NCB ಕಚೇರಿಗೆ ಭೇಟಿ ನೀಡಿದ್ದ ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ..!
ಮುಂಬೈ : ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಪುತ್ರ ಆರ್ಯನ್ ಖಾನ್ ಡ್ರಗ್ ಲಿಂಕ್ ಕೇಸ್ ನಲ್ಲಿ ಬಂಧನಕ್ಕೆ ಒಳಗಾಗಿದ್ದು ಈವರೆಗೂ ಜೈಲಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದೀಗ NCB ಕಚೇರಿಗೆ ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ನೀಡಿದ್ದಾಗಿ ವರದಿಯಾಗಿದೆ. ಕೈನಲ್ಲಿ ಕೆಲ ದಾಖಲಾತಿಗಳನ್ನ ಹಿಡಿದು ದಕ್ಷಿಣ ಮುಂಬೈನಲ್ಲಿರುವ ಬಲ್ಲಾರ್ಡ್ ಎಸ್ಟೇಟ್ ನಲ್ಲಿರುವ NCB ಕಚೇರಿಗೆ ತೆರಳಿದ್ದರು ಎಂಬ ವಿಚಾರ ಗೊತ್ತಾಗಿದೆ. ನಂತರ ಕಚೇರಿಯಿಂದ ಒಂದು ಗಂಟೆಯ ನಂತರ ವಾಪಸ್ ತೆರಳಿದ್ದಾಗಿ ವರದಿಯಾಗಿದೆ.
ಆರ್ಯನ್ ಖಾನ್ ಜಾಮೀನು ಅರ್ಜಿ ಸತತವಾಗಿ ತಿರಸ್ಕಾರವಾಗುತ್ತಲೇ ಇದೆ. ಅಕ್ಟೋಬರ್ 20 ರಂದು ಮತ್ತೆ ಮುಂಬೈನ ವಿಶೇಷ ನ್ಯಾಯಾಲಯವು ಆರ್ಯನ್ ಖಾನ್ ಜಾಮೀನು ಅರ್ಜಿ ವಜಾಗೊಳಿಸಿದೆ. ಹೀಗಾಗಿ ಆರ್ಯನ್ ಈವರೆಗೂ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಅಕ್ಟೋಬರ್ 3ರಂದು ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರ ನೆರವಿನೊಂದಿಗೆ, ಎನ್ಸಿಬಿಯ ಮುಂಬೈ ಘಟಕವು ನಗರ ಕರಾವಳಿಯಲ್ಲಿ ಒಂದು ಐಶಾರಾಮಿ ಕ್ರೂಸ್ ಹಡಗಿನಲ್ಲಿ ಪಾರ್ಟಿ ನಡೆಸುತ್ತಿದ್ದ ವೇಳೆ ದಾಳಿ ಮಾಡಿತು. ಈ ವೇಳೆ ಆರ್ಯನ್ ಖಾನ್ ಮತ್ತು ಇತರ ಅನೇಕರನ್ನು ಈ ವೇಳೆ ಬಂಧಿಸಲಾಗಿತ್ತು.
ಆರ್ಡರ್ ಮಾಡಿದ್ದು 70,000 ರೂ ಐಪೋನ್ – ಬಂದಿದ್ದು 10 ರುಪಾಯಿಯ ಸೋಪ್.
ಐಪಿಎಲ್ ತಂಡ ಖರೀದಿಗೆ ರಣವೀರ್ – ದೀಪಿಕಾ ದಂಪತಿ ಪ್ಲಾನ್..!
#777 ಚಾರ್ಲಿ ಶೂಟಿಂಗ್ ಮುಕ್ತಾಯ – ಭಾವುಕರಾದ ಚಿತ್ರತಂಡ.