ಪಂಡೋರಾ ಪೇಪರ್ಸ್ ನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಹೆಸರು..!
ಕ್ರಿಕೆಟ್ ದಿಗ್ಗಜ ಸೆಂಚುರಿಗಳ ಸರದಾರ ಸಚಿನ್ ತೆಂಡುಲ್ಕರ್ ಗೆ ಇದೀಗ ಸಂಕಷ್ಟ ಎದುರಾಗಿದೆ. ಹೌದು 2016ರಲ್ಲಿ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ ಪನಾಮಾ – ಪೇಪರ್ ಲೀಕ್ ಪ್ರಕರಣದ ಮಾದರಿಯಲ್ಲೇ ಪಂಡೋರಾ ಪೇಪರ್ಸ್ ಸೋರಿಕೆಯಾಗಿರುವ ರಹಸ್ಯ ಹಣಕಾಸು ಮಾಹಿತಿ ಬಿಡುಗಡೆಯಾಗಿದೆ.
ಈ ಲಿಸ್ಟ್ ಕೆಲವು ಬಿಗ್ ಸೆಲಿಬ್ರಿಟಿಗಳನ್ನ ಹೆಸರಿಸಲಾಗಿದ್ದು, ಈ ಪೈಕಿ ಸಚಿನ್ ತೆಂಡುಲ್ಕರ್ ಅವರ ಹೆಸರು ಕೂಡ ಇದೆ. ಅಲ್ಲದೇ ದಿವಾಳಿ ಎಂದು ಘೋಷಿಸಿರುವ ಉದ್ಯಮಿ ಅನಿಲ್ ಅಂಬಾನಿ , ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಶಾ ಪತಿ ಸೇರಿದಂತೆ 300ಕ್ಕೂ ಹೆಚ್ಚು ಭಾರಿತೀಯರ ಹೆಸರುಗಳು ಈ ಲಿಸ್ಟ್ ನಲ್ಲಿರೋದಾಗಿ ತಿಳಿದುಬಂದಿದೆ.
IPL 2021 | ಸೂಪರ್ ಕಿಂಗ್ಸ್ ಗೆ ಕ್ಯಾಪಿಟಲ್ಸ್ ಸವಾಲ್
ಹೌದು ಐಸಿಐಜೆ ಪ್ರಸ್ತುತಪಡಿಸಿದ ನಕ್ಷೆಯ ಪ್ರಕಾರ ಕನಿಷ್ಠ ಆರು ಭಾರತೀಯ ರಾಜಕಾರಣಿಗಳು ಕಡಲಾಚೆಯ ವ್ಯವಹಾರಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಭಾರತ ಸೇರಿದಂತೆ 91 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಪ್ರಸ್ತುತ ಮತ್ತು ಮಾಜಿ ವಿಶ್ವ ನಾಯಕರು, ರಾಜಕಾರಣಿಗಳು ಮತ್ತು ಸಾರ್ವಜನಿಕ ಅಧಿಕಾರಿಗಳ ಹಣಕಾಸು ರಹಸ್ಯಗಳನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಲಾಗ್ತಿದೆ.
ಹೊಸ ಆಲ್ ರೌಂಡರ್ ಗೆ ಗವಾಸ್ಕರ್ ಜೈ : ಹಾರ್ದಿಕ್ ಪಾಂಡ್ಯ ಪವರ್ ಆಫ್ ಆಯ್ತಾ..?
ಅಷ್ಟೇ ಅಲ್ಲದೇ ಪನಾಮಾ ಪೇಪರ್ಸ್ ನಲ್ಲಿ ಸಚಿನ್ ಹೆಸರು ಬಹಿರಂಗವಾದ ಕೇವಲ 3 ತಿಂಗಳ ನಂತರ ವರ್ಜಿನ್ ದ್ವೀಪಗಳಲ್ಲಿ ತನ್ನ ಅಸ್ತಿತ್ವವನ್ನು ನಗದೀಕರಣಗೊಳಿಸುವಂತೆ ಸಚಿನ್ ಕೇಳಿಕೊಂಡಿರೋದಾಗಿಯೂ ವರದಿಯಾಗಿದೆ. ಬಿಬಿಸಿ, ದಿ ಗಾರ್ಡಿಯನ್, ಮತ್ತು ಭಾರತದ ‘ದಿ ಇಂಡಿಯನ್ ಎಕ್ಸ್‌ಪ್ರೆಸ್, ಸೇರಿದಂತೆ 150 ಹೆಚ್ಚು ಜರ್ನಲಿಸ್ಟ್ ಗಳನ್ನ ಒಳಗೊಂಡ ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ ತನಿಖೆ ಮಾಡಿ ಈ ಬಗ್ಗೆ ವರದಿ ಮಾಡಿದೆ.








