ಕೋವಿಡ್ ಮಾರ್ಗಸೂಚಿ ಬದಲಾಯಿಸಿದ ಬ್ರಿಟನ್ ಸರ್ಕಾರ – ಭಾರತೀಯರಿಗಿಲ್ಲ ಕ್ವಾರಂಟೈನ್
ಇಷ್ಟು ದಿನ ಭಾರತದಿಂದ ಬ್ರಿಟನ್ ಗೆ ಹೋಗುವ ಪ್ರಯಾಣಿಕರು ಎರಡೂ ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡ್ರೂ ಸಹ 10 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು. ಇದು ಬಾರತದ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಭಾರತವೂ ಸಹ ಬ್ರಿಟನ್ ಗೆ ಸರಿಯಾದ ಪ್ರತ್ಯುತ್ತರವನ್ನೇ ನೀಡಿತ್ತು. ಬ್ರಿಟನ್ ನಿಂದ ಭಾರತಕ್ಕೆ ಬರುವವರಿಗೂ ಕ್ವಾರಂಟೈನ್ ಕಡ್ಡಾಯಗೊಳಿಸಿತ್ತು. ಇದ್ರಿಂದಾಗಿ ಬೆಚ್ಚಿಬಿದ್ದಿರುವ ಬ್ರಿಟನ್ ಈಗ ತನ್ನ ನಿಯಮಗಳನ್ನ ಹಿಂಪಡೆದಿದೆ.
ಇದೀಗ ಬ್ರಟಿನ್ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿಕೊಂಡಿದೆ. ಭಾರತದಿಂದ ಬ್ರಿಟನ್‍ಗೆ ಹೋಗುವ ಆಗಮಿಸುವ ನಾಗರಿಕರು ಕೋವಿಶೀಲ್ಡ್ ಅಥವಾ ಯುಕೆ ಅನುಮೋದಿತ ಲಸಿಕೆ ಪಡೆದುಕೊಂಡಿದ್ದರೆ ಅಕ್ಟೋಬರ್ 11ರಿಂದ ಅವರನ್ನು ನಿರ್ಬಂಧಿಸಲಾಗುವುದಿಲ್ಲ , ಕ್ವಾರಂಟೈನ್ ಗೆ ಒಳಗಾಗುವ ಅಗತ್ಯವಿಲ್ಲ ಎಂದು ಬ್ರಿಟಿಷ್ ಹೈ ಕಮೀಷನರ್ ಅಲೆಕ್ಸ್ ಎಲ್ಲಿಸ್ ತಿಳಿಸಿದ್ದಾರೆ.
ಈ ಕುರಿತಂತೆ ಬ್ರಿಟಿಷ್ ಹೈ ಕಮೀಷನರ್ ಅಲೆಕ್ಸ್ ಎಲ್ಲಿಸ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದು, ಕೋವಿಶೀಲ್ಡ್ ಅಥವಾ ಯುಕೆ ಅನುಮೋದಿತ ಸಂಪೂರ್ಣ ಲಸಿಕೆ ಪಡೆದ ಭಾರತೀಯ ಪ್ರಯಾಣಿಕರಿಗೆ ಅಕ್ಟೋಬರ್ 11ರಿಂದ ನಿರ್ಬಂಧಿಸಲಾಗುವುದಿಲ್ಲ. ಕಳೆದ ತಿಂಗಳು ನಿಕಟ ಸಹಕಾರಕ್ಕಾಗಿ ಭಾರತೀಯ ಸರ್ಕಾರಕ್ಕೆ ಧನ್ಯವಾಗಳು ಎಂದು ಟ್ವೀಟ್ ಮಾಡಿದ್ದಾರೆ. ಅಕ್ಟೋಬರ್ 11ಕ್ಕಿಂತ ಮುನ್ನ ಯುಕೆಗೆ ಆಗಮಿಸುವ ಸಂಪೂರ್ಣ ಲಸಿಕೆ ಹಾಕಿಸಿಕೊಳ್ಳದ ಪ್ರಯಾಣಿಕರು ಪ್ರಸ್ತುತ ಈಗಿರುವ ನಿಯಮವನ್ನು ಪಾಲಿಸಬೇಕಾಗುತ್ತದೆ.
No quarantine for Indian 🇮🇳 travellers to UK 🇬🇧 fully vaccinated with Covishield or another UK-approved vaccine from 11 October.
Thanks to Indian government for close cooperation over last month. pic.twitter.com/cbI8Gqp0Qt
— Alex Ellis (@AlexWEllis) October 7, 2021
ಭಾರತೀಯ ವಾಯುಪಡೆ ಸ್ಥಾಪನೆಯಾಗಿ ಇಂದಿಗೆ 89 ವರ್ಷ – ವಾಯುನೆಲೆಯಲ್ಲಿ ಸಂಭ್ರಮಾಚರಣೆ