ನಮ್ ಹತ್ರ ಟ್ರೈನಿಂಗ್ ತಗೊಂಡು.. ಜಾಸ್ತಿ ಸಂಬಳ ಕೊಡೋ ಕಡೆ ಹೋಗ್ತಾರೆ : ರೇವಣ್ಣ
ಹಾಸನ : ಫ್ಯಾಕ್ಟರಿ, 1983 ರಿಂದ ಹುಟ್ಟು ಹಾಕಿದ್ದೀವಿ. ನಮ್ಮ ಹತ್ರ ಟ್ರೈನಿಂಗ್ ತೆಗೆದುಕೊಳ್ಳುತ್ತಾರೆ.
ಜಾಸ್ತಿ ಸಂಬಳ ಕೊಡುವ ಕಡೆ ಹೋಗುತ್ತಾರೆ ಎಂದು ಪಕ್ಷ ಬಿಡುವವರ ಬಗ್ಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ನ ಕೆಲ ನಾಯಕರು ಪಕ್ಷ ಬಿಡುತ್ತಿರುವ ಬಗ್ಗೆ ಹಾಸನದಲ್ಲಿ ಮಾತನಾಡಿದ ಹೆಚ್.ಡಿ.ರೇವಣ್ಣ, ನಮ್ಮ ಮಿಷನ್ ಓಡುತ್ತಿದೆ.
ಕಾಂಗ್ರೆಸ್ ಜೆಡಿಎಸ್ ನ ಮಿಷನ್ ಗೆ ಕೈ ಹಾಕಿ, ನಮ್ ಮಿಷನ್ ತೆಗೆದುಕೊಂಡು ಓರಲ್ ಮಾಡಿಕೊಳ್ಳುತ್ತಿದ್ದಾರೆ.
ಇದರಿಂದ ನಮ್ ಮಿಷನ್ ಎಷ್ಟುಗಟ್ಟಿ ಇದೆ ಲೆಕ್ಕ ಹಾಕಲಿ ಎಂದು ಟಾಂಗ್ ನೀಡಿದರು.
ಇನ್ನು ನಮ್ಮ ಮಿಷನ್ ಮುಳುಗುತ್ತಿದೆ ಎಂದು ಕಾಂಗ್ರೆಸ್ ನವರು ಹೇಳ್ತಿದ್ದಾರೆ. ಆದ್ರೆ ಕಾಂಗ್ರೆಸ್ ಪಕ್ಷಕ್ಕೆ ಈ ಪರಿಸ್ಥಿತಿ ಬಂತಲ್ಲಾ ಅಂಥಾ ವ್ಯಥೆಯಾಗುತ್ತಿದೆ.
ದೇವರು ಕಣ್ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಕ್ಲೋಸ್ ಮಾಡಿಸುತ್ತಿದ್ದಾನೆ. ಸುಳ್ಳು ಜಾಸ್ತಿ ದಿನ ನಡೆಯಲ್ಲ, ಧರ್ಮಕ್ಕೆ ಜಯ ಇದ್ದೇ ಇರುತ್ತದೆ ಎಂದು ರೇವಣ್ಣ ಹೇಳಿದ್ದಾರೆ.
ಅಂದಹಾಗೆ ಮಾಜಿ ಸಚಿವ ಜಿ.ಟಿ.ದೇವೇಗೌಡ, ಶಾಸಕ ಶ್ರೀನಿವಾಸಗೌಡ ಬಳಿಕ ಎಂಎಲ್ ಸಿ ಸಂದೇಶ್ ನಾಗರಾಜ್ ಕೂಡ ಜೆಡಿಎಸ್ ತೊರೆಯುವುದಾಗಿ ಹೇಳಿಕೊಂಡಿದ್ದಾರೆ.









