ಐಪಿಎಲ್ ತಂಡ ಖರೀದಿಗೆ ರಣವೀರ್ – ದೀಪಿಕಾ ದಂಪತಿ ಪ್ಲಾನ್..!
ಬಾಲಿವುಡ್ ನ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ದಂಪತಿ ಒಂದ್ ಕಡೆ ಜಾಹೀರಾತು , ಸಿನಿಮಾಗಳು ಅಂತ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಬೇರೆ ಉದ್ಯೋಗಕ್ಕೂ ಕೈ ಹಾಕುವ ಮೂಲಕ ಮತ್ತಷ್ಟು ದುಡ್ಡು ಸಂಪಾದನೆ ಮಾಡುವ ಪ್ಲಾನ್ ಮಾಡಿಕೊಳ್ತಿದ್ದಾರೆ. ಹೌದು ರಣವೀರ್, ದೀಪಿಕಾ ಜೋಡಿ ಹೊಸ ಐಪಿಎಲ್ ತಂಡ ಖರೀದಿಸಲು ಮುಂದಾಗಿದ್ದಾರೆ. 2022ರ ಐಪಿಎಲ್‍ಗೆ 2 ಹೊಸ ಫ್ರಾಂಚೈಸಿಗಳು ಸೇರ್ಪಡೆಗೊಳ್ಳಲಿದ್ದು, ರಣವೀರ್ ಐಪಿಎಲ್ ತಂಡ ಖರೀದಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ನ ಆಲ್ಬನ್ ಸಾಂಗ್ ಗೆ ಹೆಜ್ಜೆ ಹಾಕಿದ “ತುಪ್ಪದ ಬೆಡಗಿ”..!
ಅಂದ್ಹಾಗೆ ಈಗಾಗಲೇ ಪ್ರೀತಿ ಜಿಂಟಾ ಅವರ ಒಡೆತನದ ಕಿಂಗ್ಸ್ 11 ಪಂಜಾಬ್, ಶಾರುಖ್ ಖಾನ್ – ಜೂಹಿ ಚಾವ್ಲಾ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಿವೆ. ಇದೀಗ ರಣವೀರ್ – ದೀಪಿಕಾ ಇದೇ ಹಾದಿಯಲ್ಲಿ ಸಾಗುವ ಪ್ಲಾನ್ ನಲ್ಲಿದ್ದಾರೆ. ಇನ್ನೂ ಈ ಬಾರಿಯ ಬಿಡ್ಡಿಂಗ್ ನಲ್ಲಿ ಅದಾನಿ ಗ್ರೂಪ್, ಆರ್‌ಪಿಜಿ ಸಂಜೀವ್ ಗೋಯೆಂಕಾ ಗ್ರೂಪ್ ಸೇರಿದಂತೆ ವಿದೇಶಿ ಕಾರ್ಪೋರೇಟ್ ಕಂಪೆನಿಗಳು ಬಿಡ್ ಸಲ್ಲಿಸಲು ತುದಿಗಾಲಿನಲ್ಲಿ ನಿಂತಿವೆ.