ADVERTISEMENT
Sunday, August 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

RCBಗೆ ಸೋಲಿನ ಶಾಕ್​​​- ವಿರಾಟ್​​ ಬಳಗಕ್ಕೆ 3ನೇ ಸ್ಥಾನ ಫಿಕ್ಸ್​​​

Mahesh M Dhandu by Mahesh M Dhandu
October 7, 2021
in IPL 2021, Newsbeat, ಐಪಿಎಲ್ 2021
RCB
Share on FacebookShare on TwitterShare on WhatsappShare on Telegram

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳ ಪೈಕಿ ಒಂದನ್ನಾದರೂ ಪಡೆಯಬೇಕು ಅನ್ನುವ ಛಲದಲ್ಲಿತ್ತು. ಆದರೆ ಸನ್​​ರೈಸರ್ಸ್​ ನೀಡಿದ ಸೋಲಿನ ಶಾಕ್​​ ವಿರಾಟ್​​ ಬಳಗವನ್ನು ಲೀಗ್​​ನಲ್ಲಿ 3ನೇ ಸ್ಥಾನಕ್ಕೆ ಫಿಕ್ಸ್​​ ಆಗುವಂತೆ ಮಾಡಿದೆ. ಅಬುಧಾಬಿಯಲ್ಲಿ ಆರ್​​ಸಿಬಿ ವಿರುದ್ಧ 4 ರನ್​​ಗಳ ಜಯ ಸಾಧಿಸಿದ ಸನ್​​ ರೈಸರ್ಸ್​ ಹೈದ್ರಾಬಾದ್​​ ವಿರಾಟ್​​​ ಬಳಗಕ್ಕೆ ಶಾಕ್​​ ನೀಡಿತು.

ಟಾಸ್​​ ಗೆದ್ದ ಆರ್​​ಸಿಬಿ ಎಸ್​​ಆರ್​​ಎಚ್​ ತಂಡವನ್ನು ಬ್ಯಾಟಿಂಗ್​​ಗೆ ಇಳಿಸಿತು.  ಜೇಸನ್​​ ರಾಯ್​​ ಮತ್ತು ಅಭಿಷೇಕ್​​ ಶರ್ಮಾ ಜೊತೆಯಾಟ ಹೆಚ್ಚು ಹೊತ್ತು ನಡೆಯಲಿಲ್ಲ. ಶರ್ಮಾ 13 ರನ್​​ಗಳಿಸಿ ಗಾರ್ಟನ್​​ಗೆ ವಿಕೆಟ್​​ ಒಪ್ಪಿಸಿದರು. ರಾಯ್​​​ ಜೊತೆ ಸೇರಿದ ಕೇನ್​​ ವಿಲಿಯಮ್ಸನ್​​ ಪವರ್​ ಪ್ಲೇ ಲಾಭ ಪಡೆದುಕೊಂಡು 70 ರನ್​​ಗಳ ಜೊತೆಯಾಟ ಆಡಿದರು. ಈ ಹಂತದಲ್ಲಿ ದಾಳಿಗಿಳಿದ ಹರ್ಷಲ್​​ ಪಟೇಲ್​​ 29 ಎಸೆತಗಳಲ್ಲಿ 31 ರನ್​​ಗಳಿಸಿದ್ದ ವಿಲಿಯಮ್ಸ್​​ರನ್ನು ಕ್ಲೀನ್​​ ಬೌಲ್ಡ್​​ ಮಾಡಿದರು.

Related posts

weekly-horoscope-august-9-to-15-2026-kannada

ಈ ವಾರದ ರಾಶಿ ಭವಿಷ್ಯ (ಆಗಸ್ಟ್ 09 – 15, 2026): ಮೇಷದಿಂದ ಮೀನ ರಾಶಿಯವರೆಗೆ ಹೇಗಿರಲಿದೆ ಗ್ರಹಗತಿ? ಸಂಪೂರ್ಣ ಜ್ಯೋತಿಷ್ಯ ಫಲಗಳು!

August 9, 2026
ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

August 9, 2026

ರಾಯ್​​ ಜೊತೆ ಸೇರಿದ ಪ್ರಿಯಮ್​​ ಗರ್ಗ್​ ಕ್ರೀಸ್​​ಗೆ ಬರ್ತಾ ಇದ್ದಂತೆಯೇ ಬಿರುಸಿನ ಆಟಕ್ಕೆ ಇಳಿದರು.   ಡೇನಿಯಲ್​​ ಕ್ರಿಶ್ಚಿಯನ್​​ ಗರ್ಗ್​ ಆಟಕ್ಕೆ ಕಡಿವಾಣ ಹಾಕಿದರು. 38 ಎಸೆತಗಳಲ್ಲಿ 44 ರನ್​​ಗಳಿಸಿದ್ದ ರಾಯ್​​ ಕೂಡ ಅಪಾಯಕಾರಿಯಾಗಿ ಕಾಣುತ್ತಿದ್ದರು. ಆದರೆ ಕ್ರಿಶ್ಚಿಯನ್​​ ಎಸೆತದಲ್ಲಿ ಕಾಟ್​​ ಅಂಡ್​ ಬೋಲ್ಡ್​​ ಆಗಿ ನಿರಾಸೆ ಅನುಭವಿಸಿದರು. ಚಹಲ್​​ ಅಬ್ದುಲ್​​ ಸಮದ್​​ರನ್ನು ಹೆಚ್ಚು ಹೊತ್ತು ಆಡಲು ಬಿಡಲಿಲ್ಲ. ವೂರ್ದಧಿಮಾನ್​​ ಸಾಹಾ ಮತ್ತು ಜೇಸನ್​​ ಹೋಲ್ಡರ್​​ ಸ್ಲಾಗ್​ ಓವರುಗಳಲ್ಲಿ ಬಿರುಸಿನ ಆಟವಾಡಿದರು. 20 ಓವರುಗಳಲ್ಲಿ ಸನ್​ರೈಸರ್ಸ್​ 7 ವಿಕೆಟ್​​ ಕಳೆದುಕೊಂಡು 141 ರನ್​​ಗಳಿಸಿತು.  ಹರ್ಷಲ್​​ ಪಟೇಲ್​​ 3 ವಿಕೆಟ್​​ ಪಡೆದು ಮಿಂಚಿದರು.

RCB saaksha tv

ವಿರಾಟ್​​ ಕೊಹ್ಲಿ ಮತ್ತು ದೇವದತ್​​ ಪಡಿಕಲ್​​ ಚೇಸಿಂಗ್​​ ಆರಂಭಿಸಿದರು. ಮೊದಲ ಓವರ್​​ನಲ್ಲೇ ಭುವನೇಶ್ವರ್​​ ಕುಮಾರ್​​​ 5 ರನ್​​ಗಳಿಸಿದ್ದ ವಿರಾಟ್​​​ ವಿಕೆಟ್​​ ಕಬಳಿಸಿದರು. ಡೇನಿಯಲ್​ ಕ್ರಿಶ್ಚಿಯನ್​​​​​  ಸಿದ್ಧಾರ್ಥ್​ ಕೌಲ್​​ ವಿಕೆಟ್​​​ ಹಾರಿಸಿದರು. ದೇವದತ್​​ ಪಡಿಕಲ್​​ ಮತ್ತು ಶ್ರೀಕರ್​​ ಭರತ್​​ ಪವರ್​ ಪ್ಲೇನಲ್ಲಿ ರನ್​​ಗಳಿಸಲು ಪರದಾಟ ನಡೆಸಿದರು. ಉಮ್ರಾನ್​​ ಮಲಿಕ್​ 12 ರನ್​​ಗಳಿಸಿದ್ದ ಭರತ್​​ ವಿಕೆಟ್​ ಪಡೆದು ಎಸ್​​ಆರ್​​ಎಚ್​​ಗೆ ಬ್ರೇಕ್​​ ತಂದುಕೊಟ್ಟರು.

ಪಡಿಕಲ್​​ ಜೊತೆ ಸೇರಿದ ಗ್ಲೆನ್​ಮ್ಯಾಕ್ಸ್​​ ವೆಲ್​​​ ಬಿರುಸಿನ ಆಟಕ್ಕೆ ಇಳಿದರು.  ಆದರೆ ಪಡಿಕಲ್​​ ಬ್ಯಾಟ್​​ನಿಂದ ರನ್​ ಬರಲಿಲ್ಲ.  25 ಎಸೆತಗಳಲ್ಲಿ 3 ಫೋರ್​​ ಮತ್ತು 2 ಸಿಕ್ಸರ್​​ ನೆರವಿನಿಂದ  40 ರನ್​ಗಳಿಸಿದ್ದ ಮ್ಯಾಕ್ಸ್​​ವೆಲ್​​ ರನೌಟ್​​ ಬಲೆಯಲ್ಲಿ ಬಿದ್ದರು.  ದೇವದತ್​​ ಪಡಿಕಲ್​​  52 ಎಸೆತಗಳಲ್ಲಿ 41ರನ್​​ಗಳಿಸಿದ್ದು ಆರ್​​ಸಿಬಿ ಚೇಸಿಂಗ್​​ಗೆ ಹೊಡೆತ ನೀಡಿತ್ತು.  ರಶೀದ್​​ ಖಾನ್​​ ಪಡಿಕಲ್​​ ವಿಕೆಟ್​​​​​ ಪಡೆದು ಪಂದ್ಯಕ್ಕೆ ತಿರುವು ನೀಡಿದರು.  ಎಬಿ ಡಿ ವಿಲಿಯರ್ಸ್​ ಮತ್ತು  ಶಹಬಾಝ್​ ಅಹ್ಮದ್​​ ತಂಡವನ್ನು ಗೆಲುವಿನ ದಡ ಸೇರಿಸುತ್ತಾರೆ ಅನ್ನುವಾಗಲೇ 14 ರನ್​ಗಳಿಸಿದ್ದ ಅಹ್ಮದ್​​​ ಹೋಲ್ಡರ್​​ಗೆ ವಿಕೆಟ್​​ ಒಪ್ಪಿಸಿದರು. ಕೊನೆಯ ಓವರ್​​ನಲ್ಲಿ ಆರ್​​ಸಿಬಿ ಗೆಲುವಿಗೆ 13 ರನ್​ಗಳು ಬೇಕಿತ್ತು. ಭುವನೇಶ್ವರ್​​ ಕುಮಾರ್​​​ ಉತ್ತಮ ಬೌಲಿಂಗ್​​ ನಡೆಸಿ ಕೇವಲ 8 ರನ್​​ಗಳನ್ನಷ್ಟೇ ನೀಡಿದ್ದರು. ಆರ್​​ಸಿಬಿ 4 ರನ್​​ಗಳಿಂದ ಪಂದ್ಯ ಸೋತಿತು. ಪ್ಲೇ-ಆಫ್​​ಗೆ ಅರ್ಹತೆ ಪಡೆದುಕೊಂಡಿದ್ದರೂ ಆರ್​​ಸಿಬಿ ಎಲಿಮಿನೇಟರ್​​ನಲ್ಲಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

Tags: #Saaksha TVipl 2021RCBsrh
ShareTweetSendShare
Join us on:

Related Posts

weekly-horoscope-august-9-to-15-2026-kannada

ಈ ವಾರದ ರಾಶಿ ಭವಿಷ್ಯ (ಆಗಸ್ಟ್ 09 – 15, 2026): ಮೇಷದಿಂದ ಮೀನ ರಾಶಿಯವರೆಗೆ ಹೇಗಿರಲಿದೆ ಗ್ರಹಗತಿ? ಸಂಪೂರ್ಣ ಜ್ಯೋತಿಷ್ಯ ಫಲಗಳು!

by admin
August 9, 2026
0

ಈ ವಾರ ಭವಿಷ್ಯ - 09.08.2026 - 15.08.2026 ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ...

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

by Shwetha
August 9, 2026
0

ಬಾಗಲಕೋಟೆ: ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಸಚಿವ ವಿಜಯಾನಂದ ಕಾಶಪ್ಪನವರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ತಮ್ಮ ಸಚಿವ ಸ್ಥಾನ ತಪ್ಪಿಸಲು ಸ್ವಾಮೀಜಿಗಳು...

ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

by Shwetha
August 9, 2026
0

ನವದೆಹಲಿ: ವಿದ್ಯಾರ್ಥಿಗಳ ಹೋರಾಟದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟವು ಡಬಲ್ ಸ್ಟ್ಯಾಂಡರ್ಡ್ ಅನುಸರಿಸುತ್ತಿವೆ ಎಂದು ಬಿಜೆಪಿ ತೀವ್ರವಾಗಿ ವಾಗ್ದಾಳಿ ನಡೆಸಿದೆ. ದೆಹಲಿಯಲ್ಲಿ ನಡೆಯುವ ಪ್ರತಿಭಟನೆಗಳಿಗೆ ಓಡೋಡಿ...

ಕ್ಯೂ ಲೈನ್‌ನಲ್ಲಿ 24 ಗಂಟೆ ಕಾಯುವ ಭಕ್ತರ ಕಷ್ಟಕ್ಕೆ ಟಿಟಿಡಿ ಚೆಕ್‌ಮೇಟ್: ಟಿಟಿಡಿಯಿಂದ ಮೂವಿಂಗ್ ಟೇಬಲ್ ಮ್ಯಾಜಿಕ್-ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಟೆಕ್ನಾಲಜಿ ಹವಾ ಶುರು

ಕ್ಯೂ ಲೈನ್‌ನಲ್ಲಿ 24 ಗಂಟೆ ಕಾಯುವ ಭಕ್ತರ ಕಷ್ಟಕ್ಕೆ ಟಿಟಿಡಿ ಚೆಕ್‌ಮೇಟ್: ಟಿಟಿಡಿಯಿಂದ ಮೂವಿಂಗ್ ಟೇಬಲ್ ಮ್ಯಾಜಿಕ್-ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಟೆಕ್ನಾಲಜಿ ಹವಾ ಶುರು

by Shwetha
August 9, 2026
0

ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಪ್ರತಿ ದಿನವೂ ಹೊಸ ದಾಖಲೆ ಬರೆಯುತ್ತಿದೆ. ವಿಶೇಷವಾಗಿ ಯಾವುದೇ ಟೋಕನ್ ಇಲ್ಲದೆ ಧರ್ಮ ದರ್ಶನಕ್ಕೆ ಬರುವ ಸಾಮಾನ್ಯ ಭಕ್ತರ ಸಂಖ್ಯೆ ಗಣನೀಯವಾಗಿ...

ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲಿ ಇಲ್ಲದಿದ್ದರೆ ಕೋಮಾಗೆ ಹೋಗುವುದು ಗ್ಯಾರಂಟಿ: ಸವದಿ ವ್ಯಂಗ್ಯದ ಏಟು

ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲಿ ಇಲ್ಲದಿದ್ದರೆ ಕೋಮಾಗೆ ಹೋಗುವುದು ಗ್ಯಾರಂಟಿ: ಸವದಿ ವ್ಯಂಗ್ಯದ ಏಟು

by Shwetha
August 9, 2026
0

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ಪ್ರತಿಪಕ್ಷ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram