ಕಳ್ಳರಿಗೆ ಹೆದರಲ್ಲ.. ನನ್ನ ಫ್ಯಾನ್ಸ್ ನಿಂದಲೇ ನಾನು ಇಲ್ಲಿದ್ದೀನಿ : ಕಿಚ್ಚ
ಬೆಂಗಳೂರು : ನಾನು ಪೈರಸಿಗೆ ಹೆದರಲ್ಲ.. ಕಳ್ಳರಿಗೆ ಭಯಪಡಲ್ಲ. ನನ್ನ ಅಭಿಮಾನಿಗಳಿಂದಲೇ ನಾನು ಇಲ್ಲಿ ಇರೋದು ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ.
ಚಂದನವನದ ಬಹು ನಿರೀಕ್ಷಿತ ಕೋಟಿಗೊಬ್ಬ 3 ಸಿನಿಮಾ ಇದೇ ಅಕ್ಟೋಬರ್ 14 ರಂದು ರಿಲೀಸ್ ಆಗುತ್ತಿದೆ.
ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಕುರಿತಂತೆ ಹಲವು ವಿಚಾರಗಳನ್ನು ಸುದೀಪ್ ಹಂಚಿಕೊಂಡಿದ್ದಾರೆ.
ಕೋಟಿಗೊಬ್ಬ-3 ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಅಕ್ಟೋಬರ್ 14 ರಂದು ಎರಡು ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಖುಷಿಯಾಗುತ್ತಿದೆ.
ಸಿನಿಮಾ ಖಂಡಿತವಾಗಿಯೂ ಪ್ರೇಕ್ಷಕರಿಗೆ ಖುಷಿ ನೀಡುತ್ತದೆ. ಹುಚ್ಚ ಸಿನಿಮಾದಿಂದ ಶುರು ಮಾಡಿದರೆ, ಆ ಕಥೆ ಹೇಗೆ ಹೇಳಬೇಕೊ ಹಾಗೇ ಹೇಳಿದ್ದೇವೆ. ಹಾಗೇ ಈ ಕಥೆ ಹೇಗೆ ಹೇಳಬೇಕೊ ಹಾಗೆ ಹೇಳಿದ್ದೇವೆ ಎಂದಿದ್ದಾರೆ.
ಇದೇ ವೇಳೆ ಕೊರೊನಾ ಸಂಕಷ್ಟದ ಬಗ್ಗೆ ಮಾತನಾಡಿ, ಕೊರೊನಾ ಸಮಯದಲ್ಲಿ ತುಂಬಾ ಎಫೆಕ್ಟ್ ಆಗಿದೆ. ಎಷ್ಟು ಜನ ಕೆಲಸ ಹೋಗಿದೆ. ಹಾಗಂತ ಕೆಲಸ ಮಾಡದು ನಿಲ್ಲಸಲ್ಲ ಎಂದರು.
ಇನ್ನು ನಾನು ಪೈರಸಿಗೆ ಹೆದರಲ್ಲ. ಕಳ್ಳರಿಗೆ ಭಯ ಪಡಲ್ಲ. ನನ್ನ ಫ್ಯಾನ್ಸ್ ನಿಂದಲೇ ನಾನು ಇಲ್ಲಿ ಇರೋದು ಎಂದು ಪೈರಸಿ ಬೆದರಿಕೆಗೆ ಕಿಚ್ಚ ಖಡಕ್ ಉತ್ತರ ನೀಡಿದ್ದಾರೆ.