ಚಿತ್ರರಸಿಕರ ಮನಸೂರೆಗೊಳ್ಳುತ್ತಿದೆ….ಸರ್ಧಾರ್ ಉದ್ಧಮ್.
ಜಲಿಯನ್ ವಾಲಾಬಾಗ್…. ಭಾರತೀಯರನ್ನ ಬೆಚ್ಚಿಬೀಳಿಸುವಂತ ಹೆಸರು. ಅಂದು 1919 ಏಪ್ರಿಲ್ 13 ಅಮೃತಸರದ ಜಲಿಯನ್ ವಾಲಾಬಾಗ್ ಎನ್ನುವ ಆರೂವರೆ ಎಕರೆ ಪ್ರದೇಶದ ಉದ್ಯಾನವನ…….
ಅಂದು ಸಾವಿರಾರು ಜನ ಭಾರತೀಯರು ಆ ಸ್ಥಳದಲ್ಲಿ ಸೇರಿ ಶಾಂತಿಯುತವಾಗಿ ಸಭೆ ನಡೆಸುತ್ತಿದ್ದರು….ಆದರೆ ಅಷ್ಟೊಂದು ಜನ ಸೇರಿದ್ದೇ ಅಂದಿನ ಬ್ರಿಟೀಷ ಜನರಲ್ ಡಯರ್ ನ ಕಣ್ಣು ಕೆಂಪಗಾಗಿಸಿತ್ತು..
ಡಯರ್ ಮತ್ತವನ ಸೈನಿಕರು….. ಮಹಿಳೆ ಮಕ್ಕಳು ಎನ್ನುವುದನ್ನೂ ನೋಡದೆ…ಇದ್ದಕ್ಕಿದ್ದಂತೆ ಗುಂಡಿನ ಸುರಿಮಳೆಗೈಯುತ್ತಾರೆ…. ಆ ಘಟನೆಯಲ್ಲಿ ಸಾವಿರಾರು ಜನ ತಮ್ಮ ಪ್ರಾಣವನ್ನ ಬಲಿಕೊಡುತ್ತಾರೆ.
ಈ ಘಟನೆ ಜಲಿಯನ್ ವಾಲಬಾಗ್ ಹತ್ಯಾಕಾಂಡವೆಂದೆ ಭಾರತೀಯರ ಮನದಲ್ಲಿ ಅಚ್ಚೊತ್ತಿದೆ. ಈ ಘಟನೆ ಇನ್ನಷ್ಟು ಬಿಸಿ ರಕ್ತದ ಯುವಕರು ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಲು ಕಾರಣವಾಯಿತು..ಅವರಲ್ಲಿ ಒಬ್ಬ “ಸರ್ಧಾರ್ ಉದ್ದಮ್ ಸಿಂಗ್”.
ಈತನ ಜೀವನ ಚರಿತ್ರೆ ಈಗ ಚಲನಚಿತ್ರವಾಗಿ ರೂಪಗೊಂಡಿದೆ. ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡಿದ್ದು….ಚಿತ್ರದ ಕುರಿತು ಸಾಕಷ್ಟು ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ.
ಉಧ್ಧಾಮ್ ಸಿಂಗ್ ಹತ್ಯಾಕಾಂಡಕ್ಕೆ ಕಾರಣರಾದ ಜನರಲ್ ಡಯರ್ ನ ಬ್ರಿಟೀಷರ ನೆಲದ ಮೇಲೆ ಹೇಗೆ ಪ್ರತಿಕಾರ ತೆಗೆದುಕೊಳ್ಳುತ್ತಾನೆ….ಪ್ರತಿಕಾರದ ನಂತರ ಆತನ ಕಥೆ ಏನೂ ಎನ್ನುವುದನ್ನ ಸಿನಿಮಾ ನೋಡಿಯೇ ಆನಂದಿಸಬೇಕು.
ಸರ್ಧಾರ್ ಉಧ್ಧಮ್ ಪ್ರಾತ್ರದಲ್ಲಿ ವಿಕ್ಕಿ ಕೌಶಾಲ್ ಅಧ್ಬುತವಾಗಿ ನಟಿಸಿದ್ದಾರೆ… ಶೂಜಿತ್ ಸರ್ಕಾರ್ ಅಕ್ಷನ್ ಕಟ್ ಹೇಳಿದ್ದು..ರೊನ್ನಿ ಲಹರಿ ಶೀಲ್ ಕುಮಾರ್ ಬಂಡವಾಳ ಹೂಡಿದ್ದಾರೆ. IMDb ವೆಬ್ಸೈಟ್ ನಲ್ಲಿ ೯.೨ ರೇಟಿಂಗ್ ನೊಂದಿಗೆ ಭರ್ಜರಿಯಾಗಿ ಮುನ್ನುಗ್ಗುತ್ತಿದೆ.