ಟಿ-20 ವಿಶ್ವಕಪ್ | ಟಾಸ್ ಗೆದ್ದ ಓಮನ್ ಬೌಲಿಂಗ್ ಆಯ್ಕೆ T20 World Cup saaksha tv
ಬಹುನಿರೀಕ್ಷಿತ 2021 ರ ಟಿ 20 ವಿಶ್ವಕಪ್ಗಾಗಿ ವೇದಿಕೆ ಸಜ್ಜಾಗಿದೆ. ಟೂರ್ನಿಯ ಮೊದಲ ಅರ್ಹತಾ ಪಂದ್ಯದಲ್ಲಿ ಓಮನ್ ವಿರುದ್ಧ ಪಪುವಾ ನ್ಯೂಗಿನಿಯಾ ತಂಡ ಕಣಕ್ಕಿಳಿದಿವೆ.
ಸದ್ಯ ಟಾಸ್ ಗೆದ್ದಿರುವ ಓಮನ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಈ ಪಂದ್ಯದ ಬಳಿಕ ಇಂದು ಸಂಜೆ ಎರಡನೇ ಪಂದ್ಯ ನಡೆಯಲಿದೆ. ಈ ಮ್ಯಾಚ್ ನಲ್ಲಿ ಬಾಂಗ್ಲಾದೇಶ ತಂಡ ಸ್ಕಾಟ್ಲೆಂಡ್ ವಿರುದ್ಧ ಸೆಣಸಲಿದೆ.
ಆದರೆ, ಪ್ರಮುಖ ಬಲಿಷ್ಠ ತಂಡಗಳ ಪಂದ್ಯಗಳು ಆರಂಭವಾಗಲು ಇನ್ನೂ ನಾಲ್ಕೈದು ದಿನ ಕಾಯಲೇಬೇಕು.
ಇನ್ನು ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, 4 ಗ್ರೂಪ್ ಗಳನ್ನು ವಿಂಗಡಿಸಲಾಗಿದೆ.
ಗ್ರೂಪ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.









