ADVERTISEMENT
Tuesday, July 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ದಸರಾ ಉತ್ಸವ ಉದ್ಘಾಟಿಸಲಿರುವ ಎಂ.ಎಸ್.ಕೃಷ್ಣ ಜೀವನ ಹಾಗೂ ರಾಜಕೀಯ ಹಾದಿ

Mahesh M Dhandu by Mahesh M Dhandu
September 29, 2021
in Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ದಸರಾ ಉತ್ಸವ ಉದ್ಘಾಟಿಸಲಿರುವ ಎಂ.ಎಸ್.ಕೃಷ್ಣ ಜೀವನ ಹಾಗೂ ರಾಜಕೀಯ ಹಾದಿ

ಬೆಂಗಳೂರು : ಈ ಬಾರಿಯ ದಸರಾವನ್ನು ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಉದ್ಘಾಟಿಸಲಿದ್ದಾರೆ.

Related posts

Spain superstar Lamine Yamal

fifa world cup 2026-ಭವಿಷ್ಯದ ಫುಟ್‌ಬಾಲ್ ಅಧಿಪತಿಯ ಹೆಸರಿನ ಮಹಿಮೆ ಏನು ಗೊತ್ತಾ..? ಆ ಹೆಸರಿನ ಹಿಂದಿದೆ ರೋಚಕ ಸ್ಟೋರಿ..!

July 14, 2026
ಸಿನಿಮಾ ಸಾಯಿಸಬೇಡಿ- ಒಳ್ಳೆಯ ಸಿನಿಮಾವನ್ನು ತುಳಿಯಬೇಡಿ: ಮದರ್ ಪ್ರಾಮಿಸ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾ ನೆಗೆಟಿವಿಟಿ ವಿರುದ್ಧ ಸಿಡಿದೆದ್ದ ನಟ ಧನಂಜಯ್

ಸಿನಿಮಾ ಸಾಯಿಸಬೇಡಿ- ಒಳ್ಳೆಯ ಸಿನಿಮಾವನ್ನು ತುಳಿಯಬೇಡಿ: ಮದರ್ ಪ್ರಾಮಿಸ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾ ನೆಗೆಟಿವಿಟಿ ವಿರುದ್ಧ ಸಿಡಿದೆದ್ದ ನಟ ಧನಂಜಯ್

July 14, 2026

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. “ಅಕ್ಟೋಬರ್ 7ರಿಂದ ಆರಂಭವಾಗಲಿರುವ ನಾಡಹಬ್ಬದಸರಾ ಮಹೋತ್ಸವವನ್ನು ಉದ್ಘಾಟಿಸಲು ಹಿರಿಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ.ಕೃಷ್ಣ ರವರಿಗೆ ಆಹ್ವಾನ ನೀಡಲು ರಾಜ್ಯಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಟ್ವೀಟ್ ನಲ್ಲಿದೆ.

ಇನ್ನು ಅಕ್ಟೋಬರ್ ಏಳರಿಂದ ಹದಿನೈದರ ತನಕ ದಸರಾ ನಡೆಯಲಿದ್ದು, 15 ರಂದು ಅರಮನೆ ಮೈದಾನದಲ್ಲಿ ಜಂಬೂ ಸವಾರಿ ಇರಲಿದೆ.

ಎಸ್.ಎಂ.ಕೃಷ್ಣ ಅವರ ಪರಿಚಯ

1932ರಲ್ಲಿ ಮಂಡ್ಯ ಜಿಲ್ಲೆ ಸೋಮನಹಳ್ಳಿಯಲ್ಲಿ ಎಸ್.ಎಂ.ಕೃಷ್ಣ ಅವರು ಜನಿಸಿದರು. ಬಾಲ್ಯವಿದ್ಯಾಭ್ಯಾಸ ಮುಗಿಸಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದರು. ಬಳಿಕ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಅಮೆರಿಕದ ಸದರ್ನ್ ಮೆಥಡಿಸ್ಟ್ ವಿವಿಯಲ್ಲಿ ಕಾನೂನು ಅಭ್ಯಾಸ ಮಾಡಿದರು. ಇದಾದ ನಂತರ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

MS Krishna saaksha tv

1962ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. 1968ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡರು. 1971ರಲ್ಲಿ ಮತ್ತೊಮ್ಮೆ ಸಂಸದರಾದರು.

1972ರಲ್ಲಿ 1977 ರಲ್ಲಿ ಕರ್ನಾಟಕದ ವಿಧಾನ ಪರಿಷತ್ತಿಗೆ ಚುನಾಯಿತರಾದರು. 1977ರಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಆಯ್ಕೆಯಾದರು. 1983ರಲ್ಲೂ ಉದ್ಯಮ ಖಾತೆ ಸಚಿವರಾಗಿದರು. 1984 ರಲ್ಲಿ ವಿತ್ತ ಖಾತೆಯ ಸಚಿವರಾಗಿದ್ದ ಎಸ್.ಎಂ.ಕೃಷ್ಣ, 1989 ರಿಂದ 1992ರ ವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ನೇಮಕವಾಗಿದ್ದರು.

ಇದಾದ ಬಳಿಕ 1992 ರಿಂದ 1994ರ ವರೆಗೆ ಕರ್ನಾಟಕದ ಉಪ-ಮುಖ್ಯಮಂತ್ರಿಯಾಗಿ ನೇಮಕವಾಗಿದ್ದ ಎಸ್.ಎಂ ಕೃಷ್ಣ, 1996 ರಲ್ಲಿ ರಾಜ್ಯಸಭೆಗೆ ನೇಮಕಗೊಂಡರು.

ಇನ್ನು 1999 ರಲ್ಲಿ ಕರ್ನಾಟಕದ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1999ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. ನಂತರ 2004- 2008ರವರೆಗೆ ಮಹಾರಾಷ್ಟ್ರ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದರು. 2008-2014ರವರೆಗೆ ಕರ್ನಾಟಕದ ರಾಜ್ಯಸಭಾ ಸದಸ್ಯರಾದರು.
2009 – 2012ರವರೆಗೆ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು.

ಬಳಿಕ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿಕೊಂಡರು. ಈಗ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ.

Tags: #Saaksha TVbasavaraja bommayikarnatakaMysore Dasaras m krishna
ShareTweetSendShare
Join us on:

Related Posts

Spain superstar Lamine Yamal

fifa world cup 2026-ಭವಿಷ್ಯದ ಫುಟ್‌ಬಾಲ್ ಅಧಿಪತಿಯ ಹೆಸರಿನ ಮಹಿಮೆ ಏನು ಗೊತ್ತಾ..? ಆ ಹೆಸರಿನ ಹಿಂದಿದೆ ರೋಚಕ ಸ್ಟೋರಿ..!

by admin
July 14, 2026
0

ಈ ಹೆಸರು ಆತನ ಬರೀ ಒಂದು ಹೆಸರಲ್ಲ. ಈ ಹೆಸರಿನ ಹಿಂದಿದೆ ಬೆಲೆ ಕಟ್ಟಲಾಗದ ನೆನಪಿನ ಪ್ರೀತಿ..! ಈ ಹೆಸರಿನಲ್ಲಿದೆ ಹೆತ್ತವರು ಮತ್ತು ಹುಟ್ಟಿ ಬೆಳೆದ ಮಣ್ಣಿನ...

ಸಿನಿಮಾ ಸಾಯಿಸಬೇಡಿ- ಒಳ್ಳೆಯ ಸಿನಿಮಾವನ್ನು ತುಳಿಯಬೇಡಿ: ಮದರ್ ಪ್ರಾಮಿಸ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾ ನೆಗೆಟಿವಿಟಿ ವಿರುದ್ಧ ಸಿಡಿದೆದ್ದ ನಟ ಧನಂಜಯ್

ಸಿನಿಮಾ ಸಾಯಿಸಬೇಡಿ- ಒಳ್ಳೆಯ ಸಿನಿಮಾವನ್ನು ತುಳಿಯಬೇಡಿ: ಮದರ್ ಪ್ರಾಮಿಸ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾ ನೆಗೆಟಿವಿಟಿ ವಿರುದ್ಧ ಸಿಡಿದೆದ್ದ ನಟ ಧನಂಜಯ್

by Shwetha
July 14, 2026
0

ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಅವರು ಸದ್ಯ ಮದರ್ ಪ್ರಾಮಿಸ್ ಚಿತ್ರದ ಕುರಿತು ನಡೆಯುತ್ತಿರುವ ನೆಗೆಟಿವ್ ಪ್ರಚಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜುಲೈ...

ಇರಾನ್ ಮೇಲೆ ಅಮೆರಿಕ ಭೀಕರ ದಾಳಿ; ಪ್ರತಿದಾಳಿಯ ದಾವೆ ಮಾಡಿದ ಟೆಹ್ರಾನ್

ಇರಾನ್ ಮೇಲೆ ಅಮೆರಿಕ ಭೀಕರ ದಾಳಿ; ಪ್ರತಿದಾಳಿಯ ದಾವೆ ಮಾಡಿದ ಟೆಹ್ರಾನ್

by Shwetha
July 14, 2026
0

ಇರಾನ್‌ನ ಹೇಳಿಕೆಯ ಪ್ರಕಾರ, ಅಮೆರಿಕ ಮಧ್ಯರಾತ್ರಿಯಿಂದ ಕ್ಷಿಪಣಿಗಳು ಮತ್ತು ಬಾಂಬ್‌ಗಳ ಮೂಲಕ ಇರಾನ್ ಮೇಲೆ ತೀವ್ರ ದಾಳಿ ನಡೆಸಿದೆ. ಈ ದಾಳಿಯಲ್ಲಿ ಬಂದರ್ ಅಬ್ಬಾಸ್ ಬಂದರು, ಕೇಶ್...

ಚಿಲ್ಲರೆ ನೆಪದಲ್ಲಿ ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸುವಂತಿಲ್ಲ:ಸಿಬ್ಬಂದಿಗೆ ಸೌಜನ್ಯದ ಪಾಠ ಹೇಳಿದ ಸಾರಿಗೆ ಸಚಿವ ಭೈರತಿ ಸುರೇಶ್

ಚಿಲ್ಲರೆ ನೆಪದಲ್ಲಿ ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸುವಂತಿಲ್ಲ:ಸಿಬ್ಬಂದಿಗೆ ಸೌಜನ್ಯದ ಪಾಠ ಹೇಳಿದ ಸಾರಿಗೆ ಸಚಿವ ಭೈರತಿ ಸುರೇಶ್

by Shwetha
July 14, 2026
0

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ಗಳಲ್ಲಿ ಚಿಲ್ಲರೆ ಇಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸುವಂತಿಲ್ಲ ಎಂದು ಸಂಸ್ಥೆಯು ತನ್ನ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ...

ಕಚ್ಚಾ ತೈಲ ಬೆಲೆಯಲ್ಲಿ ಮತ್ತೆ ಏರಿಕೆ; ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಗೆ ಅನಿಶ್ಚಿತತೆ

ಕಚ್ಚಾ ತೈಲ ಬೆಲೆಯಲ್ಲಿ ಮತ್ತೆ ಏರಿಕೆ; ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಗೆ ಅನಿಶ್ಚಿತತೆ

by Shwetha
July 14, 2026
0

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತೆ ಏರಿಕೆಯಾಗಿದ್ದು, ಇರಾನ್–ಅಮೆರಿಕ ನಡುವಿನ ಉದ್ವಿಗ್ನತೆಯಿಂದ ಹಾರ್ಮುಜ್ ಜಲಸಂಧಿಯ ಹಡಗು ಸಂಚಾರದ ಮೇಲೆ ಪರಿಣಾಮ ಉಂಟಾಗಿರುವುದು ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram