ತಂಡದಿಂದ ಹೊರಗಿಟ್ಟಿದ್ದರೆ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಮತ್ತು ದೀಪಕ್ ಚಹರ್ ಅವರನ್ನು ಸ್ಟ್ಯಾಂಡ್ ಬೈ ಆಟಗಾರರನ್ನಾಗಿ ಹೆಸರಿಸಿದ್ದು ಅಚ್ಚರಿಗೆ ಕಾರಣವಾಗಿತ್ತು.
ಅಲ್ಲದೆ ರವಿಚಂದ್ರನ್ ಅಶ್ವಿನ್ ಬರೋಬ್ಬರಿ 4 ವರ್ಷಗಳ ಬಳಿಕ ಭಾರತ ಟಿ-20 ತಂಡ ಸೇರಿದ್ದಾರೆ. ಸದ್ಯ ಟೀಮ್ ಇಂಡಿಯಾದ ಟಿ-20 ವಿಶ್ವಕಪ್ ತಂಡದಲ್ಲಿ ಬದಲಾವಣೆ ಆಗುವ ಸಂಭವವಿದೆ.
ಹೌದು, ಈಗ ಪ್ರಕಟವಾಗಿರುವ ತಂಡ ಫೈನಲ್ ಎಂದು ಹೇಳಲು ಸಾಧ್ಯವಿಲ್ಲ, ಭಾರತದ ಈ ತಂಡದಲ್ಲಿ ಬದಲಾವಣೆ ಆಗುವ ಸಾಧ್ಯತೆ ಕೂಡ ಇದೆ.
ಯಾಕಂದ್ರೆ ಈಗ ಪ್ರಕಟಿಸಿರುವ ತಂಡದಲ್ಲಿ ಬೇಕಿದ್ದರೆ ಬದಲಾವಣೆ ಮಾಡಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಕ್ಟೋಬರ್ 10 ರ ವರೆಗೆ ಅವಕಾಶ ನೀಡಿದೆ.
ಹೀಗಾಗಿ ಸದ್ಯ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2021 ಎರಡನೇ ಚರಣದಲ್ಲಿ ಟಿ-20 ವಿಶ್ವಕಪ್ಗೆ ಆಯ್ಕೆಯಾಗದ ಆಟಗಾರರು ಉತ್ತಮ ಪ್ರದರ್ಶನ ತೋರಿದರೆ ಅವರು ಅವಕಾಶ ಪಡೆಯುವ ಸಾಧ್ಯತೆ ಇದೆ.
ಅಂತೆಯೆ ಆಯ್ಕೆಯಾದ ಆಟಗಾರರು ಕಳಪೆ ಆಟವಾಡಿದರೆ ಅಥವಾ ಇಂಜುರಿಗೆ ತುತ್ತಾದರೆ ಅವಕಾಶವಂಚಿತರಿಗೆ ಚಾನ್ಸ್ ಸಿಗಬಹುದು.
ಟಿ 20 ತಂಡಕ್ಕೆ ಆಯ್ಕೆಯಾಗಬೇಕು ಎಂದು ಯುಜ್ವೇಂದ್ರ ಚಹಾಲ್ ಹೆಸರು ಜೋರಾಗಿ ಕೇಳಿಬರುತ್ತಿದೆ ಚಹಲ್ ಯುಎಇನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಐಪಿಎಲ್ 2021 ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಟ್ಟಿರುವ ಹರ್ಷಲ್ ಪಟೇಲ್ ಕೂಡ ಟಿ-20 ವಿಶ್ವಕಪ್ ತಂಡದಲ್ಲಿಲ್ಲ. ಸದ್ಯ ಇವರು ಕೂಡ ರೇಸ್ಗೆ ಬಂದಿದ್ದಾರೆ.
ಇನ್ನು ಶಿಖರ್ ಧವನ್ ಟಿ-20 ವಿಶ್ವಕಪ್ಗೆ ಆಯ್ಕೆಯಾಗದೆ ಇದ್ದಿದ್ದು ನಿಜಕ್ಕೂ ಶಾಕಿಂಗ್ ಸುದ್ದಿಯಾಗಿತ್ತು. ಭರ್ಜರಿ ಫಾರ್ಮ್ನಲ್ಲಿರುವ ಇವರು ಈ ಬಾರಿಯ ಐಪಿಎಲ್ನಲ್ಲಿ ಗರಿಷ್ಠ ರನ್ ಕಲೆಹಾಕಿದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಹೀಗಾಗಿ ಇವರುಕೂಡ ವಿಶ್ವಕಪ್ ತಂಡಕ್ಕೆ ಸೇರಬಹುದು. ಆದರೆ ಈಗ ಪ್ರಕಟವಾಗಿರುವ ತಂಡದಲ್ಲಿ ಯಾವುದಾದರು ಆಟಗಾರನಿಗೆ ಗಾಯಗೊಂಡರೆ ಮಾತ್ರ ರಿಪ್ಲೇಸ್ಮೆಂಟ್ ಅವಕಾಶ ಸಿಗುತ್ತದೆ. ಗಾಯದ ಭೀತಿ ಇಲ್ಲದೆ ಇದ್ರೆ ಈಗ ಪ್ರಕಟವಾಗಿರುವ ತಂಡವನ್ನೇ ಆಡಿಸಬೇಕಾಗುತ್ತದೆ.
ಟೀಮ್ ಇಂಡಿಯಾ ಟಿ20 ವಿಶ್ವಕಪ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಈಗ ಪ್ರಕಟವಾಗಿರುವ ತಂಡದ ಬಗ್ಗೆ ಕೆಲವೊಂದು ಅಚ್ಚರಿಗಳಿವೆ. ಟೀಕೆಗಳಿವೆ. ಆದರೆ ಐಪಿಎಲ್ ಪ್ರದರ್ಶನದ ಬಳಿಕ ಟೀಮ್ ಇಂಡಿಯಾದಲ್ಲಿ ಬದಲಾವಣೆ ಆಗಬಹುದು ಅನ್ನುವ ಮಾತು ಕೇಳಿ ಬರುತ್ತಿದೆ.









