ನಾನು ಆರ್‍ಎಸ್‍ಎಸ್ ಬಗ್ಗೆ ಹೊಗಳಿದ್ದೇನೆ ಎನ್ನುವುದು ಸುಳ್ಳು : ಹೆಚ್ ಡಿಡಿ
ಬೆಂಗಳೂರು : ಸುಳ್ಳು ಹೇಳೋದಕ್ಕೂ ಒಂದು ಇತಿಮಿತಿ ಇರಬೇಕು. ನಾನು ಆರ್ ಎಸ್ ಎಸ್ ಬಗ್ಗೆ ಹೊಗಳಿದ್ದೇನೆ ಎನ್ನುವುದು ಸುಳ್ಳು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಆರ್ ಎಸ್ ಎಸ್ ಬಗ್ಗೆ ಜೆಡಿಎಸ್ – ಬಿಜೆಪಿ ನಾಯಕರ ನಡುವೆ ಭಾರಿ ಜಟಾಪಟಿ ನಡೆಯುತ್ತಿದೆ.
ಈ ಮಧ್ಯೆ ಹೆಚ್ ಡಿ ದೇವೇಗೌಡರು ಆರ್ ಎಸ್ ಎಸ್ ಅನ್ನು ಹೊಗಳಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಈ ಬಗ್ಗೆ ಇದೀಗ ಹೆಚ್ ಡಿ ದೇವೇಗೌಡರೇ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳು ಹೇಳೋದಕ್ಕೂ ಇತಿಮಿತಿ ಇರಬೇಕು.
ನಾನು ಆರ್‍ಎಸ್‍ಎಸ್ ಬಗ್ಗೆ ಹೊಗಳಿದ್ದೇನೆ ಎನ್ನುವುದು ಸುಳ್ಳು. ಅಡ್ವಾಣಿ ಬಂದಾಗ ನಾವು ಸಮಾಲೋಚನೆ ಮಾಡಿದ್ದೆವು.
ಎಮರ್ಜೆನ್ಸಿ ಸಮಯದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಮಾತನಾಡಿದ್ದೆವು. ಬಾಂಕ್ವೆಟ್ ಹಾಲ್ ನಲ್ಲಿ ಒಂದು ಕಾರ್ಯಕ್ರಮ ನಡೆದಿತ್ತು.
ನಾನೇ ಬಾಂಕ್ವಟ್ ಹಾಲ್ ಅನುಮತಿ ನೀಡಿದ್ದೆ. ನನ್ನ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮ ನಡೆದಿತ್ತು.
ನಾನು ಆ ಸಭೆಯಲ್ಲೇ ಹೇಳಿದ್ದೆ, ಸಭೆಯನ್ನು ದುರುಪಯೋಗ ಮಾಡುವುದು ಸರಿಯಲ್ಲ ಎಂದಿದ್ದೆ.
ಅದು ಬಿಟ್ಟು ಆರ್.ಎಸ್.ಎಸ್. ಹೊಗಳಿದೆ ಅಂತ ಕುಮಾರಸ್ವಾಮಿ ಅವರು ಹೇಳಿದ ಮಾತಿಗೆ ಜೋಡಿಸೋದು ಸರಿಯಲ್ಲ ಎಂದು ಹೇಳಿದರು.









