ಬಾಲಿವುಡ್ ನ ಆಲ್ಬನ್ ಸಾಂಗ್ ಗೆ ಹೆಜ್ಜೆ ಹಾಕಿದ “ತುಪ್ಪದ ಬೆಡಗಿ”..!
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಲಿಂಕ್ ಕೇಸ್ ನಲ್ಲಿ ಸಿಲುಕಿ 3 ತಿಂಗಳು ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆದಿದ್ದ ತುಪ್ಪದ ಬೆಡಗಿ @raginidwivedi ಸದ್ಯ ಕೆಲ ಕಾಲದಿಂದ ಬಣ್ಣದ ಲೋಕದಿಂದ ದೂರವೇ ಉಳಿದಿದ್ದಾರೆ. ಆಗೊಮ್ಮೆ ಈಗೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಚರರ್ಚೆಯಾಗ್ತಾ ಇರುತ್ತಾರೆ. ಮತ್ತೊಂದೆಡೆ ಕೆಲ ಪ್ರಾಜೆಕ್ಟ್ ಗಳಲ್ಲಿ ರಾಗಿಣಿ ದ್ವಿವೇದಿ ಕೆಲಸಕ್ಕೆ ಮುಂದಾಗ್ತಿದ್ದು, ಈ ನಡುವೆ ಬಾಲಿವುಡ್ ನ ಆಲ್ಬಂ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಬಾಲಿವುಡ್ ನತ್ತ ಮುಖಮಾಡಿದ್ದಾರೆ.
ಹೌದು ಈಗಾಗಲೇ ಆಲ್ಬಂ ಹಾಡಿನ ಚಿತ್ರೀಕರಣ ಮುಗಿದಿದೆ. ರಾಗಿಣಿ ಆಲ್ಬಂ ಹಾಡಿನ ಫೋಟೊಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಾಡಿನಲ್ಲಿ ರಾಗಿಣಿಗೆ ಬಾಲಿವುಡ್ ನ ಅರ್ಜುನ್ ಶರ್ಮಾ ಸಾಥ್ ನೀಡಿದ್ದಾರೆ. ವಿಷ್ಣು ಪ್ರಭು ಈ ಹಾಡನ್ನ ಕೊರಿಯೋಗ್ರಾಫ್ ಮಾಡಿದ್ದಾರೆ. ಮುಂಬೈನ ಸುತ್ತಮುತ್ತ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಈ ಹಾಡಿನಲ್ಲಿ ರಾಗಿಣಿ ದ್ವಿವೇದಿ ಮಾಡ್ರನ್ ಲುಕ್ ನಲ್ಲಿ ಮಿಂಚಿದ್ದಾರೆ. ಅಲ್ಲದೇ ಕನ್ನಡದಲ್ಲೂ ರಾಗಿಣಿ ಸ್ವಲ್ಪ ಬ್ಯುಸಿಯಿದ್ದಾರೆ. ನಟ ಶ್ರೇಯಶ್ ಕೆ. ಮಂಜು ಅಭಿನಯದ ರಾಣಾ ಸಿನಿಮಾದಲ್ಲಿ ಸ್ಪೆಷಲ್ ಹಾಡಿಗೆ ರಾಗಿಣಿ ಹೆಜ್ಜೆ ಹಾಕ್ತಿದ್ದಾರೆ.