ಟಿ-20 ಕ್ರಿಕೆಟ್ | ವೇಗವಾಗಿ ಮೂರು ಸಾವಿರ ರನ್ ಪೂರೈಸಿದ ಪಂತ್
ದುಬೈ : ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಟ್ವಿ-20 ಕ್ರಿಕೆಟ್ ನಲ್ಲಿ ವೇಗದ ಮೂರು ಸಾವಿರ ರನ್ ಪೂರೈಸಿದ ವಿಕೆಟ್ ಕೀಪರ್ ಎಂಬ ದಾಖಲೆ ಬರೆದಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಿಷಬ್ ಪಂತ್ 39 ರನ್ ಗಳಿಸಿದ್ರು. ಈ ನಡುವೆ ಟಿ-20 ಕ್ರಿಕೆಟ್ ನಲ್ಲಿ ಮೂರು ಸಾವಿರ ರನ್ ದಾಖಲಿಸಿದ ಹಿರಿಮೆಗೆ ಪಾತ್ರರಾದ್ರು.
ರಿಷಬ್ 108 ಇನ್ನಿಂಗ್ಸ್ ಗಳಲ್ಲಿ ಮೂರು ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಮುಖ್ಯವಾಗಿ ಪಂತ್ ಕೇವಲ ಐಪಿಎಲ್ ನಲ್ಲಿಯೇ 2390 ರನ್ ಗಳಿಸಿದ್ದಾರೆ.
ಇನ್ನುಳಿದಂತೆ ಭಾರತದ ಪರ 32 ಪಂದ್ಯಗಳಲ್ಲಿ 512 ರನ್ ಗಳಿಸಿದ್ದಾರೆ. ಇದಲ್ಲದೇ ದೇಸಿ ಟೂರ್ನಿಯ ಟ್ವಿ-20 ಪಂದ್ಯಗಳಲ್ಲೂ ಮಿಂಚು ಹರಿಸಿದ್ದಾರೆ.
ಇನ್ನು ಕನ್ನಡಿಗ ಕೆ.ಎಲ್ ರಾಹುಲ್ 93 ಇನ್ನಿಂಗ್ಸ್ ಗಳಲ್ಲಿ ಮೂರು ಸಾವಿರ ರನ್ ಗಡಿದಾಟಿದ್ದಾರೆ. ಸುರೇಶ್ ರೈನಾ, ಗೌತಮ್ ಗಂಭೀರ್ 107 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಇದಲ್ಲದೆ ರಿಷಬ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಸಾಧನೆ ಮಾಡಿದ್ದು, ಡೆಲ್ಲಿ ತಂಡದ ಪರ ಅತಿ ಹೆಚ್ಚು ರನ್ ದಾಖಲಿಸಿರುವ ಬ್ಯಾಟ್ಸ್ಮೆನ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಈ ದಾಖಲೆ ವಿರೇಂದ್ರ ಸೆಹ್ವಾಗ್ ಹೆಸರಲ್ಲಿತ್ತು. ವೀರು 2382 ರನ್ ಗಳಿಸಿದ್ದರು.