“ಜಲಜೀವನ್ ಮಿಷನ್” ಯೋಜನೆಯಡಿ 5 ಕೋಟಿ ಕುಟುಂಬಳಿಗೆ ನೀರು ಪೂರೈಕೆ – ಮೋದಿ
2019ರಲ್ಲಿ ದೇಶಾದ್ಯಂತ ಜಾರಿಗೆ ಬಂದ “ಜಲಜೀವನ್ ಮಿಷನ್” ಯೋಜನೆಯಡಿ ಈವರೆಗೂ ಸುಮಾರು 5 ಕೋಟಿ ಮನೆಗಳಿಗೆ ನೀರು ಪೂರೈಕೆಯಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಹೌದು ಈ ಯೋಜನೆಯನ್ನು 2019ರಲ್ಲಿ ಆರಂಭಿಸಿದ ಬಳಿಕ 5 ಕೋಟಿ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ.
ನಲ್ಲಿಯ ಮೂಲಕ ಸುಮಾರು 1.25 ಲಕ್ಷ ಗ್ರಾಮಗಳಲ್ಲಿ ಮನೆಗಳಿಗೆ ನೀರು ಪೂರೈಕೆ ಆಗುತ್ತಿದೆ ಎಂದು ಮೋದಿ ಅವರು ಹೇಳಿದ್ದಾರೆ.
ಅಲ್ಲದೇ ಭಾರತದಲ್ಲಿ ಕಳೆದ 7 ದಶಕಗಳಲ್ಲಿ ಆಗದಿದ್ದ ಸಾಧನೆ ಕಳೆದ 2 ವರ್ಷಗಳಲ್ಲಿ ಆಗಿದೆ ಎಂದೂ ಹೇಳಿದರು.
ಮೋದಿ ಅವರು ಪಾಣಿ ಸಮಿತಿ, ಗ್ರಾಮ ಸಮಿತಿ, ಗ್ರಾಮ ಪಂಚಾಯಿತಿ ಸದಸ್ಯರ ಜೊತೆಗೆ ಸಂವಾದ ನಡಸಿದ ಬಳಿಕ ಈ ಯೋಜನೆ ಕೇವಲ ನೀರು ಪೂರೈಕೆ ಉದ್ದೇಶವನ್ನಷ್ಟೇ ಹೊಂದಿಲ್ಲ.
ಮಹಿಳಾ ಮುನ್ನಡೆ ಮತ್ತು ವಿಕೇಂದ್ರೀಕರಣದ ಅಭಿಯಾನವೂ ಆಗಿದೆ ತಿಳಿಸಿದರು.
ಇದೇ ವೇಳೆ ಸ್ವಾತಂತ್ರ್ಯದ ನಂತರ 2019ರವರೆಗೆ ದೇಶದಲ್ಲಿ 3 ಕೋಟಿ ಕುಟುಂಬಗಳಿಗಷ್ಟೇ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರು ಪೂರೈಕೆ ಆಗುತ್ತಿತ್ತು.
ಈಗ 80 ಜಿಲ್ಲೆಗಳಲ್ಲಿ 5 ಕೋಟಿ ಕುಟುಂಬಗಳಿಗೆ ಸಂಪರ್ಕ ಒದಗಿಸಲಾಗಿದೆ.
ಈಗ ದೇಶದ ಯಾವುದೇ ಭಾಗದಲ್ಲಿ ಟ್ಯಾಂಕರ್‌ಗಳು, ರೈಲುಗಳ ಮೂಲಕ ನೀರು ಪೂರೈಸುವ ವ್ಯವಸ್ಥೆ ಇಲ್ಲ ಎಂದರು.
ಈ ಮೂಲಕ ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನ ಕಟುವಾಗಿ ಟೀಕಿಸಿದರು.
ಲೇಹ್ ನಲ್ಲಿ ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜ ಅನಾವರಣ..!
ಲಡಾಖ್ ಗಡಿಯಲ್ಲಿ ಸೇನೆ ಹೆಚ್ಚಿಸಿದ ಕಪಟಿ ಚೀನಾ..!
ಮೋದಿ ಉಳಿಯಲು ಬಿಟ್ರೆ ಜನ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತೆ : ಸಿದ್ದರಾಮಯ್ಯ