ADVERTISEMENT
Sunday, October 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಬರ್ತೀನಿ ಬಿಡಿ ಅಂತ ಟೇಬಲ್ ಹೊಡೆದ್ರೆ ಈ ರಾಜ್ಯ ನಿಮ್ಮ ತಾತನ ಆಸ್ತಿನಾ?ಕಲ್ಯಾಣ ಕರ್ನಾಟಕದ ಮಣ್ಣಿನ ಜನ ಯಾವುದಕ್ಕೂ ಹೆದರುವುದಿಲ್ಲ ಬಗ್ಗುವುದೂ ಇಲ್ಲ. ಇಂತಹ ಹತ್ತಾರು ಜನರನ್ನು ನಾವು ನೋಡಿದ್ದೇವೆ: ಕುಮಾರಸ್ವಾಮಿ ವಿರುದ್ಧ ಶರಣಪ್ರಕಾಶ್ ಪಾಟೀಲ್ ಆಕ್ರೋಶ

Shwetha by Shwetha
October 18, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ರಾಜ್ಯ ರಾಜಕಾರಣದ ವಾಕ್ಸಮರ ಈಗ ಅತಿರೇಕಕ್ಕೆ ತಲುಪಿದ್ದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಅಬ್ಬರಕ್ಕೆ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಕಲ್ಬುರ್ಗಿಯಲ್ಲಿ ಅತ್ಯಂತ ಕಟು ಶಬ್ದಗಳಿಂದ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಅವರ ಮಾತಿನ ದಾಟಿ ಮತ್ತು ಟೇಬಲ್ ಕುಟ್ಟುವ ಶೈಲಿಯನ್ನು ಟೀಕಿಸಿದ ಅವರು ಈ ರಾಜ್ಯ ಯಾರಪ್ಪನ ಆಸ್ತಿಯೂ ಅಲ್ಲ ಎಂದು ಕಿಡಿಕಾರಿದ್ದಾರೆ.

ಬರ್ತೀನಿ ಬಿಡಿ ಅಂದ್ರೆ ಹೆದರೋರು ಯಾರೂ ಇಲ್ಲ

Related posts

ಮಹಾರಾಷ್ಟ್ರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಅಕ್ರಮ ಮಾರಾಟ ಜಾಲ ಪತ್ತೆ: ₹48 ಲಕ್ಷದ ಸರಕು ಜಪ್ತಿ, ರಿಲಯನ್ಸ್‌ ನಿರ್ದೇಶಕ ಸೇರಿ 10 ಜನರ ವಿರುದ್ಧ FIR

ಮಹಾರಾಷ್ಟ್ರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಅಕ್ರಮ ಮಾರಾಟ ಜಾಲ ಪತ್ತೆ: ₹48 ಲಕ್ಷದ ಸರಕು ಜಪ್ತಿ, ರಿಲಯನ್ಸ್‌ ನಿರ್ದೇಶಕ ಸೇರಿ 10 ಜನರ ವಿರುದ್ಧ FIR

October 18, 2026
ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಮೋದಿಯಾಟ ಕೊನೆಗಾಣಿಸಲು ಸಿಜೆಪಿ ಪ್ರತಿಭಟನೆಗೆ ಕಾಂಗ್ರೆಸ್ ಫಂಡಿಂಗ್: ಪ್ರಜಾಪ್ರಭುತ್ವ ಉಳಿಸಲು ಹಣ ಕೊಟ್ಟರೆ ತಪ್ಪೇ?- ಬಿ ಕೆ ಹರಿಪ್ರಸಾದ್

October 18, 2026

ಕಲ್ಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಶರಣಪ್ರಕಾಶ್ ಪಾಟೀಲ್ ಕುಮಾರಸ್ವಾಮಿ ಅವರು ಸಾರ್ವಜನಿಕವಾಗಿ ನಡೆದುಕೊಳ್ಳುವ ರೀತಿ ಮತ್ತು ಮಾತನಾಡುವ ಭಾಷೆ ಸರಿ ಇಲ್ಲ. ಬರ್ತೀನಿ ಬಿಡಿ ಎಂದು ಟೇಬಲ್ ಹೊಡೆದ ತಕ್ಷಣ ನಾವ್ಯಾರೂ ಹೆದರಿ ಓಡಿಹೋಗಲ್ಲ. ಈ ರಾಜ್ಯ ನಿಮ್ಮ ತಾತನ ಆಸ್ತಿನಾ ಎಂದು ಪ್ರಶ್ನಿಸಿದರು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾನೂನುಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಸ್ಟಿಂಗ್ ಆಪರೇಷನ್ ಬಗ್ಗೆ ತನಿಖೆ ಮಾಡಿ ಎಂದು ನೀವೇ ಹೇಳಿದ್ದೀರಿ ಈಗ ಪೊಲೀಸರು ನಿಮ್ಮ ಕಾರ್ಯಕರ್ತರಿಗೆ ನೋಟಿಸ್ ನೀಡಿದಾಗ ಯಾಕೆ ಇಷ್ಟೊಂದು ಕಿರಿಚಾಡುತ್ತಿದ್ದೀರಿ ಎಂದು ಅವರು ಕೇಳಿದ್ದಾರೆ.

ಕಲ್ಯಾಣ ಕರ್ನಾಟಕದ ಜನ ಯಾರಿಗೂ ಬಗ್ಗಲ್ಲ

ಕುಮಾರಸ್ವಾಮಿ ಅವರು ಅಪ್ಪನ ಮನೆಯ ಗಂಟು ತಿಂದಿದ್ದೇನಾ ಎಂಬಂತಹ ಕೀಳುಮಟ್ಟದ ಪದಗಳನ್ನು ಬಳಸುತ್ತಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಕಾನೂನಿಗೆ ಮೊದಲು ಗೌರವ ಕೊಡಲಿ. ಕಲ್ಯಾಣ ಕರ್ನಾಟಕದ ಮಣ್ಣಿನ ಜನ ಯಾವುದಕ್ಕೂ ಹೆದರುವುದಿಲ್ಲ ಬಗ್ಗುವುದೂ ಇಲ್ಲ. ಇಂತಹ ಹತ್ತಾರು ಜನರನ್ನು ನಾವು ನೋಡಿದ್ದೇವೆ. ನಿಮ್ಮ ಬೆದರಿಕೆಗಳಿಗೆ ಇಲ್ಲಿ ಬೆಲೆ ಇಲ್ಲ ಎಂದು ಪಾಟೀಲ್ ಎಚ್ಚರಿಕೆ ನೀಡಿದರು.

ಯುವಕರ ಪ್ರತಿಭಟನೆಗೆ ಬಾಂಗ್ಲಾದೇಶದ ಪಟ್ಟ ಕಟ್ಟಬೇಡಿ

ಸಿಜೆಪಿ ನಡೆಸುತ್ತಿರುವ ಧರಣಿಯನ್ನು ಬಾಂಗ್ಲಾದೇಶದ ಮಾದರಿ ಎಂದು ಬಿಜೆಪಿ ಕರೆಯುತ್ತಿರುವುದಕ್ಕೆ ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಯುವಕರು ವೈಚಾರಿಕವಾಗಿ ಜಾಗೃತರಾಗುತ್ತಿದ್ದಾರೆ. ವ್ಯವಸ್ಥೆಯಲ್ಲಿನ ತಪ್ಪುಗಳನ್ನು ಪ್ರಶ್ನಿಸಲು ಯುವಕರು ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಬೀದಿಗಿಳಿದಿದ್ದಾರೆ. ಅವರಿಗೆ ಬಾಂಗ್ಲಾದೇಶದ ಪಟ್ಟ ಕಟ್ಟುವುದು ಸರಿಯಲ್ಲ. ನಿಮ್ಮ ವಿರುದ್ಧ ಯಾರೇ ಮಾತನಾಡಿದರೂ ಅವರನ್ನು ದೇಶದ್ರೋಹಿಗಳು ಎಂದು ಕರೆಯುವುದು ನಿಮ್ಮ ಹಳೆಯ ಚಾಳಿ ಎಂದು ಅವರು ಟೀಕಿಸಿದರು.

ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ

ದೇಶದಲ್ಲಿ ಗಲಾಟೆ ಮಾಡಿಸುತ್ತಿರುವುದು ಆರ್ ಎಸ್ ಎಸ್ ಮತ್ತು ಬಿಜೆಪಿಯವರೇ ಹೊರತು ಪ್ರತಿಭಟನಾಕಾರರಲ್ಲ. ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು ಜನರಿಗೆ ಮುಖ ತೋರಿಸಲು ಅವರಿಗೆ ಧೈರ್ಯವಿಲ್ಲ. ಅದಕ್ಕಾಗಿಯೇ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸಿಜೆಪಿ ಮತ್ತು ಕಾಂಗ್ರೆಸ್ ಒಂದೇ ಬೇಡಿಕೆಯನ್ನು ಇಟ್ಟುಕೊಂಡು ಹೋರಾಡುತ್ತಿರುವುದು ನಿಜ ಅದು ದೇಶದ ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟ ಎಂದು ಶರಣಪ್ರಕಾಶ್ ಪಾಟೀಲ್ ಪ್ರತಿಪಾದಿಸಿದರು.

ShareTweetSendShare
Join us on:

Related Posts

ಮಹಾರಾಷ್ಟ್ರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಅಕ್ರಮ ಮಾರಾಟ ಜಾಲ ಪತ್ತೆ: ₹48 ಲಕ್ಷದ ಸರಕು ಜಪ್ತಿ, ರಿಲಯನ್ಸ್‌ ನಿರ್ದೇಶಕ ಸೇರಿ 10 ಜನರ ವಿರುದ್ಧ FIR

ಮಹಾರಾಷ್ಟ್ರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಅಕ್ರಮ ಮಾರಾಟ ಜಾಲ ಪತ್ತೆ: ₹48 ಲಕ್ಷದ ಸರಕು ಜಪ್ತಿ, ರಿಲಯನ್ಸ್‌ ನಿರ್ದೇಶಕ ಸೇರಿ 10 ಜನರ ವಿರುದ್ಧ FIR

by Shwetha
October 18, 2026
0

ಅವಧಿ ಮುಗಿದ, ಹಾನಿಗೊಳಗಾದ ಹಾಗೂ ಗ್ರಾಹಕರಿಂದ ತಿರಸ್ಕರಿಸಲ್ಪಟ್ಟ ಆಹಾರ ಉತ್ಪನ್ನಗಳನ್ನು ನಾಶಪಡಿಸುವ ಬದಲು ಮತ್ತೆ ಮಾರುಕಟ್ಟೆಗೆ ತಂದು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಆಹಾರ...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಮೋದಿಯಾಟ ಕೊನೆಗಾಣಿಸಲು ಸಿಜೆಪಿ ಪ್ರತಿಭಟನೆಗೆ ಕಾಂಗ್ರೆಸ್ ಫಂಡಿಂಗ್: ಪ್ರಜಾಪ್ರಭುತ್ವ ಉಳಿಸಲು ಹಣ ಕೊಟ್ಟರೆ ತಪ್ಪೇ?- ಬಿ ಕೆ ಹರಿಪ್ರಸಾದ್

by Shwetha
October 18, 2026
0

ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಡೆಯುತ್ತಿರುವ ಪ್ರತಿಯೊಂದು ಹೋರಾಟಕ್ಕೂ ಕಾಂಗ್ರೆಸ್ ಪಕ್ಷದ ಬೆಂಬಲವಿದೆ. ಕಾಕ್ರೋಚ್ ಜನತಾ ಪಾರ್ಟಿ ಅಂದರೆ...

ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ: ರೈತರೊಂದಿಗೆ ಸಭೆ ನಡೆಸಲು ಬೆಳಗಾವಿಗೆ ಸಿಎಂ ಡಿ.ಕೆ. ಶಿವಕುಮಾರ್

ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ: ರೈತರೊಂದಿಗೆ ಸಭೆ ನಡೆಸಲು ಬೆಳಗಾವಿಗೆ ಸಿಎಂ ಡಿ.ಕೆ. ಶಿವಕುಮಾರ್

by Shwetha
October 18, 2026
0

ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ, ಧಾರವಾಡ, ಕಲಬುರಗಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ...

ಬಾಂಬೆ ಬಾಯ್ಸ್ ಪುಸ್ತಕ ಹೊರಬಂದರೆ ನಾಯಕರು ಬೆತ್ತಲಾಗುತ್ತಾರೆ,ಸಿದ್ದರಾಮಯ್ಯ ಮುಗಿಸಿದರೆ ನಮ್ಮ ಹಾದಿ ಸುಲಭ ಎಂಬ ಲೆಕ್ಕಾಚಾರ: ಸ್ಟಿಂಗ್ ಆಪರೇಷನ್ ಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ಎಚ್ ವಿಶ್ವನಾಥ್

ಬಾಂಬೆ ಬಾಯ್ಸ್ ಪುಸ್ತಕ ಹೊರಬಂದರೆ ನಾಯಕರು ಬೆತ್ತಲಾಗುತ್ತಾರೆ,ಸಿದ್ದರಾಮಯ್ಯ ಮುಗಿಸಿದರೆ ನಮ್ಮ ಹಾದಿ ಸುಲಭ ಎಂಬ ಲೆಕ್ಕಾಚಾರ: ಸ್ಟಿಂಗ್ ಆಪರೇಷನ್ ಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ಎಚ್ ವಿಶ್ವನಾಥ್

by Shwetha
October 18, 2026
0

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ಮತ್ತು ಚಾರಿತ್ರ್ಯಹನನದ ಸಂಸ್ಕೃತಿಯ ಬಗ್ಗೆ ಹಿರಿಯ ರಾಜಕಾರಣಿ ಎಚ್ ವಿಶ್ವನಾಥ್ ಈ ರೀತಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಭಾನುವಾರವಾದರೂ ನವೆಂಬರ್ 1ರಂದೇ ರಾಜ್ಯೋತ್ಸವ ಆಚರಣೆ ಕಡ್ಡಾಯ: ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ

ಭಾನುವಾರವಾದರೂ ನವೆಂಬರ್ 1ರಂದೇ ರಾಜ್ಯೋತ್ಸವ ಆಚರಣೆ ಕಡ್ಡಾಯ: ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ

by Shwetha
October 18, 2026
0

ನವೆಂಬರ್‌ 1ರಂದು ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ಸುತ್ತೋಲೆ ಹೊರಡಿಸಿದೆ. ಈ ಬಾರಿ ರಾಜ್ಯೋತ್ಸವ ಭಾನುವಾರ ಬಂದಿದ್ದರೂ ಆಚರಣೆಯನ್ನು ಮುಂದೂಡದೆ, ನವೆಂಬರ್‌...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram