ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆ – ಇಲ್ಲಿದೆ ಮಾಹಿತಿ
ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆ ಅಸಂಘಟಿತ ವಲಯದ ಕಾರ್ಮಿಕರಿಗೆ ಉತ್ತಮ ಯೋಜನೆಯಾಗಿದ್ದು, ಇದು ಬೀದಿಬದಿ ವ್ಯಾಪಾರಿಗಳು, ರಿಕ್ಷಾ ವಾಲಗಳು, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಕಾರ್ಮಿಕರಿಗೆ ಅವರ ವೃದ್ಧಾಪ್ಯದಲ್ಲಿ ಆರ್ಥಿಕ ಸಹಾಯ ನೀಡುತ್ತದೆ.
ಈ ಯೋಜನೆಯಡಿ, ದಿನಕ್ಕೆ ಕೇವಲ 2 ರೂ ಗಳನ್ನು ಉಳಿಸುವ ಮೂಲಕ, ವರ್ಷಕ್ಕೆ 36000 ರೂ ಪಿಂಚಣಿ ಪಡೆಯಬಹುದು. ಇದರಲ್ಲಿ ಒಬ್ಬ ವ್ಯಕ್ತಿಯು ಈ ಯೋಜನೆಯನ್ನು 40 ವರ್ಷದಿಂದ ಆರಂಭಿಸಿದರೆ, ಪ್ರತಿ ತಿಂಗಳು 200 ರೂ.ಗಳನ್ನು ಜಮಾ ಮಾಡಬೇಕಾಗುತ್ತದೆ.

60 ವರ್ಷ ಪೂರ್ಣಗೊಂಡ ನಂತರ, ತಿಂಗಳಿಗೆ 3000 ರೂ ಪಿಂಚಣಿಯಾಗಿ ಸಿಗುತ್ತದೆ ಅಂದರೆ ವರ್ಷಕ್ಕೆ 36000 ರೂ ಲಭ್ಯವಿರುತ್ತದೆ. ಈ ಯೋಜನೆಯ ಲಾಭ ಪಡೆಯಲು, ನೀವು ಉಳಿತಾಯ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು. ಇದನ್ನು ಪಡೆಯಲು ವ್ಯಕ್ತಿಯ ವಯಸ್ಸು 18 ವರ್ಷಗಳಿಗಿಂತ ಕಡಿಮೆಯಿರಬಾರದು ಮತ್ತು 40 ವರ್ಷಗಳಿಗಿಂತ ಹೆಚ್ಚಿರಬಾರದು.
ಇದಕ್ಕಾಗಿ, ನೀವು ಸಾಮಾನ್ಯ ಸೇವಾ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಕಾರ್ಮಿಕರು ಸಿಎಸ್‌ಸಿ ಕೇಂದ್ರದಲ್ಲಿರುವ ಪೋರ್ಟಲ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಸರ್ಕಾರವು ಈ ಯೋಜನೆಗಾಗಿ ವೆಬ್ ಪೋರ್ಟಲ್ ಅನ್ನು ರಚಿಸಿದೆ. ಈ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿರುವ ಎಲ್ಲಾ ಮಾಹಿತಿಯು ಭಾರತ ಸರ್ಕಾರಕ್ಕೆ ಹೋಗುತ್ತದೆ.
ನೋಂದಣಿಗಾಗಿ, ನಿಮ್ಮ ಆಧಾರ್ ಕಾರ್ಡ್, ಉಳಿತಾಯ ಅಥವಾ ಜನ್ ಧನ್ ಬ್ಯಾಂಕ್ ಖಾತೆ ಪಾಸ್ಬುಕ್, ಮೊಬೈಲ್ ಸಂಖ್ಯೆ ಅಗತ್ಯವಿದೆ. ಇದರ ಹೊರತಾಗಿ, ಒಪ್ಪಿಗೆ ಪತ್ರವನ್ನು ನೀಡಬೇಕಾಗಿರುತ್ತದೆ. ಅದನ್ನು ಖಾತೆ ಹೊಂದಿರುವ ಬ್ಯಾಂಕ್ ಶಾಖೆಯಲ್ಲಿ ನೀಡಬೇಕಾಗಿರುತ್ತದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಬೀಟ್ ರೂಟ್ ಅಕ್ಕಿ ರೊಟ್ಟಿ https://t.co/GhSdUlzcVx
— Saaksha TV (@SaakshaTv) October 6, 2021
ಲವಂಗದ ನೀರಿನ ಆರೋಗ್ಯ ಪ್ರಯೋಜನಗಳು ಮತ್ತು ತಯಾರಿಸುವ ವಿಧಾನ https://t.co/Nj0iNdG1LC
— Saaksha TV (@SaakshaTv) October 5, 2021
ಪಿಡಿಎಫ್ ಫೈಲ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ವರ್ಡ್‌ಗೆ ಪರಿವರ್ತಿಸುವ ವಿಧಾನ https://t.co/MtJMFDXTpO
— Saaksha TV (@SaakshaTv) October 5, 2021
ಕೊಬ್ಬರಿ ಬಿಸ್ಕೆಟ್ https://t.co/D42XYnuJaK
— Saaksha TV (@SaakshaTv) October 5, 2021
#Pradhanmantri #shramyogimandhanyojana








