ಸ್ವಾತಂತ್ರ‍್ಯ ಬಂದಾಗಿನಿಂದಲೂ ಬೆಲೆ ಏರಿಕೆ ಆಗಿಲ್ವಾ.. : ಕೆ.ಎಸ್.ಈಶ್ವರಪ್ಪ
ಗದಗ : ಬೆಲೆ ಹೆಚ್ಚಾಯಿತು ಅಂತ ಕಾಂಗ್ರೆಸ್ ನವರು ಅಬ್ಬರಿಸಿ ಬೊಬ್ಬರಿಯುತ್ತಾರಲ್ಲಾ, ಸ್ವಾತಂತ್ರ‍್ಯ ಬಂದಾಗಿನಿಂದಲೂ ಪೆಟ್ರೋಲ್, ಡಿಸೇಲ್, ಗ್ಯಾಸ್ ಈ ವಸ್ತುಗಳ ಬೆಲೆ ಜಾಸ್ತಿ ಆಗಿಲ್ವಾ..? ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಯಾವುದೋ ಪೆಟ್ರೋಲ್, ಡೀಸೆಲ್ ವಿಚಾರ ಹಿಡ್ಕೊಂಡು ಅಲ್ಲಾಡುತ್ತಿದ್ದಾರೆ. ಇನ್ನೊಂದ್ ನಾಲ್ಕು ದಿನ ಅಲ್ಲಾಡ್ಲಿ. ಮುಂದಿನ ದಿನದಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಆಗುತ್ತೆ ಎಂದು ತಿಳಿಸಿದರು.
ಇನ್ನು ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಹೆಚ್ಚಾಯಿತು ಅಂತ ಕಾಂಗ್ರೆಸ್ ನವರು ಅಬ್ಬರಿಸಿ ಬೊಬ್ಬರಿಯುತ್ತಾರಲ್ಲಾ, ಸ್ವಾತಂತ್ರ‍್ಯ ಬಂದಾಗಿನಿಂದಲೂ ಪೆಟ್ರೋಲ್, ಡಿಸೇಲ್, ಗ್ಯಾಸ್ ಈ ವಸ್ತುಗಳ ಬೆಲೆ ಜಾಸ್ತಿ ಆಗಿಲ್ವಾ..?
ಕಾಂಗ್ರೆಸ್ ಜಾಸ್ತಿ ಮಾಡಿಲ್ವಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಜಾಸ್ತಿ, ಕಮ್ಮಿ ಆಗೋದು ಪ್ರಕ್ರಿಯೆ ಕಂಟ್ರೋಲ್ ಮಾಡೋದಕ್ಕೆ ಪ್ರಯತ್ನ ಮಾಡ್ತೀವಿ.
ಬೆಲೆ ಏರಿಕೆ ವಿಚಾರ ಒಪ್ಪಿಕೊಳ್ಳುತ್ತೇನೆ. ಬೇರೆ ಏನು ಒಳ್ಳೆದು ಆಗಿಲ್ವಾ? ಯಾವ್ದು ಒಳ್ಳೆಯದಿದೆ ಅದರ ಸುದ್ದಿ ಕಾಂಗ್ರೆಸ್ ಎತ್ತಲ್ಲ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.









