ಪಾಕಿಸ್ತಾನದ ಮುಖವಾಡ ಕಳಚಿದ ಉಗ್ರ – 20 ಸಾವಿರ ಕೊಟ್ಟಿದ್ದ ಬಗ್ಗೆ ತಪ್ಪೊಪ್ಪಿಕೊಂಡ..!
ಜಮ್ಮು ಕಾಶ್ಮೀರ : ಕಪಟಿ ಪಾಕಿಸ್ತಾನ ಉಗ್ರರನ್ನ ಪೋಷಣೆ ಮಾಡ್ತಿರೋದು ಆಗಾಗ ಭಾರತದ ವಿರುದ್ಧ ಛೂ ಬಿಡುವ ಯತ್ನ ಮಾಡುವುದು ಇದೆಲ್ಲಾ ಗೊತ್ತಿಲ್ಲದ ಸಂಗತಿಯೇನಲ್ಲ. ಆದ್ರೆ ಈಗ ಉಗ್ರನೇ ಪಾಕಿಸ್ತಾನದ ಅಸಲಿ ಮುಖವಾಡವನ್ನ ಕಳಚಿದ್ದಾನೆ. ಪಾಕಿಸ್ತಾನ 20 ಸಾವಿರ ದುಡ್ಡು ಕೊಟ್ಟಿದ್ದಾನೆ ತಪ್ಪೊಪ್ಪಿಕೊಂಡಿದ್ದಾನೆ.
ಹೌದು ಪಾಕಿಸ್ತಾನದ ಉಗ್ರ ಅಲಿ ಬಾಬರ್ ಪತ್ರಾ (19) ತಾನು ಲಷ್ಕರ್-ಎ-ತೊಯ್ಬಾ ಮತ್ತು ಪಾಕಿಸ್ತಾನದ ಸೇನೆಯಿಂದ ತರಬೇತಿ ಪಡೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸೆಪ್ಟೆಂಬರ್ 26 ಈತನನ್ನ ಉರಿ ಸೆಕ್ಟರ್‍ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯಿಂದ ಸೆರೆಹಿಡಿದಿತ್ತು. ಈತನನ್ನ ಬುಧವಾರ ಮಾಧ್ಯಮದವರ ಮುಂದೆ ಹಾಜರುಪಡಿಸಲಾಗಿತ್ತು.
ಭಾವನೆಗಳೂ ಉಚಿತವಲ್ಲ…! ಶಸ್ತ್ರ ಚಿಕಿತ್ಸೆ ವೇಳೆ ಅತ್ತಿದ್ದಕ್ಕೆ ದಂಡ ಕಟ್ಟಿದ ರೋಗಿ..!
ಈ ವೇಳೆ ಆತ ಪ್ರತಿಕ್ರಿಯಿಸಿದ್ದು, ನಾನು ಲಷ್ಕರ್-ಎ-ತೊಯ್ಬಾ ಮತ್ತು ಪಾಕಿಸ್ತಾನದ ಸೇನೆಯಿಂದ ತರಬೇತಿ ಪಡೆದುಕೊಂಡಿದ್ದೇನೆ. ನನಗೆ ಪಾಕಿಸ್ತಾನಿ ಹ್ಯಾಂಡ್ಲರ್‌ಗಳಿಂದ 20 ಸಾವಿರ ರೂ. ನೀಡಲಾಗಿತ್ತು ಎಂದಿದ್ದಾನೆ. ಅಲ್ಲದೇ ಪಾಕಿಸ್ತಾನದಲ್ಲಿ ತನ್ನ ತಾಯಿಯ ಬಳಿಗೆ ಕರೆದುಕೊಂಡು ಹೋಗುವಂತೆ ಗೋಳಾಡಿದರೂ, ನನ್ನನ್ನು ಭಾರತಕ್ಕೆ ಕಳುಹಿಸಿದರು ಎಂದು ಹೇಳಿಕೊಂಡಿದ್ದಾನೆ.
ಭಾರತೀಯ ಸೇನೆಯು ರಕ್ತಪಾತವನ್ನು ನಡೆಸುತ್ತೆ ಎಂದು ನಾನು ತಿಳಿದುಕೊಂಡಿದ್ದೆ. ಆದರೆ ಇಲ್ಲಿ ಎಲ್ಲವೂ ಶಾಂತಿಯುತವಾಗಿವೆ. ಭಾರತೀಯ ಸೇನೆಯು ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ ಎಂದು ನಾನು ನನ್ನ ತಾಯಿಗೆ ಹೇಳುತ್ತೇನೆ ಎಂದು ಭಾರತೀಯ ಸೇನೆವನ್ನು ಪ್ರಶಂಸಿದ್ದಾನೆ. ಅಲ್ಲದೇ ಭಾರತೀಯ ಸೇನೆಯ ನಡವಳಿಕೆ ಪಾಕಿಸ್ತಾನದ ಸೇನೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಇದರಿಂದ ನನಗೆ ಕಾಶ್ಮೀರದಲ್ಲಿ ಶಾಂತಿ ಇದೆ ಎಂದು ಅನಿಸುತ್ತದೆ ಎಂದು ತಿಳಿಸಿದ್ದಾನೆ.








