ಸ್ಯಾಂಡಲ್ ವುಡ್ ನಲ್ಲಿ ಕ್ರಾಂತಿ ಮಾಡಲಿದ್ದಾರೆ ಡಿ ಬಾಸ್ ದರ್ಶನ್
ಎರಡು ವರ್ಷಗಳ ನಂತರ ದಾಸ ದರ್ಶನ್ ಕೆಲಸ ಶುರು ಮಾಡಿದ್ದಾರೆ.
ಕೋವಿಡ್, ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ದರ್ಶನ್ ಕ್ರಾಂತಿ ಸಿನಿಮಾ ಮೂಲಕ ತನ್ನ ಕಾಯಕವನ್ನು ಆರಂಭಿಸಿದ್ದಾರೆ.
ಈ ಕುರಿತು ದರ್ಶನ್ ತನ್ನ ಯೂ ಟ್ಯೂಬ್ ಚಾನೆಲ್ ನಲ್ಲಿ ತನ್ನ ದಿನಚರಿ ಹೇಗಿರುತ್ತೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದ ದರ್ಶನ್ ಜಿಮ್ ನಲ್ಲಿ ಕಸರತ್ತು ನಡೆಸಿರಲಿಲ್ಲ. ಹೀಗಾಗಿ ಸ್ವಲ್ಪ ದಪ್ಪಗಾಗಿದ್ದರು. ಇದೀಗ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದಾರೆ.
ಜಿಮ್ ಟ್ರೈನರ್ ಹೇಮಂತ್ ಮಾರ್ಗದರ್ಶನದಲ್ಲಿ ಬೆಳಗ್ಗೆ 5 ಗಂಟೆಯಿಂದ ಜಿಮ್ ನಲ್ಲಿ ದೇಹವನ್ನು ದಂಡಿಸುತ್ತಾರೆ. ಈ ಕುರಿತು ದರ್ಶನ್ ಅವರು ಯಾವ ರೀತಿ ವರ್ಕ್ ಔಟ್ ಮಾಡುತ್ತೇನೆ ಎಂಬುದನ್ನು ಸಹ ಹೇಳಿಕೊಂಡಿದ್ದಾರೆ.
ಎ ಡೇ ವಿತ್ ದರ್ಶನ್ ಎಂಬ ಹೆಸರಿನ ವಿಡಿಯೋ ಯೂ ಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಜಿಮ್ ನಲ್ಲಿ ಕಸರತ್ತು ನಡೆಸಿದ ನಂತರ ಅರ್ಧ ಗಂಟೆ ಪ್ರೆಶ್ ಆಫ್ ಆಗಿ ದೇವರ ದರ್ಶನ ಪಡೆದು ಕ್ರಾಂತಿ ಸಿನಿಮಾ ಶೂಟಿಂಗ್ ಗೆ ತೆರಳುತ್ತಾರೆ. ಹಾಗೇ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳುತ್ತಾರೆ. ದೇವರನ್ನು ನಂಬುತ್ತೇನೆ. ಆದ್ರೆ ಮೂಢ ನಂಬಿಕೆ ಇಲ್ಲ ಎಂದು ಹೇಳ್ತಾರೆ.
ಬಳಿಕ ಕ್ರಾಂತಿ ಸಿನಿಮಾದ ಬಗ್ಗೆ ಮಾತನಾಡುತ್ತಾರೆ. ಶೈಲಜಾ ನಾಗ್ ಹಾಗೂ ನಿರ್ದೇಶಕ ವಿ. ಹರಿಕೃಷ್ಣ ಅವರೊಂದಿಗೆ ಮಾತನಾಡುತ್ತಾರೆ. ಕ್ರಾಂತಿ ಸಿನಿಮಾದ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡೋಣ ಅಂತ ಹೇಳಿಕೊಂಡು ಟಿಫಿನ್ ಗೆ ರೆಡಿಯಾಗುತ್ತಾರೆ. ಹಾಗೇ ದರ್ಶನ್ ಗೆ ಟಿಫಿನ್ ಜೊತೆ ವಡೆ ಮಾತ್ರ ಇರಲೇಬೇಕಂತೆ.
ಇನ್ನೊಂದೆಡೆ ಕ್ರಾಂತಿ ಚಿತ್ರದ ನಾಯಕಿ ರಚಿತಾ ರಾಮ್ ಮತ್ತು ಅಭಿಷೇಕ್ ಅಂಬರೀಷ್ ಜೊತೆ ಕೂಡ ಮಾತನಾಡುತ್ತಿರುವ ದರ್ಶನ್ ಈ ವಿಡಿಯೋ ಯು ಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇಡೀ ಕ್ರಾಂತಿ ಚಿತ್ರದ ತಂಡವನ್ನು ದರ್ಶನ್ ಅವರು ಪರಿಚಯ ಮಾಡುವ ವಿಡಿಯೋ ಇದಾಗಿದೆ.