ಗಾಂಧಿ ಜಯಂತಿಗೆ – ಶ್ರೀಕೃಷ್ಣ@ gmail.com ಟ್ರೇಲರ್ ರಿಲೀಸ್
ಲವ್ ಮಾಕ್ ಟೇಲ್ ಸಿನಿಮಾಗೂ ಮುನ್ನ ಡಾರ್ಲಿಂಗ್ ಕೃಷ್ಣ ಹಲವು ಸಿನಿಮಾಗಳಲ್ಲಿ ನಟಿಸಿದ್ರೂ ಕೂಡ ಅಷ್ಟಾಗಿ ಆ ಯಾವ ಸಿನಿಮಾಗಳು ಕೂಡ ಕ್ಲಿಕ್ ಆಗಿರಲಿಲ್ಲ. ಆದ್ರೆ ಲಾಕ್ ಡೌನ್ ವೇಳೆ ಡಾರ್ಲಿಂಗ್ ಕೃಷ್ಣ ಮಿಲನ ನಾಗರಾಜ್ ಅಭಿನಯದ ಲವ್ ಮಾಕ್ಟೇಲ್ ಸಿನಿಮಾ ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಅಬ್ಬರಿಸಿತ್ತು. ಸೂಪರ್ ಹಿಟ್ ಆಗಿತ್ತು. ಇದಾದ ನಂತರ ಮತ್ತೆ ಥಿಯೇಟರ್ ಗಳು ಆರಂಭವಾದ ಬಳಿಕ ಈ ಸಿನಿಮಾದ ರೆಸ್ಪಾನ್ಸ್ ನೋಡಿ ಥಿಯೇಟರ್ ಗಳಲ್ಲಿ ರೀ ರಿಲೀಸ್ ಕೂಡ ಮಾಡಲಾಗಿತ್ತು. ಅಷ್ಟೇ ಅಲ್ದೇ ಇದೇ ಸಿನಿಮಾದ ಪಾರ್ಟ್ 2 ಕೂಡ ರಿಡಿಯಾಗ್ತಿದೆ.
ಈ ಸಿನಿಮಾ ಮೂಲಕ ಡಾರ್ಲಿಂಗ್ ಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮುಖ್ಯವಾಗಿ ಶ್ರೀಕೃಷ್ಣ@ಜಿಮೇಲ್.ಕಾಮ್ ನಲ್ಲಿ ಬ್ಯುಸಿಯಾಗಿದ್ದಾರೆ. ನಾಗಶೇಖರ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ಬಹು ನಿರೀಕ್ಷೆಯ ಈ ಸಿನಿಮಾದ ಟ್ರೈಲರ್ ಅನ್ನು ಅಕ್ಟೋಬರ್ 2 ಅಂದ್ರೆ ಗಾಂಧಿ ಜಯಂತಿಯ ದಿನದಂದು ಬಿಡುಗಡೆ ಮಾಡುವುದಾಗಿ ಸಿನಿಮಾ ತಂಡ ಘೋಷಣೆ ಮಾಡಿದೆ. ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ 11 ಗಂಟೆಗೆ ಟ್ರೆಲರ್ ರಿಲೀಸ್ ಆಗಲಿದೆ. ಸಂದೇಶ್ ನಾಗರಾಜ್ ತಮ್ಮ ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿಯಾಗಿ ಭಾವನಾ ಮೆನನ್ ಅಭಿನಯಿಸಿದ್ದಾರೆ. ಅಕ್ಟೋಬರ್ 14ರಂದು ಈ ಸಿನಿಮಾ ತೆರೆಮೇಲೆ ಬರಲಿದೆ.
ಇದರ ಹೊರತಾಗಿ ಲೋಕಲ್ ಟ್ರೈನ್, ಶುಗರ್ ಫ್ಯಾಕ್ಟರಿ, ವರ್ಜಿನ್, ಲವ್ ಮಿ ಆರ್ ಹೇಟ್ ಮೀ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲ ಇತ್ತೀಚೆಗೆ ಹೊಸ ಸಿನಿಮಾ ಕೂಡ ಅನೌನ್ಸ್ ಆಗಿದೆ. ರಶ್ಮಿ ಫಿಲಂಸ್ ಸಂಸ್ಥೆಯಲ್ಲಿ ಸುಮಂತ್ ಕ್ರಾಂತಿ ಈ ಸಿನಿಮಾಗೆ ಬಂಡವಾಳ ಹೂಡ್ತಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಚಿತ್ರಕ್ಕೆ ಇರಲಿದೆ. ಈ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿ ಫೈನಲ್ ಆಗಿದ್ದಾರೆ ಎನ್ನಲಾಗ್ತಿದೆ.
ಪುಷ್ಪ ಸಿನಿಮಾದ ರಶ್ಮಿಕಾ ಫಸ್ಟ್ ಲುಕ್ ರಿಲೀಸ್ – ‘ಸಾನವಿಯ’ ‘ಶ್ರೀವಲ್ಲಿ’ ಲುಕ್ ಗೆ ಫ್ಯಾನ್ಸ್ ಫಿದಾ..!
ಭಿಕ್ಷೆ ಅಂದುಕೊಂಡ್ರು ಪರವಾಗಿಲ್ಲ ಸಹಾಯ ಬೇಕು – ನಟಿ ವಿಜಲಕ್ಷ್ಮಿ ಕಣ್ಣೀರು