ರಾಯಲ್ ಚಾಲೆಂಜರ್ಸ್ ಬೆಂಗಳೂರು ಸನ್ರೈಸರ್ಸ್ ವಿರುದ್ಧ ಸೋತಿದ್ದು ಚೆನ್ನೈ ತಂಡಕ್ಕೆ ಬೋನಸ್ ಆದಂತೆ ಆಗಿದೆ. ಯಾಕಂದರೆ ಚೆನ್ನೈ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆದ್ದರೂ ಒಂದು ಸೋತರೂ ಒಂದೇ. ಆದರೆ 115 ರನ್ಗಳಿಗಿಂತ ಹೆಚ್ಚು ಅಂತರದಲ್ಲಿ ಸೋಲಬಾರದು ಅಷ್ಟೇ..!ಪಂಜಾಬ್ ತಂಡ ಸದ್ಯ ಅಂಕಪಟ್ಟಿಯಲ್ಲಿ 10 ಪಂಕ ಪಡೆದಿದೆ. ಈ ಮ್ಯಾಚ್ ಗೆದ್ದರೂ ಅದರ ಬಳಿ ಇರುವುದು 12 ಅಂಕಗಳಷ್ಟೇ. ಆದರೆ ಈಗಾಗಲೇ ಕೆಕೆಆರ್ ಪಾಸಿಟಿವ್ ರನ್ರೇಟ್ನೊಂದಿಗೆ 12 ಅಂಕ ಪಡೆದುಕೊಂಡಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಗೆದ್ದರೆ ಪಂಜಾಬ್ ಟೂರ್ನಿಯಿಂದ ಔಟ್. ಒಟ್ಟಾರೆ ಗಣಿತದ ಲೆಕ್ಕಾಚಾರದಲ್ಲಷ್ಟೇ ಪಂಜಾಬ್ ಪ್ಲೇ-ಆಫ್ ಭವಿಷ್ಯ ನಿಂತಿದೆ.
ಚೆನ್ನೈ ತಂಡ ಈ ಪಂದ್ಯವನ್ನು ಫ್ರೀಯಾಗಿ ಆಡಲಿದೆ. ದುಬೈನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಬ್ಯಾಟ್ಸ್ಮನ್ಗಳ ಕಡೆಗೆ ಹೆಚ್ಚು ಗಮನ ಇಡಬೇಕಿದೆ. ಚೆನ್ನೈ ರುತುರಾಜ್ ಗಾಯಾಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಮೇಲೆ ಹೆಚ್ಚು ನಂಬಿಕೆ ಇಟ್ಟಿದೆ. ಮೊಯಿನ್ ಅಲಿ, ರಾಬಿನ್ ಉತ್ತಪ್ಪ ಮತ್ತು ಅಂಬಟಿ ರಾಯುಡು ಕೂಡ ಆಟಕ್ಕೆ ಕುದುರಿಕೊಂಡಿದ್ದಾರೆ. ಜಡೇಜಾ ಮತ್ತು ಬ್ರಾವೋ ಆಲ್ರೌಂಡ್ ಆಟ ಸಿಎಸ್ಕೆ ಯಶಸ್ಸಿನ ಸೀಕ್ರೆಟ್. ಬೌಲಿಂಗ್ನಲ್ಲೂ ಹೆಚ್ಚು ತಲೆನೋವು ಸಿಎಸ್ಕೆಗೆ ಇಲ್ಲ.
ಪಂಜಾಬ್ ಗೆಲ್ಲಬೇಕು ಮತ್ತು ರನ್ರೇಟ್ ಒತ್ತಡದಲ್ಲೇ ಕಣಕ್ಕಿಳಿಯಲಿದೆ. ಕೆ.ಎಲ್.ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಪಂಜಾಬ್ ಬ್ಯಾಟಿಂಗ್ನ ಶಕ್ತಿಗಳು. ಅವರನ್ನು ಬಿಟ್ಟರೆ ಉಳಿದವರ ಕೊಡುಗೆ ಅಷ್ಟಕಷ್ಟೆ. ಆದರೆ ಬೌಲಿಂಗ್ನಲ್ಲಿ ಶಮಿ, ಅರ್ಶದೀಪ್ ಮತ್ತು ಬಿಷ್ಣೋಯಿ ಮಿಂಚುತ್ತಿದ್ದಾರೆ.
ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ಒಂದು ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳು ಮಿಂಚಿದರೆ, ಇನ್ನೊಂದು ಪಂದ್ಯದಲ್ಲಿ ಬೌಲರ್ಗಳು ಮಿಂಚಿದ್ದಾರೆ. ಹೀಗಾಗಿ ಟಾಸ್ ಗೆದ್ದವರು ಕೂಡ ಯೋಚಿಸಿ ನಿರ್ಧಾರ ಮಾಡಬೇಕಿದೆ.
ಸಂಭಾವ್ಯ XI
ಕಿಂಗ್ಸ್ XI ಪಂಜಾಬ್
- ಕೆ.ಎಲ್. ರಾಹುಲ್, 2. ಮಾಯಾಂಕ್ ಅಗರ್ವಾಲ್, 2 ಏಡಿಯನ್ ಮಾರ್ಕ್ರಾಂ, 4.ನಿಕೋಲಸ್ ಪೂರನ್, 5. ದೀಪಕ್ ಹೂಡ/ ಸರ್ಫರಾಜ್ ಖಾನ್ 6. ಮೊಯಿಸಸ್ ಹೆನ್ರಿಕ್ಸ್, 7. ಕ್ರಿಸ್ ಜೊರ್ಡಾನ್, 8. ಹಪ್ರೀತ್ ಬ್ರಾರ್, 9. ಅರ್ಶದೀಪ್ ಸಿಂಗ್, 10. ಮೊಹಮ್ಮದ್ ಶಮಿ, 11. ಶಾರೂಖ್ ಖಾನ್
ಚೆನ್ನೈ ಸೂಪರ್ ಕಿಂಗ್ಸ್:
.1. ರುತುರಾಜ್ ಗಾಯಕ್ವಾಡ್, 2. ಫಾಫ್ ಡು ಪ್ಲೆಸಿಸ್, 3. ರಾಬಿನ್ ಉತ್ತಪ್ಪ, 4. ಮೊಯಿನ್ ಅಲಿ, 5. ಅಂಬಟಿ ರಾಯುಡು, 6. ಎಂ.ಎಸ್.ಧೋನಿ, 7. ರವೀಂದ್ರ ಜಡೇಜಾ, 8. ಡ್ವೈನ್ ಬ್ರಾವೋ 9. ಶಾರ್ದೂಲ್ ಠಾಕೂರ್, 10. ದೀಪಕ್ ಚಹರ್, 11. ಜೋಶ್ ಹ್ಯಾಜಲ್ವುಡ್









