ಟಿ-೨೦ ವಿಶ್ವಕಪ್ -ಟೀಮ್ ಇಂಡಿಯಾದ ಪ್ರಮುಖ ಪಿಲ್ಲರ್ ಕೆ.ಎಲ್. ರಾಹುಲ್..!
೨೦೨೧ರ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಫೆವರಿಟ್ ತಂಡ. ಕೆ.ಎಲ್. ರಾಹುಲ್ ಟೀಮ್ ಇಂಡಿಯಾದ ಪ್ರಮುಖ ಪಿಲ್ಲರ್ ಎಂದು ಆಸ್ಟೆçÃಲಿಯಾದ ಮಾಜಿ ವೇಗಿ ಬ್ರೇಟ್ ಲೀ ಅಭಿಪ್ರಾಯಪಟ್ಟಿದ್ದಾರೆ.
ಕೆ.ಎಲ್. ರಾಹುಲ್ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಉತ್ತಮ ಲಯದಲ್ಲಿರುವ ರಾಹುಲ್ ರನ್ ಮಳೆ ಸುರಿಸಿದ್ರೆ, ವಿರಾಟ್ ಕೊಹ್ಲಿ ಯಾವುದೇ ಒತ್ತಡವಿಲ್ಲದೆ ಬ್ಯಾಟಿಂಗ್ ನಡೆಸಲು ಸಾಧ್ಯವಾಗುತ್ತದೆ. ಕೆ.ಎಲ್. ರಾಹುಲ್ ಮುಂದಿನ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ತಂಡದ ಪ್ರಮುಖ ಪಿಲ್ಲರ್ ಆಗಲಿದ್ದಾರೆ ಎಂದು ಬ್ರೇಟ್ ಲೀ ಭವಿಷ್ಯ ನುಡಿದಿದ್ದಾರೆ.

ಟೀಮ್ ಇಂಡಿಯಾ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಪ್ರಾಬಲ್ಯ ಸಾಧಿಸುತ್ತಿದೆ. ಇದಕ್ಕೆ ಕಾರಣ ಐಪಿಎಲ್. ಐಪಿಎಲ್ ನಲ್ಲಿ ಯುವ ಆಟಗಾರರು ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತಿದ್ದಾರೆ. ಸೂರ್ಯ ಕುಮಾರ್ ಯಾದವ್ ಕೂಡ ಶ್ರೇಷ್ಠ ಪ್ರದರ್ಶನ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ನನ್ನ ಮನ ಹೇಳುತ್ತಿದೆ ಆಸ್ಟೆçÃಲಿಯಾ ಗೆಲ್ಲಬೇಕು ಎಂದು. ಯಾಕಂದ್ರೆ ಆಸ್ಟೆçÃಲಿಯಾ ನನ್ನ ದೇಶ. ನನ್ನ ದೇಶದ ಮೇಲೆ ನನಗೆ ಗೌರವ ಇದೆ. ಆದ್ರೆ ಟೀಮ್ ಇಂಡಿಯಾ ಖಂಡಿತವಾಗಿಯೂ ಫೈನಲ್ ಗೆ ಬರುತ್ತದೆ. ಅದೇ ರೀತಿ ಆಸ್ಟೆçÃಲಿಯಾಗೆ ಕೂಡ ಗೆಲ್ಲುವ ಅವಕಾಶಗಳಿವೆ. ಹಾಗೇ ಇಂಗ್ಲೆAಡ್ ತಂಡ ಅನುಭವಿ ಆಟಗಾರರನ್ನು ಹೊಂದಿದೆ. ಆದ್ರೆ ಟೀಮ್ ಇಂಡಿಯಾ ಯುವ ಆಟಗಾರರ ತಂಡವಾಗಿದೆ ಎಂದು ಬ್ರೇಟ್ ಲೀ ಹೇಳಿದ್ದಾರೆ.
೨೦೨೧ರ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಅಕ್ಟೋಬರ್ ೨೪ರಿಂದ ಅಭಿಯಾನವನ್ನು ಶುರು ಮಾಡಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.








