ಟೀಮ್ ಇಂಡಿಯಾದ ಮುಂದಿನ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದಾರೆ. dravid saaksha tv
ದುಬೈ ನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಅವರು ರಾಹುಲ್ ದ್ರಾವಿಡ್ ಅವರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ.
ಈ ಹಿಂದೆ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೆಡ್ ಕೋಚ್ ಸ್ಥಾನದಿಂದ ದೂರವೇ ಉಳಿದುಕೊಂಡಿದ್ದರು.
ಭಾರತ ಎ, ೧೯ ವಯೋಮಿತಿ ತಂಡಗಳಿಗೆ ಕೋಚ್ ಆಗಿದ್ದ ರಾಹುaಲ್ ದ್ರಾವಿಡ್ ಸದ್ಯ ರಾಷ್ಡ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದೀಗ ಹೆಡ್ ಕೋಚ್ ಸ್ಥಾನಕ್ಕೇರುವುದರಿಂದ ರಾಹುಲ್ ದ್ರಾವಿಡ್ ಎನ್ ಸಿಎ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕಿದೆ.
ರಾಹುಲ್ ದ್ರಾವಿಡ್ ಭಾರತ ಎ ಮತ್ತು ಭಾರತ ೧೯ ವಯೋಮಿತಿ ತಂಡದ ಕೋಚ್ ಆಗಿದ್ದಾಗ ಅನೇಕ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನವನ್ನು ನೀಡಿದ್ದರು.
ಹೀಗಾಗಿ ಟೀಮ್ ಇಂಡಿಯಾದ ಬೆಂಚ್ ಸ್ಟ್ರೇಂತ್ ಕೂಡ ಗಟ್ಟಿಯಾಗಿತ್ತು. ಸಾಲು ಸಾಲು ಯುವ ಕ್ರಿಕೆಟಿಗರು ಟೀಮ್ ಇಂಡಿಯಾದ ಗರ್ಭಗುಡಿ ಕೂಡ ಪ್ರವೇಶಿಸಿದ್ದರು.
ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಶುಬ್ಮನ್ ಗಿಲ್, ಪೃಥ್ವಿ ಶಾ, ಆವೇಶ್ ಕಾನ್, ಪ್ರಿಯಮ್ ಗರ್ಗ್ ಹನುಮ ವಿಹಾರಿ, ಸಂಜು ಸಾಮ್ಸನ್ ಸೇರಿದಂತೆ ಅನೇಕ ಯುವ ಆಟಗಾರರು ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ್ದವರು.
ಮಂದಿನ ವಿಶ್ವಕಪ್ ನಂತರ ಟೀಮ್ ಇಂಡಿಯಾದ ಹೆಡ್ ಕೋಚ್ ಸ್ಥಾನವನ್ನು ಅಲಂಕರಿಸಲಿರುವ ದ್ರಾವಿಡ್ ಗೆ ನ್ಯೂಜಿಲೆಂಡ್ ಸರಣಿ ಮೊದಲ ಪರೀಕ್ಷೆಯಾಗಲಿದೆ.
ಟೀಮ್ ಇಂಡಿಯಾದ ಮಹಾ ಗೋಡೆಯಾಗಿದ್ದ ರಾಹುಲ್ ದ್ರಾವಿಡ್ ಈಗ ಟೀಮ್ ಇಂಡಿಯಾಗೆ ಫೌಂಡೇಶನ್ ಹಾಕುವ ಕಾಯಕ ಮಾಡುತ್ತಿದ್ದಾರೆ.







