ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ : ಇಲ್ಲಿನವರೆಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ…
ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಪುತ್ರ ಆರ್ಯನ್ ಖಾನ್ ಡ್ರಗ್ ಲಿಂಕ್ ಕೇಸ್ ನಲ್ಲಿ ಬಂಧನಕ್ಕೆ ಒಳಗಾಗಿದ್ದು ಈವರೆಗೂ ಜೈಲಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಅಲ್ಲದೇ ಆರ್ಯನ್ ಖಾನ್ ಜಾಮೀನು ಅರ್ಜಿ ಸತತವಾಗಿ ತಿರಸ್ಕಾರವಾಗುತ್ತಲೇ ಇದೆ. ಅಕ್ಟೋಬರ್ 20 ರಂದು ಮತ್ತೆ ಮುಂಬೈನ ವಿಶೇಷ ನ್ಯಾಯಾಲಯವು ಆರ್ಯನ್ ಖಾನ್ ಜಾಮೀನು ಅರ್ಜಿ ವಜಾಗೊಳಿಸಿದೆ.
ಹೀಗಾಗಿ ಆರ್ಯನ್ ಈವರೆಗೂ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಅಕ್ಟೋಬರ್ 3ರಂದು ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರ ನೆರವಿನೊಂದಿಗೆ, ಎನ್‌ಸಿಬಿಯ ಮುಂಬೈ ಘಟಕವು ನಗರ ಕರಾವಳಿಯಲ್ಲಿ ಒಂದು ಐಶಾರಾಮಿ ಕ್ರೂಸ್ ಹಡಗಿನಲ್ಲಿ ಪಾರ್ಟಿ ನಡೆಸುತ್ತಿದ್ದ ವೇಳೆ ದಾಳಿ ಮಾಡಿತು. ಈ ವೇಳೆ ಆರ್ಯನ್ ಖಾನ್ ಮತ್ತು ಇತರ ಅನೇಕರನ್ನು ಈ ವೇಳೆ ಬಂಧಿಸಲಾಗಿತ್ತು. ಅಲ್ಲದೇ ಸ್ಥಳದಲ್ಲಿ ಡ್ರಗ್ಸ್ ಕೂಡ ಪತ್ತೆಯಾಗಿತ್ತು. ಇದಾದ ನಂತರದಲ್ಲಿ ಸಮೀರ್ ವಾಂಖೇಡೆ ಅವರನ್ನ ಕೆಲವರು ಫಾಲೋ ಮಾಡ್ತಿದ್ದು ಜೀವ ಬೆದರಿಕೆಯಿದೆ ಎಂದು ಸಮೀರ್ ಅವರು ದೂರು ಕೂಡ ದಾಖಲು ಮಾಡಿದ್ರು.
ಬಂಧನವಾದ ನಂತರದಿಂದ ಶಾರುಖ್ ಪುತ್ರನನ್ನ ನೋಡಿರಲಿಲ್ಲ. ಇತ್ತೀಚೆಗೆ ಅಂದ್ರೆ ಅಕ್ಟೋಬರ್ 21 ಕ್ಕೆ ಪುತ್ರನನ್ನ ನೋಡಲು ಶಾರುಖ್ ಜೈಲಿಗೆ ತೆರಳಿದ್ದರು. ಕೆಲ ಕಾಲ ಮಗನ ಜೊತೆಗೆ ಮಾತನಾಡಿದ್ದ ಶಾರುಖ್ ಪುತ್ರನ ಮಾತುಗಳನ್ನ ಕೇಳಿ ಭಾವುಕರಾಗಿದ್ದರು ಎಂದು ವರದಿಯಾಗಿತ್ತು. ಈ ಸಂಬಂಧಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಅಂದ್ಹಾಗೆ ಅಕ್ಟೋಬರ್ 03ರಂದು ಆರ್ಯನ್ ಖಾನ್, ಅವರ ಗೆಳೆಯ ಅರ್ಬಾಜ್ ಸೇಠ್ ಮರ್ಚೆಂಟ್ ಹಾಗೂ ಮುನ್‌ಮುನ್ ಧಮೇಚಾ ಅವರುಗಳನ್ನು ಎನ್‌ಸಿಬಿ ಬಂಧಿಸಿತು. ಎನ್‌ಸಿಬಿಯು ಆರ್ಯನ್ ಖಾನ್ ಅನ್ನು ಬಂಧಿಸಿದಾಗ ಆರ್ಯನ್ ಬಳಿ ಯಾವುದೇ ಮಾದಕ ವಸ್ತು ಇರಲಿಲ್ಲ. ಆದರೆ ಅರ್ಬಾಜ್ ಮರ್ಚೆಂಟ್ ಬಳಿ ಸ್ವಲ್ಪ ಪ್ರಮಾಣದ ಚರಸ್ ದೊರೆತಿತ್ತು.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಪುತ್ರನನ್ನ ಶಾರುಖ್ ಭೇಟಿಯಾಗಿ ಬಂದ ದಿನವೇ ಶಾರುಖ್ ಖಾನ್ ಹಾಗೂ ಅನನ್ಯಾ ಪಾಂಡೆ ಮನೆಗಳ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಬಗ್ಗೆಗಿನ ವಿಡಿಯೋಗಳು ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದಾದ ನಂತರದಲ್ಲಿ ಅನನ್ಯಾ ಪಾಂಡೆ ವಿರುದ್ಧ ಡ್ರಗ್ ಕೇಸ್ ಸಂಬಂಧಿತ ಅನುಮಾನಗಳು ಹುಟ್ಟಿಕೊಂಡಿದ್ವು. ಆದ್ರೆ ಇದಕ್ಕೆಲ್ಲಾ ಅನನನ್ಯಾ ಪಾಂಡೆ ಸ್ಪಷ್ಟನೆ ನೀಡಿದ್ದರು.
ಜಾಮೀನು ಅರ್ಜಿಯನ್ನು ವಿಶೇಷ ಡ್ರಗ್ಸ್ ಕೋರ್ಟ್ ತಿರಸ್ಕರಿಸಿದ ನಂತರ ಆರ್ಯನ್ ಖಾನ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಜೈಲಿನಲ್ಲಿದ್ದಾರೆ. ಮತ್ತೊಂದೆಡೆ ಬಾಂಬೆ ಹೈಕೋರ್ಟ್ ಮೊರೆ ಹೋಗುವುದಾಗಿ ಆರ್ಯನ್ ಪರ ವಕೀಲರು ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗಳ ನಡುವೆ ಆರ್ಯನ್ ಖಾನ್ ತಾಯಿ ಗೌರಿ ಖಾನ್ ತೀರ ಮಾನಸಿಕವಾಗಿ ನೊಂದಿದ್ದಾರೆ ಎನ್ನಲಾಗ್ತಿದೆ.
ಹಿರಿಯ ವಕೀಲರಾದ ಸತೀಶ್ ಮನೆಶಿಂಡೆ ಮತ್ತು ಅಮಿತ್ ದೇಸಾಯಿ ಅವರನ್ನು ಒಳಗೊಂಡ ಆರ್ಯನ್ ಖಾನ್ ಪರ ಕಾನೂನು ತಂಡವು ಆರ್ಯನ್ ಜಾಮೀನು ಕೊಡಿಸುವುದಕ್ಕೆ ಶತಾಯಗತಾಯ ಪ್ರಯತ್ನ ಮಾಡ್ತಿದೆ. ಆರ್ಯನ್ ಪರ ವಕೀಲರ ವಾದಗಳೇನು..? ಆತನಿಂದ ಯಾವುದೇ ಮಾದಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿಲ್ಲ. ಆಪಾದಿತ WhatsApp ಚಾಟ್‌ಗಳು ಪ್ರಸ್ತುತ ಪ್ರಕರಣಕ್ಕೆ ಸಂಪರ್ಕ ಹೊಂದಿಲ್ಲ
ನಿಜವಾಗಿದ್ದರೂ, ಆರೋಪಗಳು ‘ಸಣ್ಣ ಪ್ರಮಾಣ’ ಮತ್ತು ‘ಬಳಕೆ’ಗೆ ಮಾತ್ರ ಸಂಬಂಧಿಸಿವೆ ಎಂಬುದು ಆರ್ಯನ್ ಪರ ವಕೀಲರ ವಾದಗಗಳು
NCB ವಾದವೇನು..?
ಆರ್ಯನ್‌ನ ಸ್ನೇಹಿತ ಅರ್ಬಾಜ್ ಮರ್ಚೆಂಟ್‌ನಿಂದ ವಶಪಡಿಸಿಕೊಂಡ ಡ್ರಗ್ಸ್
ಇಬ್ಬರಿಗೂ WhatsApp ಚಾಟ್‌ಗಳು ‘ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ’ಯನ್ನು ಸೂಚಿಸುತ್ತವೆ
ಆರ್ಯನ್ ಖಾನ್ ಪಿತೂರಿಯಲ್ಲಿ ಭಾಗಿಯಾಗಿದ್ದರಿಂದ ಪತ್ತೆಯಾದ ಡ್ರಗ್ಸ್ ಪ್ರಮಾಣವು ಅಪ್ರಸ್ತುತವಾಗಿದೆ.
ಆರೋಪಿಗಳ ಬಿಡುಗಡೆಯಿಂದ ತನಿಖೆಗೆ ಅಡ್ಡಿಯಾಗುತ್ತದೆ ಎಂಬುದು NCB ವಾದ
ಪ್ರಕರಣ ಸಂಬಂಧ ಯಾರೆಲ್ಲಾ ಯಾವ ರೀತಿ ಪ್ರತಿಕ್ರಿಯಿಸಿದ್ರು..?
ಬಂಧನದ ನಂತರ ಖಾನ್ ಕುಟುಂಬ ಬಹಿರಂಗವಾಗಿ ಏನನ್ನೂ ಹೇಳಿಲ್ಲ. ಆದಾಗ್ಯೂ, ಕೆಲವು ಬಾಲಿವುಡ್ ತಾರೆಯರು ಮತ್ತು ರಾಜಕಾರಣಿಗಳಿಂದ ಪ್ರತಿಕ್ರಿಯೆಗಳು ಬಂದಿವೆ.
ನಟ ಸುನೀಲ್ ಶೆಟ್ಟಿ ಈ ಬಗ್ಗೆ ಮಾತನಾಡಿ ಆರ್ಯನ್ ಖಾನ್ ಇನ್ನೂ ಮಗು.. ಉಸಿರಾಡಲು ಬಿಡಿ. ನೀವಾಗಿಯೇ ತೀರ್ಮಾನಕ್ಕೆ ಹೋಗಬೇಡಿ ಎಂದು ಕೇಳಿಕೊಂಡಿದ್ದರು.
ಚಿತ್ರ ನಿರ್ದೇಶಕಿ ಪೂಜಾ ಭಟ್ ಟ್ವಿಟ್ಟರ್‌ನಲ್ಲಿ “ನಾನು ನಿಮ್ಮೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇನೆ. ಶಾರುಖ್. ಇದು ಕೂಡ ಹಾದುಹೋಗುತ್ತದೆ” ಎಂದಿದ್ರು.
ನಟ ಹೃತಿಕ್ ರೋಷನ್ ಇನ್ಸ್ಟಾಗ್ರಾಮ್ ನಲ್ಲಿ ಆರ್ಯನ್ ಅವರನ್ನು ಉದ್ದೇಶಿಸಿ ಬರೆದ ಮನದಾಳದ ಪತ್ರವನ್ನು ಪೋಸ್ಟ್ ಮಾಡಿದ್ರು. “ದೇವರು ಕರುಣಾಮಯಿ. ಅವರು ಕಠಿಣ ಪರಿಸ್ಥಿತಿಗಳನ್ನ ಎದುರಿಸುವ ಶಕ್ತಿ ಹೊಂದಿರುವವರತ್ತ ಮಾತ್ರ ಕಠಿಣವಾದ ಚೆಂಡುಗಳನ್ನು ನೀಡುತ್ತಾರೆ ಎಂದಿದ್ದರು.
ನಿರ್ದೇಶಕರಾದ ಫರಾ ಖಾನ್ ಮತ್ತು ಕರಣ್ ಜೋಹರ್ ಸೇರಿದಂತೆ ಇತರರು ಮುಂಬೈನ ಬಾಂದ್ರಾದಲ್ಲಿರುವ ಖಾನ್ ಕುಟುಂಬದ ಮನೆಯಾದ ಮನ್ನತ್‌ಗೆ ಭೇಟಿ ನೀಡಿ ಧೈರ್ಯ ತುಂಬಿದ್ರು. ಅಷ್ಟೇ ಅಲ್ಲ ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಕೂಡ ಶಾರುಖ್ ಮನೆಗೆ ಭೇಟಿ ಕೊಟ್ಟಿದ್ರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರ್ಯನ್ ಖಾನ್ ಅವರ ಮುಸ್ಲಿಂ ಉಪನಾಮದಿಂದಾಗಿ ಕಾನೂನು ಜಾರಿ ಸಂಸ್ಥೆಗಳಿಂದ ಗುರಿಯಾಗುತ್ತಿದ್ದಾರೆ ಎಂದು ಹೇಳಿದ್ದರು. ಇತ್ತ ಪ್ರಕರಣದ ಕುರಿತು ಕೇಳಲಾದ ಪ್ರಶ್ನೆಗೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು “ಧ್ವನಿಯಿಲ್ಲದ ಮತ್ತು ದುರ್ಬಲರಿಗಾಗಿ ಹೋರಾಡುತ್ತೇನೆ, ಅವರ ತಂದೆ ಶಕ್ತಿಶಾಲಿಗಳಿಗಾಗಿ ಅಲ್ಲ” ಎಂದು ಹೇಳಿದ್ದರು.
ಏತನ್ಮಧ್ಯೆ, ಮಹಾರಾಷ್ಟ್ರದ ಸಚಿವ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ನವಾಬ್ ಮಲಿಕ್ ಅವರು ಕ್ರೂಸ್ ಮೇಲೆ ಎನ್ಸಿಬಿಯ ದಾಳಿಯು ‘ನಕಲಿ’ ಎಂದು ಆರೋಪಿಸಿದರು ಮತ್ತು ಬಿಜೆಪಿಯು
ಸರ್ಕಾರ ಮತ್ತು ಬಾಲಿವುಡ್ ಅನ್ನು ಮಾನನಷ್ಟಗೊಳಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತಿದೆ” ಎಂದು ಆರೋಪಿಸಿದ್ದರು.
ಮುಂಬೈನ ಥಿಯೇಟರ್ ಗಳಲ್ಲಿ “ವೇನಂ” ಸೀಕ್ವೆಲ್ ರಿಲೀಸ್ – ಸಿನಿಪ್ರಿಯರು ಖುಲ್ ಖುಷ್