ಜಪಾನ್ ನ ಮುಂದಿನ ಪ್ರಧಾನಿಯಾಗಿ ಫ್ಯೂಮಿಯೊ ಕಿಶಿಡ ಆಯ್ಕೆ..!
ಜಪಾನ್ : ಜಪಾನ್ ನ ಪ್ರಧಾನಿ ಸ್ಥಾನದಿಂದ ಯೊಶಿಹಿಡೆ ಸುಗ ಅವರು ಕೆಳಗಿಳಿಯಲಿದ್ದಾರೆ. ಅವರು ತಮ್ಮ ಸ್ಥಾನದಿಂದ ಕೆಳಗಿಳಿದ ನಂತರ ಮುಂದಿನ ಪ್ರಧಾನಿಯಾರಾಗಲಿದ್ದಾರೆ ಅನನ್ನೋ ಚರ್ಚೆ ನಡೆಯುತ್ತಿದೆ. ಅನೇಕರು ಪ್ರಧಾನಿ ಸ್ಥಾನದ ರೇಸ್ ನಲ್ಲಿದ್ದಾರೆ. ಈ ನಡುವೆ ಜಪಾನ್ ನ ಮುಂದಿನ ಪ್ರಧಾನಿಯಾಗಿ ಫ್ಯೂಮಿಯೊ ಕಿಶಿಡ ಅವರು ಅಧಿಕಾರ ಸ್ವೀಕಾರ ಮಾಡುವುದು ಬಹುತೇಕ ಫೈನಲ್ ಆಗಿದೆ.
ಹೌದು ಫ್ಯೂಮಿಯೊ ಕಿಶಿದ ಅವರು ಜಪಾನ್ನ ಮುಂದಿನ ಪ್ರಧಾನಿಯಾಗಲಿದ್ದಾರೆ. ಆಡಳಿತ ಪಕ್ಷದ ನಾಯಕತ್ವದ ಚುನಾವಣೆಯಲ್ಲಿ ಬಂದ ಫಲಿತಾಂಶದ ಪ್ರಕಾರ ಫ್ಯೂಮಿಯೊ ಕಿಶಿದ ಅವರು ಜಪಾನ್ ನ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಮಾಜಿ ವಿದೇಶಾಂಗ ಸಚಿವರಾದ ಕಿಶಿಡ ಅವರು, ಟ್ಯಾರೋ ಕೊನೊ ಅವರನ್ನು ಸೋಲಿಸಿದ್ದರು. ಸಂಸತ್ತಿನಲ್ಲಿ ಎಲ್ಡಿಪಿಯ ಬಹುಮತವನ್ನು ಗಮನಿಸಿದರೆ, ಕಿಶಿಡ ಅವರೇ ಮುಂದಿನ ಪ್ರಧಾನ ಮಂತ್ರಿ ಎಂದೇ ಹೇಳಲಾಗ್ತಿದೆ.
ಕೋವಿಡ್ ಸಾಂಕ್ರಾಮಿಕ ನಂತರದ ಆರ್ಥಿಕ ಚೇತರಿಕೆ ಮತ್ತು ಉತ್ತರ ಕೊರಿಯಾದಿಂದ ಬೆದರಿಕೆಗಳನ್ನು ಎದುರಿಸುವುದು ಸೇರಿದಂತೆ ಹಲವಾರು ಕಠಿಣ ಸಮಸ್ಯೆಗಳನ್ನು ನೂತನ ಪ್ರಧಾನಿ ಎದುರಿಸಲಿದ್ದಾರೆ.








